India
 • search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸಿಪಿ ವಿರುದ್ದ ಚಾಲಕನ ನೋವಿನ ಅರ್ಜಿ ಸಖತ್ ವೈರಲ್!

|
Google Oneindia Kannada News

ಬೆಂಗಳೂರು, ಜೂನ್ 27: ಪೊಲೀಸ್ ಇಲಾಖೆ ಅಂದರೆ ಅದು ಶಿಸ್ತಿನ ಇಲಾಖೆ. ತನ್ನ ಮೇಲಿನ ಅಧಿಕಾರಿ ಹೇಳಿದ್ದನ್ನು ಚಾಚು ತಪ್ಪದೇ ಕರ್ತವ್ಯವನ್ನು ನಿರ್ವಹಿಸಲೇಬೇಕು. ತನ್ನ ಮಾತನ್ನು ಕೇಳಲಿಲ್ಲ ಎಂದರೇ ಪೊಲೀಸ್ ಇಲಾಖೆಯಲ್ಲಿ ಶಿಸ್ತಿನ ಕ್ರಮವನ್ನು ಕೈಗೊಳ್ಳಲಾಗುತ್ತದೆ. ತನ್ನ ಮೇಲಾಧಿಕಾರಿ ವಿರುದ್ಧ ಚಾಲಕನೊಬ್ಬನ ದೂರು ಸಖತ್ ವೈರಲ್ ಆಗಿದೆ.

ಪೊಲೀಸ್ ಎಂಬ ಶಿಸ್ತಿನ ಇಲಾಖೆಯಲ್ಲಿದ್ದಾರೆ ಕಾಡುವ ಉಪ ಪೊಲೀಸ್ ಆಯುಕ್ತರು ಅಶೋಕ್ ಆರ್ ಜುಂಜರವಾಡ. ತನ್ನ ಅಧೀನದಲ್ಲಿ ಕರ್ತವ್ಯ ನಿರ್ವಹಿವವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರಂತೆ. ರಜೆಯನ್ನೇ ನೀಡದೇ ಕರ್ತವ್ಯಕ್ಕೆ ಹಾಜರಾಗುವಂತೆ ಕಿರಿಕಿರಿ ಮಾಡುತ್ತಿದ್ದಾರೆ. ತನಗೊಂದು ವಾಹನ ತನ್ನ ಮನೆಗೊಂದು ವಾಹನ ಉಪಯೋಗಿಸುತ್ತಿರುವ ಆರೋಪವೂ ಕೇಳಿ ಬಂದಿದೆ.

ಮಕ್ಕಳನ್ನು ಶಾಲೆಗೆ ಬಿಡಲು ಬೇಕು ವಾಹನ ಮತ್ತು ಸಿಬ್ಬಂದಿಯನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಕೇಳಿ ಬಂದಿದೆ. ತನ್ನ ಚೀಪ್ ಚಾಲಕನಿಗೆ ಇನ್ನಿಲ್ಲದಂತೆ ಕಾಟಕೊಡುತ್ತಿರುವ ವಿಧಾನಸೌಧ ಡಿಸಿಪಿಯ ವರ್ತನೆಗೆ ಬೇಸತ್ತ ಚಾಲಕನಿಂದ ಡಿಸಿಪಿ ಅಶೋಕ್ ಆರ್. ಜುಂಜರವಾಡ ವಿರುದ್ದ ದೂರನ್ನು ನೀಡಿದ್ದಾನೆ. ಅದು ಡಿಸಿಪಿ ವಿರುದ್ದ ಬೇರ್ಯಾರಿಗೋ ಕೊಟ್ಟಿರುವ ದೂರಲ್ಲ ವಿಧಾನ ಸೌಧ ಡಿಸಿಪಿ ಅಶೋಕ್ ಆರ್ ಜುಂಜರವಾಡ ವಿರುದ್ದ ಅವರಿಗೆ ದೂರನ್ನು ನೀಡಲಾಗಿದೆ.

