ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಳ್ಳತನ ಮಾಡಿದ ಚಿನ್ನವನ್ನು ಕಳ್ಳನ ಹೆಂಡತಿಗೆ ಕೊಟ್ಟಿದ್ದ ಪೊಲೀಸ್

|
Google Oneindia Kannada News

ಬೆಂಗಳೂರು, ಜೂನ್ 13: ಕದ್ದ ಚಿನ್ನವನ್ನು ಪೊಲೀಸ್ ಕಳ್ಳನ ಹೆಂಡತಿಗೆ ನೀಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಯಾರದ್ದೋ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಚಿನ್ನದಂಗಡಿಯಲ್ಲಿ ಅಡವಿಟ್ಟು ಸಾಲ ಪಡೆದ ಪ್ರಕರಣ ತನಿಖೆ ನಡೆಸಿದ್ದ ಪೊಲೀಸ್ ಇನ್‌ಸ್ಪೆಕ್ಟರ್, ಅದೇ ಚಿನ್ನಾಭರಣಗಳನ್ನು ಚಿನ್ನದಂಗಡಿಯಿಂದ ಜಪ್ತಿ ಮಾಡಿ ಕೋರ್ಟ್ ಆದೇಶದ್ ಮೂಲಕವೇ ಕಳ್ಳನ ಪತ್ನಿಗೆ ಕೊಡಿಸಿದ ವಂಚನೆ ಪ್ರಕರಣ ಇದಾಗಿದೆ.

ಟೆರೇಸ್‌ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ ಟೆರೇಸ್‌ನಿಂದ ಬಂದು ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದವನ ಸೆರೆ

2011ರ ಆಗಸ್ಟ್ 28ರಂದು ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಂಪಿಗೆಹಳ್ಳಿ ಠಾಣಾ ಇನ್‌ಸ್ಪೆಕ್ಟರ್ ನಂಜುಂಡೇಗೌಡ ಮರ್ಸಸ್ ಮುತ್ತೂಟ್ ಫಿನ್‌ಕಾರ್ಪ್ ಲಿಮಿಟೆಡ್ ರಾಜಾಜಿನಗರ ಶಾಖೆಯಿಂದ ಒಟ್ಟು 4,426 ಗ್ರಾಂ ತೂಕದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದರು.

Police inspector handed over Gold to thiefs wife

2012ರ ಮಾರ್ಚ್ 26 ರಂದು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಚಿನ್ನಾಭರಣಗಳನ್ನು ಹಾಜರುಪಡಿಸಿ ಅವುಗಳನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ಅನುಮತಿ ಪಡೆದಿದ್ದರು.

ಮುತ್ತೂಟ್ ಕಂಪನಿ 2011ರ ಸೆ.5ರಂದು ಮ್ಯಾಜಿಸ್‌ಟರೇಟ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ನಂಜುಂಡೇಗೌಡ ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಜಯಕುಮಾರ್ ಹಾಗೂ ಮೇಘರಾಜ್ ಎಂಬುವವರು ಸಾಲ ಪಡೆಯಲು ಖಾತರಿಯಾಗಿ ತಮ್ಮಲ್ಲಿ ಅಡಮಾನ ಇಟ್ಟಿದ್ದಾರೆ.

ಹೀಗಾಗಿ ಅವುಗಳನ್ನು ತಮ್ಮ ಸುಪರ್ಧಿಗೆ ಒಪ್ಪಿಸಲು ಕೋರಿದ್ದರು. ಅದಕ್ಕೆ ಆಕ್ಷೇಪಿಸಿದ್ದ ನಂಜುಂಡೇಗೌಡ, ತನಿಖೆಗೆ ಅಗತ್ಯವಿರುವ ಕಾರಣ ಮುತ್ತೂಟ್ ಕಂಪನಿಗೆ ಚಿನ್ನಾಭರಣ ನೀಡಬಾರದು ಎಂದು ಕೋರಿದ್ದರು.ಇದರಿಂದ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು.

ಕಳ್ಳನ ಪತ್ನಿಯಿಂದಲೇ ಅರ್ಜಿ: ನಂತರ 2012ರ ಫೆಬ್ರವರಿ 13ರಂದು ಪ್ರಕರಣದ ಮೊದಲನೇ ಆರೋಪಿ ಜಯಕುಮಾರ್ ಪತ್ನಿ ಎನ್ನಲಾದ ಹೆಪ್ ಝಿಬಾ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ನಂಜುಂಡೇಗೌಡ ಚಿನ್ನಾಭರಣಗಳನ್ನು ತಮ್ಮಿಂದ ವಶಪಡಿಸಿಕೊಂಡಿದ್ದು ಅವುಗಳನ್ನು ಹಿಂದಿರುಗಿಸಬೇಕೆಂದು ಕೋರಿದ್ದರು.

ಹೀಗಾಗಿ ಮ್ಯಾಜಿಸ್ಟ್ರೇಟ್ ಕೋರ್ಟ್ 30 ಲಕ್ಷ ಮೌಲ್ಯದ ಒಟ್ಟು 32 ಗ್ರಾಂ ಚಿನ್ನಾಭರಣಗಳನ್ನು ಅವರ ವಶಕ್ಕೆ ನೀಡಲು ತಿಳಿಸಿತ್ತು. ಈ ವಿಚಾರ ತಿಳಿದ ಮುತ್ತೂಟ್ ಚಿನ್ನಾಭರಣ ಹಿಂದಿರುಗಿಸುವಂತೆ ಕೋರಿ ಮತ್ತೆ ಕೋರ್ಟ್ ಮೆಟ್ಟಿಲೇರಿತ್ತು ಇದೀಗ ಸತ್ಯ ಬೆಳಕಿಗೆ ಬಂದಿದೆ.

ಪ್ರಕರಣವನ್ನು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಖುದ್ದಾಗಿ ತನಿಖೆ ನಡೆಸಬೇಕು. ಇಲ್ಲವೇ ಸಿಎಂಎಂ ಕೋರ್ಟ್‌ನ ಸಕ್ಷಮ ಅಧಿಕಾರಿಗೆ ತನಿಖಯ ಹೊಣೆ ಹೊರಿಸಬೇಕು. ಇನ್‌ಸ್ಪೆಕ್ಟರ್ ಮೂಲಕ ಪಡೆದ ಚಿನ್ನಾಭರಣಗಳನ್ನು ಕಳ್ಳನ ಪತ್ನಿಯು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಒಪ್ಪಿಸಬೇಕು ಎಂದು ಆದೇಶಿಸಿದೆ.

English summary
Police inspector allegedly handed over seized gold to thief wife. High Court initiates enquiry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X