ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈದ್ಗಾ ಮೈದಾನದಲ್ಲಿ ಭಾರಿ ಪೊಲೀಸ್ ಭದ್ರತೆ- ಚಾಮರಾಜಪೇಟೆಯಲ್ಲಿ ಪೊಲೀಸ್ ಪಥಸಂಚಲನ

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಚಾಮರಾಜಪೇಟೆ ಆಟದ ಮೈದಾನ ಅಥವಾ ಈದ್ಗಾ ಮೈದಾನ ಕಂದಾಯ ಇಲಾಖೆಯ ಸುಪರ್ಧಿಗೆ ಸೇರಿದ್ದಾಗಿದೆ. ಸ್ವಾತಂತ್ರ್ಯೋತ್ಸದಲ್ಲಿ ಯಾರು ಧ್ವಜಾರೋಹಣವನ್ನು ಮಾಡಬೇಕು ಎಂಬುದುಕ್ಕೂ ಸ್ಪಷ್ಟನೆ ಸಿಕ್ಕಿದೆ. ಆದರೂ ಈ ಮೈದಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಪೊಲೀಸರು ಭಾರಿ ಭದ್ರತೆಯನ್ನು ಏರ್ಪಡಿಸಿದ್ದಾರೆ.

ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಚಾಮರಾಜಪೇಟೆ ಪೊಲೀಸರು ಹಿಂದೂ ಮುಖಂಡರು, ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು, ಮುಸ್ಲಿಂ ಮುಖಂಡರ ಶಾಂತಿ ಸಭೆಯನ್ನು ನಡೆಸಿದ್ದರು. ಶಾಂತಿ ಸುವ್ಯವಸ್ಥೆಗೆ ಭಂಗ ತರಬಾರದು ಎಂಬ ದೃಷ್ಠಿಯಿಂದ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಕಾನೂನು ಮೀರಿ ವರ್ತಿಸಿದರೇ ಕಠಿಣ ಕ್ರಮದ ಎಚ್ಚರಿಯನ್ನು ನೀಡಲಾಗಿದೆ.

ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಇನ್ನು 3 ದಿನವಷ್ಟೇ ಬಾಕಿಯಿದೆ. ಇದರಿಂದಾಗಿ ಈದ್ಗಾ ಮೈದಾನದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಳ ಮಾಡಲಾಗಿದೆ. ಪಶ್ಚಿಮ ವಿಭಾಗದ ಎಲ್ಲಾ ಇನ್ಸ್‌ಪೆಕ್ಟರ್ , ಎಸಿಪಿ ಸೇರಿದಂತೆ ಡಿಸಿಪಿ ಲಕ್ಷ್ಮಣ್ ನಿಂಬರಗಿ ಮತ್ತು ಪಶ್ಟಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಭಾರಿ ಬಂದೋಬಸ್ತ್‌ ಮಾಡಲಾಗಿದೆ.

 ಮೈದಾನದ ಭದ್ರತೆಗೆ ನಿಯೋಜನೆ

ಮೈದಾನದ ಭದ್ರತೆಗೆ ನಿಯೋಜನೆ

ಚಾಮರಾಜಪೇಟೆ ಆಟದ ಮೈದಾನ ಅಥವಾ ಈದ್ಗಾ ಮೈದಾನದಲ್ಲಿ ಪೊಲೀಸರನ್ನು ಭಾರೀ ಭದ್ರತೆಯನ್ನು ನಿಯೋಜನೆಯನ್ನು ಮಾಡಲಾಗಿದೆ. ಸುಮಾರು 600ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗಾಗಿ ನಿಯೋಜನೆಯನ್ನು ಮಾಡಲಾಗಿದೆ. ಪೊಲೀಸರ ಜೊತೆಗೆ ಸ್ಟಾಟ್ ತಂಡವನ್ನು ಸಹ ಹೆಚ್ಚುವರಿ ಭದ್ರತೆಗಾಗಿ ನಿಯೋಜನೆಯನ್ನು ಮಾಡಲಾಗಿದೆ. ಈ ಪೊಲೀಸ್ ತಂಡ ಸ್ವಾತಂತ್ರ್ಯೋತ್ಸವ ಮುಗಿಯುವ ತನಕ ಮೈದಾನದ ಸುತ್ತಮುತ್ತ ಗಸ್ತಿಗೆ ನಿಯೋಜನೆಯನ್ನು ಮಾಡಲಾಗಿದೆ.

 ಕಾನೂನು ಸುವ್ಯವಸ್ಥೆ ಮೀರದಂತೆ ವಾರ್ನಿಂಗ್

ಕಾನೂನು ಸುವ್ಯವಸ್ಥೆ ಮೀರದಂತೆ ವಾರ್ನಿಂಗ್

ಚಾಮರಾಜಪೇಟೆಯಯ ಮೈದಾನದಲ್ಲಿ ಸುಮಾರು 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆಯನ್ನು ಮಾಡಲಾಗಿತ್ತು. ಜನರಿಗೆ ಎಚ್ಚರಿಕೆ ಸಂದೇಶವನ್ನು ಸಲುಪಿಸಲು ಮತ್ತು ಕಾನೂನು ಮೀರಿದರೆ ತಕ್ಕ ಶಾಸ್ತಿಯಾಗುತ್ತದೆ ಎಂಬುದನ್ನು ಸಾರಲು ಪೊಲೀಸರು ಪಥಸಂಚಲನವನ್ನು ಚಾಮರಾಜ ಪೇಟೆಯ ರಸ್ತೆಗಳಲ್ಲಿ ಮಾಡಿದರು. ಆ ಮುಖಾಂತರವಾಗಿ ಯಾರು ಕಾನೂನಿಗಿಂತಲೂ ದೊಡ್ಡವರಲ್ಲ ಶಾಂತಿಯುತವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸೋಣ ಎಂಬ ಸಂದೇಶವನ್ನು ಸಹ ಸಾರಿದ್ದಾರೆ.