ರಜೆ ನೀಡದ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರು

ರಜೆ ನೀಡದ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರು

ವಿಧಾನಸೌಧ ಡಿಸಿಪಿ ಅಶೋಕ್ ಆರ್ ಜುಂಜರವಾಡ ಮೇಲೆ ಚಾಲಕ ದೂರು ನೀಡಿದ್ದಾರೆ. ರಜೆ ನೀಡದ ಮಾನಸಿಕ ಹಿಂಸೆ ನೀಡುತ್ತಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಚಾಲಕನ ಕೆಲಸ ಕೇವಲ ಆರು ಗಂಟೆಯಾದರೂ ನಿತ್ಯ 12-13ಗಂಟೆ ಕೆಲಸ ಮಾಡಿಸಿಕೊಳ್ಳುತ್ತಿರುವ ಆರೋಪ ಕೇಳಿ ಬಂದಿದೆ. ಕರ್ತವ್ಯದ ಸಮಯದಲ್ಲಿ ಏನಾದರೂ ಅನಾಹುತವಾದರೇ ಡಿಸಿಪಿ ಜವಾಬ್ದಾರಿ ಎಂದು ನೊಂದ ಚಾಲಕ ತನ್ನ ಅರ್ಜಿಯಲ್ಲಿ ಬರೆದಿದ್ದಾನೆ. ತನಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದು ನಿತ್ಯವೂ ಸಮಯ ಮೀರಿ ಕೆಲಸವನ್ನು ಮಾಡಿಸಲಾಗುತ್ತಿದೆ. ಕರ್ತವ್ಯದ ಸಮಯದಲ್ಲಿ ಯಾವುದಾದರು ಅಪಘಾತ ಸಂಭವಿಸಿದರೆ ಅದಕ್ಕೆ ಮಾನ್ಯರೇ ನೇರವಾದ ಹೊಣೆ ಎಂದು ಚಾಲಕ ಆರೋಪಿಸಿದ್ದಾರೆ.

ವಿಧಾನಸೌಧದ ಭದ್ರತಾ ಸಿಬ್ಬಂದಿಯ ಗೋಳು ಕೇಳೋರಿಲ್ಲ

ವಿಧಾನಸೌಧದ ಭದ್ರತಾ ಸಿಬ್ಬಂದಿಯ ಗೋಳು ಕೇಳೋರಿಲ್ಲ

ವಿಧಾನಸೌಧದ ಉಪಪೊಲೀಸ್ ಆಯುಕ್ತ ಅಶೋಕ್ ಆರ್ ಜುಂಜರವಾಡರ ಅಧೀನದಲ್ಲಿ ಕೆಲಸ ಮಾಡುವ ಅಥವಾ ಮಾಡುತ್ತಿರುವ ಸಿಬ್ಬಂದಿಯನ್ನು ಪ್ರಶ್ನಿಸಿದರೇ ಸಾಕು ಡಿಸಿಪಿಯವರ ಬಂಡವಾಳ ತಿಳಿಯಲಿದೆ. ಇದರಿಂದಾಗಿ ವಿಧಾನಸೌಧ ಭದ್ರತಾ ಸಿಬ್ಬಂದಿ ನಮ್ಮ ಗೋಳು ಕೇಳೋರಿಲ್ಲ ಸಾರ್ ಹೆಣಗಾಟ ಸಾಕಾಗಿದೆ ಎಂದು ಉದ್ಘಾರವನ್ನು ತೆಗೆಯುತ್ತಾರೆ. ಕೇವಲ ಚಾಲಕನಿಗಷ್ಟೇ ಕಾಟವಲ್ಲ, ಇತರ ಸಿಬ್ಬಂದಿಗೂ ತೊಂದರೆ ನೀಡುವ ಬಗ್ಗೆಯೂ ಆರೋಪ ಕೇಳಿಬಂದಿದೆ. ಮಹಿಳಾ ಸಿಬ್ಬಂದಿಗಳು ಆರೋಗ್ಯ ಸಮಸ್ಯೆ ಹೇಳಿಕೊಂಡರು ರಜೆಯನ್ನು ನೀಡುವುದಿಲ್ಲ. ಮಹಿಳಾ ಸಿಬ್ಬಂದಿಯ ಮಗುವಿಗೆ ಆರೋಗ್ಯ ಸಮಸ್ಯೆಯಿದ್ದಗಲೂ ರಜೆಯನ್ನು ಅಂಗಲಾಚಿ ಬೇಡಿಕೊಂಡರು ರಜೆಯನ್ನು ನೀಡಲಿಲ್ಲ ಎಂಬ ಆರೋಪವೂ ಡಿಸಿಪಿಯವರ ಮೇಲೆ ಕೇಳಿ ಬಂದಿದೆ.

