ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ವೈಟ್ ಫೀಲ್ಡ್ ನಲ್ಲಿ ಸಿಗ್ನಲ್ ಫ್ರೀ ಪ್ರಯಾಣ

|
Google Oneindia Kannada News

ಬೆಂಗಳೂರು, ಡಿ. 2: ಟ್ರಾಫಿಕ್ ಸಮಸ್ಯೆಯಿಂದ ತತ್ತರಿಸಿರುವ ನಗರದ ವೈಟ್ ಫೀಲ್ಡ್ ಭಾಗದ ಜನರು ಇನ್ನು ಸಿಗ್ನಲ್ ತಲೆಬಿಸಿಯಿಲ್ಲದೆ ಮನೆಗೆ ತೆರಳಬಹುದು. ಪೊಲೀಸ್ ಇಲಾಖೆ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದ್ದು 6 ಕಿಮೀ ರಸ್ತೆಯನ್ನು ಒನ್ ವೇ ಮಾಡಲು ತೀರ್ಮಾನಿಸಿದೆ.

ವೈಟ್ ಫೀಲ್ಡ್ ಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಈ ಬಗ್ಗೆ ಮಾಹಿತಿ ಪಡೆದರು. ಅಲ್ಲದೇ ಅಧಿಕಾರಿಗಳು ಮತ್ತು ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿದರು.[ಕಾರು ನುಗ್ಗಿಸಿದ ವಾಯುಸೇನೆ ಅಧಿಕಾರಿ ಹೆಂಡತಿ]

bengaluru

6 ಕಿಮೀ ರಸ್ತೆಯನ್ನು ಒನ್ ವೇ ಮಾಡುವುದು ಉತ್ತಮ. ಒಲ್ಡ್ ಬಿಗ್ ಬಝಾರ್ ದಿಂದ ಹೊಸ ವ್ಯವಸ್ಥೆ ಆರಂಭವಾಗಲಿದೆ. ವಾಹನಗಳು ಐಟಿಪಿಎಲ್ ಮುಖ್ಯ ರಸ್ತೆ, ವೈಟ್ ಫೀಲ್ಡ್ ರಸ್ತೆ ಮೂಲಕ ಹಾದು ಗ್ರಾಫೈಟ್ ಇಂಡಿಯಾ ಜಂಕ್ಷನ್ ಲ್ಲಿ ಹೊರಬೀಳಬೇಕು. ಇಲ್ಲೊಂದು ಮಾರ್ಗ ಬದಲಾವಣೆ ನೀಡಲಾಗುತ್ತಿದ್ದು ಕೆ.ಆರ್.ಪುರಂ ಕಡೆ ತೆರಳುವವರು ದಿಕ್ಕು ಬದಲಿಸಬಹುದು.

ಈ ವ್ಯವಸ್ಥೆ 3 ದೊಡ್ಡ ಸಿಗ್ನಲ್ ಗಳನ್ನು ತಪ್ಪಿಸುತ್ತದೆ. ಗ್ರಾಫೈಟ್ ಇಂಡಿಯಾ, ಹೂಡಿ ಮತ್ತು ಒಲ್ಡ್ ಬಿಗ್ ಬಜಾರ್ ಸಿಗ್ನಲ್ ತಪ್ಪುತ್ತದೆ. ಪ್ರತಿಯೊಂದು ಸಿಗ್ನಲ್ ಪಾಸ್ ಮಾಡಲು ಅರ್ಧ ಗಂಟೆಗೂ ಹೆಚ್ಚು ಕಾಲ ಹಿಡಿಯುತ್ತಿರುವುದು ದಿನನಿತ್ಯದ ವಿದ್ಯಮಾನ. ಹೊಸ ವ್ಯವಸ್ಥೆಯಿಂದ ಸುಧಾರಣೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವ್ಯವಸ್ಥೆ ಜಾರಿಯಿಂದ ಈ ಭಾಗದಲ್ಲಿ ಎರಡು ಮುಖ್ಯ ಸಿಗ್ನಲ್ ಗಳು ಮಾತ್ರ ಉಳಿದುಕೊಳ್ಳುತ್ತವೆ. ಕುಂದಲಹಳ್ಳಿ ಮತ್ತು ಹೋಪ್ ಫಾರ್ಮ್ ಸಿಗ್ನಗಳನ್ನು ದಾಟಿದರೆ ಸಾಕಾಗುತ್ತದೆ. ರೆಸಿಡೆನ್ಸಿ ಮತ್ತು ರಿಚ್ ಮಂಡ್ ರಸ್ತೆಯಲ್ಲಿ ಇಂಥ ಪ್ರಯೋಗ ಮಾಡಲಾಗಿದ್ದು ಇದೀಗ ವೈಟ್ ಫೀಲ್ಡ್ ಗೂ ಅಳವಡಿಸಲಾಗುತ್ತಿದೆ.

English summary
After being partially successful in easing traffic in Whitefield by imposing a set of diversions, the city police are now mulling over making a six-km loop one-way and signal-free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X