 ಪ್ರತಿನಿತ್ಯವೂ ಪೊಲೀಸರು ಗಸ್ತಿನಲ್ಲಿರ್ತಾರೆ

ಪ್ರತಿನಿತ್ಯವೂ ಪೊಲೀಸರು ಗಸ್ತಿನಲ್ಲಿರ್ತಾರೆ

ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, "ಈಗಾಗಲೆ ಪಥಸಂಚಲನ ಆರಂಭಿಸಿದೀವಿ ನಾಲ್ಕು ಕೆಎಸ್‌ಆರ್‍‌ಪಿ, ಸಿಎಆರ್ ಸಿಬ್ಬಂದಿ ಹಾಗು ಪೊಲೀಸರು ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. ಸುಮಾರು ಆರನೂರಕ್ಕೂ ಅಧಿಕ ಪೊಲೀಸರು ಇವತ್ತು ಪಥಸಂಚಲನ ಮಾಡ್ತಿದ್ದಾರೆ. ಯಾರು ದುಷ್ಕೃತ್ಯ ಮಾಡಬೇಕು ಅಂತಿದ್ದಾರೋ ಅವರಿಗೆ ಎಚ್ಚರಿಕೆ ಸಂದೇಶ ನೀಡಲಾಗುತ್ತಿದೆ. ಯಾವುದೇ ಗಲಾಟೆ ಇಲ್ಲದ ರೀತಿಯಲ್ಲಿ ಧ್ವಜಾರೋಹಣ ಮಾಡಬೇಕು. ಯಾವುದೇ ರೀತಿಯ ಗಲಭೆಗೆ ಆಸ್ಪದ ಇಲ್ಲ ಎಂದು ಎಚ್ಚರಿಕೆ ನೀಡಲಾಗುತ್ತಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ನಲ್ಲಿ ಧ್ವಜಾರೋಹಣ ಮಾಡಲಾಗುತ್ತದೆ. ಯಾರಿಗೆ ಕಾರ್ಯಕ್ರಮಕ್ಕೆ ಆಹ್ವಾನ ಇದ್ಯೋ ಅವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ಇಡಿ ಚಾಮರಾಜಪೇಟೆಗೆ ಪೊಲೀಸರ ಬಂದೋಬಸ್ತ್ ಮಾಡಲಾಗಿದೆ. ಪ್ರತಿನಿತ್ಯವೂ ಪೊಲೀಸರು ಗಸ್ತಿನಲ್ಲಿರ್ತಾರೆ" ಎಂದು ತಿಳಿಸಿದರು.

 ಅಸಿಸ್ಟೆಂಟ್ ಕಮೀಷನರ್ ರಿಂದ ಧ್ವಜಾರೋಹಣ

ಅಸಿಸ್ಟೆಂಟ್ ಕಮೀಷನರ್ ರಿಂದ ಧ್ವಜಾರೋಹಣ

ಬಿಬಿಎಂಪಿ ಎಲ್ಲಾ ದಾಖಲೆ ಪರಿಶೀಲನೆ ಮಾಡಿ ಕಂದಾಯ ಇಲಾಖೆಗೆ ನೀಡಿದ್ದಾರೆ. ಕಂದಾಯ ಇಲಾಖೆಯ ಜಾಗ ಅಂತ ಅಂತಿಮಗೊಳಿಸಲಾಗಿದೆ. ವಕ್ಫ್ ಬೋರ್ಡ್ ಆಸ್ತಿ‌ ಅಲ್ಲವೇ ಅಲ್ಲ. ಹಿಂದೆ ಕಂದಾಯ ಇಲಾಖೆ ಅಂತ ಇದೆ. ಈಗಲೂ ಕಂದಾಯ ಇಲಾಖೆಗೆ ಉಳಿದಿದೆ‌.ಈ ಸ್ವತ್ತು ಕಂದಾಯ ಇಲಾಖೆಯದ್ದು ಆಗಿದೆ. ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯ ಅಸಿಸ್ಟೆಂಟ್ ಕಮೀಷನರ್ ಧ್ವಜಾರೋಹಣ ಮಾಡಲಿದ್ದಾರೆ. ಪ್ರೊಟೋಕಾಲ್ ಪ್ರಕಾರ ಸ್ಥಳೀಯ ಎಂಎಲ್‌ಎ ಹಾಗೂ ಎಂಪಿ ಬರಬಹುದು. ಚಾಮರಾಜಪೇಟೆ ಜನರು ಕೂಡ ಭಾಗಿಯಾಗಬಹುದು ಎಂದು ಸಚಿವ ಅಶೋಕ ತಿಳಿಸಿದ್ದರು.

Recommended Video

World Elephant Day SPECIAL: cute baby elephant entered home because of flood | *India | Oneindia

English summary
Chamarajpet Playground or Idgah Maidan belongs to the Superintendent of Revenue Department. It has also been clarified who should do the flag hoisting in the Independence day. However, the police have arranged heavy security to ensure that no untoward incident takes place in this ground, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X