16 ಐಪಿಎಸ್ ಅಧಿಕಾರಿಗಳು ವರ್ಗವಾದರೂ ಡಿಸಿಪಿ ವರ್ಗಾವಣೆಯಿಲ್ಲ

16 ಐಪಿಎಸ್ ಅಧಿಕಾರಿಗಳು ವರ್ಗವಾದರೂ ಡಿಸಿಪಿ ವರ್ಗಾವಣೆಯಿಲ್ಲ

ವಿಧಾನ ಸೌಧದ ಭದ್ರತಾ ಡಿಸಿಪಿಯಾಗಿರುವ ಅಶೋಕ್ ಆರ್ ಜುಂಜರವಾಡ ಕಳೆದ ಮೂರು ವರ್ಷಗಳಿಂದಲೂ ವಿಧಾನಸೌಧದಲ್ಲಿಯೇ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಹಲವಾರು ಸಿಬ್ಬಂದಿ ಇವರ ಅಧೀನದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ವರ್ಗಾವಣೆಯನ್ನು ಸಹ ಪಡೆದುಕೊಂಡಿದ್ದಾರೆ ಎಂಬ ಮಾತುಗಳು ಸಹ ಡಿಸಿಪಿ ವಿರುದ್ದ ಕೇಳಿ ಬಂದಿದೆ. ಇವರ ಅಧೀನದಲ್ಲಿ ಕೆಲಸ ಮಾಡುವ ಸಿಬ್ಬಂದಿ ಡಿಸಿಪಿಗೆ ನಿತ್ಯ ಹಿಡಿ ಶಾಪಹಾಕುತ್ತಿದ್ದಾರೆ. ಉತ್ತರ ಕರ್ನಾಟದವರಿಗೆ ರಜೆ ನೀಡಿ ದಕ್ಷಿಣದವರಿಗೆ ತಾರತಮ್ಯ ಮಾಡುತ್ತಾರೆ ಆ ಮೂಲಕ ಮಾನಸಿಕ ಹಿಂಸೆ ನೀಡುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಯಾರದ್ದು?

ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಯಾರದ್ದು?

ಹುದ್ದೆ ಯಾವುದೇ ಇರಲಿ ಮನುಷ್ಯ ಮನುಷ್ಯತ್ವವನ್ನು ಹೊಂದಿರಬೇಕು. ಮನುಷ್ಯ ನಿರಂತರವಾಗಿ ದುಡಿಯಲು ಯಂತ್ರವಲ್ಲ ಎಂಬುದನ್ನು ಪೊಲೀಸ್ ಇಲಾಖೆ ಮನಗಾಣಬೇಕು. ಶಿಸ್ತನ್ನು ಮೀರಬಾರದೆಂಬ ಕಾರಣಕ್ಕೆ ಚಾಲಕ ತನ್ನ ಇಲಾಖೆಯಲ್ಲೇ ಡಿಸಿಪಿ ಅಶೋಕ್ ಆರ್ ಜುಂಜರವಾಡ ವಿರುದ್ದ ಅವರ ಬಳಿಯೇ ದೂರನ್ನು ನೀಡಿದ್ದಾನೆ. ತನಗೆ ಮಾನಸಿಕ ಹಿಂಸೆ ನೀಡಿದ್ದು ಮಾತ್ರವಲ್ಲದೇ ಸರ್ಕಾರಿ ವಾಹನ ದುರುಪಯೋಗದ ಬಗ್ಗೆೆಯೂ ಸವಿಸ್ತಾರವಾಗಿ ಬರೆದಿದ್ದಾನೆ. ಇದೀಗ ಈ ಅರ್ಜಿ ವೈರಲ್ ಆಗಿದೆ. ಶಿಸ್ತಿನ ಇಲಾಖೆಯಲ್ಲಿ ಅಶಿಸ್ತು ಚಾಲಕನದ್ದೋ ಡಿಸಿಪಿಯದ್ದೋ ಎಂಬುದುನ್ನು ಇಲಾಖೆಯೇ ತನಿಖೆಯ ಮೂಲಕ ನಿರ್ಧರಿಸಬೇಕಿದೆ.

   ನಾನೇ ಅಂತಿದ್ದ ಗಾಯಕ್ವಾಡ್ ಗೆ ಪಾಠ ಕಲಿಸಿದ ಪಾಂಡ್ಯ | *Cricket | OneIndia Kannada
   English summary
   The police department is the discipline department. But a petition written by a driver against DCP claiming his pain is viral now. know more
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X