ಕಾಶ್ಮೀರಿ ಯುವತಿಗೆ ಬೆಂಗಳೂರಲ್ಲಿ ಉದ್ಯೋಗ ಸಿಗಲು ಪೊಲೀಸ್ ಪೇದೆ ಕಾರಣ
ಬೆಂಗಳೂರು, ಜನವರಿ 10: ಓರ್ವ ಪೊಲೀಸ್ ಪೇದೆಯ ಸಹಾಯದಿಂದಾಗಿ ಕಾಶ್ಮೀರಿ ಯುವತಿಗೆ ಬೆಂಗಳೂರಲ್ಲಿ ಕೆಲಸ ದೊರೆತಿದೆ.
Recommended Video
ಬಿಜೆಪಿ
ಸಂಸದೆಗೆ
ಬೆವರಿಳಿಸಿದ
ಪ್ರಯಾಣಿಕರು
|
BJP
|
PRAGYA
THAKUR
|
ONEINDIA
KANNADA
ಯುವತಿ ಉದ್ಯೋಗ ಅರಸಿ ಕಾಶ್ಮೀರದಿಂದ ಬೆಂಗಳೂರಿಗೆ ಬಂದಿದ್ದಳು, ಮಾರ್ಗದಲ್ಲಿ ಮಾರ್ಕ್ಸ್ಕಾರ್ಡ್, ಆಧಾರ್ ಕಾರ್ಡ್, ಪಾಸ್ಪೋರ್ಟ್ ಎಲ್ಲವೂ ಇದ್ದ ಬ್ಯಾಗನ್ನು ಯಾರೋ ಕದ್ದಿದ್ದರು.
ಮಾನ್ಯತಾ ಟೆಕ್ ಪಾರ್ಕ್ ಬಳಿ ಗಸ್ತಿನಲ್ಲಿದ ಸಂಪಿಗೆಹಳ್ಳಿ ಠಾಣೆ ಪೊಲೀಸ್ ಪೇದೆ ಸದಾಶಿವ ಬೆಳಗಲಿ ಅವರಿಗೆ ಸ್ಥಳೀಯರು ಮರಿಯಾ ಕಳೆದುಕೊಂಡಿದ್ದ ಬ್ಯಾಗನ್ನು ನೀಡಿದರು. ಮರಿಯಾ ಫೋನ್ ನಂಬರ್ ಸಿಗದೇ ಇದ್ದುದ್ದರಿಂದ ಬೆಳಗಲಿ ಅಕ್ಕಪಕ್ಕದ ಠಾಣೆಗಳಿಗೆ ಮಾಹಿತಿ ನೀಡಿದ್ದರು.
ಮರುದಿನ ಮರಿಯಾ ಇ- ಲಾಸ್ಟ್ನಲ್ಲಿ ದೂರು ದಾಖಲಿಸ್ತಿದ್ದಂತೆ ಮರಿಯಾ ನಂಬರ್ ಪಡೆದ ಪೊಲೀಸ್ ಪೇದೆ, ಕೂಡಲೇ ಅವರಿಗೆ ಕರೆ ಮಾಡಿ ಕಳೆದುಕೊಂಡಿದ್ದ ದಾಖಲಾತಿಗಳನ್ನು ಹಿಂದಿರುಗಿಸಿದ್ದಾರೆ. ಇದೀಗ ಓರಿಜಿನಲ್ ಡಾಕ್ಯುಮೆಂಟ್ಸ್ ಸಲ್ಲಿಸಿ ಸಂದರ್ಶನದಲ್ಲಿ ಮರಿಯಾ ಆಯ್ಕೆಯಾಗಿದ್ದಾರೆ.
English summary
With the help of a policeman, a Kashmiri Girl got a job in Bengaluru.
Story first published: Friday, January 10, 2020, 14:52 [IST]