ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಚಾರಣೆಗೆ ಬರುವಂತೆ ದುನಿಯಾ ವಿಜಯ್‌ಗೆ ಅಣ್ಣಾಮಲೈ ಬುಲಾವ್‌

|
Google Oneindia Kannada News

ಬೆಂಗಳೂರು, ನವೆಂಬರ್ 03: ದುನಿಯಾ ವಿಜಯ್ ವಿರುದ್ಧ 107 ಸೆಕ್ಷನ್‌ ಹಾಕಿ ಒಂದು ವಾರ ಆಗಿದ್ದರೂ ಸಹ ಠಾಣೆಗೆ ಬಂದು ಮುಚ್ಚಳಿಕೆ ಬರೆದುಕೊಡದ ಕಾರಣ ಅಣ್ಣಾಮಲೈ ಅವರು ದುನಿಯಾ ವಿಜಯ್‌ಗೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ.

ಜೈಲಿನಿಂದ ಬಿಡುಗಡೆ, ಪತ್ನಿ ತಬ್ಬಿಕೊಂಡು ಕಣ್ಣೀರಿಟ್ಟ ದುನಿಯಾ ವಿಜಯ್ ಜೈಲಿನಿಂದ ಬಿಡುಗಡೆ, ಪತ್ನಿ ತಬ್ಬಿಕೊಂಡು ಕಣ್ಣೀರಿಟ್ಟ ದುನಿಯಾ ವಿಜಯ್

ದುನಿಯಾ ವಿಜಯ್ ಹಾಗೂ ನಾಗರತ್ನ ಕುಟುಂಬದವರು ಪದೇ ಪದೇ ಶಾಂತಿ ಭಂಗದ ಕಾರ್ಯ ಮಾಡುತ್ತಿರುವ ಕಾರಣ ಅವರಿಗೆ ನೊಟೀಸ್ ಅನ್ನು ದಕ್ಷಿಣ ವಿಭಾಗದ ಪೊಲೀಸ್ ಮುಖ್ಯಾಧಿಕಾರಿ ಅಣ್ಣಾಮಲೈ ನೊಟೀಸ್ ಜಾರಿ ಮಾಡಿದ್ದರು.

ದುನಿಯಾ ವಿಜಯ್ ಮೊದಲ ಪತ್ನಿಗಾಗಿ ಪೊಲೀಸರ ಹುಡುಕಾಟ, ಅಣ್ಣಾಮಲೈ ಖಡಕ್ ವಾರ್ನಿಂಗ್‌ದುನಿಯಾ ವಿಜಯ್ ಮೊದಲ ಪತ್ನಿಗಾಗಿ ಪೊಲೀಸರ ಹುಡುಕಾಟ, ಅಣ್ಣಾಮಲೈ ಖಡಕ್ ವಾರ್ನಿಂಗ್‌

107 ಸೆಕ್ಷನ್‌ ಹೇರಿದ್ದರೂ ಸಹ ದುನಿಯಾ ವಿಜಯ್ ಠಾಣೆಗೆ ಬಂದು ಮುಚ್ಚಳಿಕೆ ಪತ್ರ ಬರೆದುಕೊಡದ ಕಾರಣ ಇದೀಗ ವಿಜಯ್‌ಗೆ ನೊಟೀಸ್ ಕಳುಹಿಸಿದ್ದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಹೇಳಿದ್ದಾರೆ ಅಣ್ಣಾಮಲೈ.

Police officer Annamalai cals Duniya Vijay to inquiry

ಪಾನಿಪುರಿ ಕಿಟ್ಟಿ ಪ್ರಕರಣ ಆದಾಗಿನಿಂದಲೂ ದುನಿಯಾ ವಿಜಯ್ ಕುಟುಂಬ ಗಲಾಟೆ ತಾರಕಕ್ಕೇರಿದ್ದು, ಅದು ನಿಯಂತ್ರಣಕ್ಕೆ ಬರುವ ಸುಳಿವೇ ಸಿಗುತ್ತಿಲ್ಲ. ಒಮ್ಮೆ ನಾಗರತ್ನ ದೂರು ನೀಡಿದರೆ ಮತ್ತೊಮ್ಮೆ ದುನಿಯಾ ವಿಜಯ್ ದೂರು ನೀಡುತ್ತಿದ್ದರು ಸತತವಾಗಿ ಒಬ್ಬರ ಮೇಲೋಬ್ಬರ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದರು.

ನಟ ದುನಿಯಾ ವಿಜಯ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು ನಟ ದುನಿಯಾ ವಿಜಯ್‌ಗೆ ಷರತ್ತು ಬದ್ಧ ಜಾಮೀನು ಮಂಜೂರು

ಇದರಿಂದ ಬೇಸತ್ತಿದ್ದ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಶಾಂತಿಗೆ ಭಂಗ ತರುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಡಬೇಕೆಂದು ಅಣ್ಣಾಮಲೈ ತಿಳಿಸಿದ್ದರು ಆದರೆ ದುನಿಯಾ ವಿಜಯ್‌ ಮುಚ್ಚಳಿಕೆ ಬರೆದುಕೊಟ್ಟಿರಲಿಲ್ಲ ಹಾಗಾಗಿ ಈಗ ನೊಟೀಸ್ ನೀಡಿದ್ದಾರೆ. ದುನಿಯಾ ವಿಜಯ್ ಹಾಗೂ ಕುಟುಂಬ ಸದಸ್ಯರು ವಿಚಾರಣೆಗೆ ಹಾಜರಾಗಬೇಕಾಗಿದೆ.

English summary
Bengaluru South division police SP Annamalai calls Duniya Vijay and family to attend inquiry. Annamalai imposed section 107 against Duniya Vijay and family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X