ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟೆಕ್ಕಿ ಕೊಲೆ ಪ್ರಕರಣ ಭೇದಿಸುವಾಗ ಪೊಲೀಸರಿಗೆ ಸಿಕ್ತು ಸ್ಫೋಟಕ ಮಾಹಿತಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 20: ಟೆಕ್ಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಷಡ್ಕ ಸೇರಿ ಒಂಭತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ನಾದಿನಿ ಓಲೈಸಿಕೊಳ್ಳಲು ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಉದ್ಯೋಗಿ ಸತ್ಯ ಪ್ರಸಾದ್ ವೆಂಕಟರಂಗ ನುನೆ ಅಲಿಯಾಸ್ ಸತ್ಯ 15 ಲಕ್ಷಕ್ಕೆ ತನ್ನ ಷಡ್ಕ ಲಕ್ಷ್ಮಣ್ ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದ ಎನ್ನುವುದು ಬಹಿರಂಗಗೊಂಡಿದೆ.

ಮದುವೆ ವಿಳಂಬದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಟೆಕ್ಕಿಮದುವೆ ವಿಳಂಬದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಟೆಕ್ಕಿ

ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಎನ್ ದಿನೇಶ್, ಪತ್ನಿ ಸಯೀದಾ ಅಲಿಯಾಸ್ ಸವಿತಾ ಹಾಗೂ ಸುಪಾರ ಹಂತಕರಾದ ಹಳೇ ಬೈಯಪ್ಪನಹಳ್ಳಿ ನಿವಾಸಿ ಪ್ರಶಾಂತ್ , ಕಗ್ಗದಾಸಪುರದ ಪ್ರೇಮ್ ಕುಮಾರ್ , ಶಿಡ್ಲಘಟ್ಟ ತಾಲೂಕಿನ ಕಲ್ಯಾಪುರದ ಲೋಕೇಶ್ , ಕುಶಾಂತ್, ಸಂತೋಷ್‌ನನ್ನು ಬಂಧಿಸಲಾಗಿದೆ.

Police Get Explosive Information when Interrogating The Techie Murder Case

ಮಹದೇವಪುರ ರಿಂಗ್ ರಸ್ತೆಯಲ್ಲಿ ಫೆ. 3ರಂದು ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದ ಲಕ್ಷ್ಮಣ್ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಇನ್‌ಸ್ಪೆಕ್ಟರ್ ಅಶ್ವತ್ಥ ನಾರಾಯಣಸ್ವಾಮಿ ತಂಡ ಪ್ರತ್ಯಕ್ಷದರ್ಶಿಗಳು ನೀಡಿದ್ದ ಹೇಳಿಕೆ ಆಧರಿಸಿ ಹಂತಕರನ್ನು ಬಂಧಿಸಿದೆ.

ಆಂಧ್ರಪ್ರದೇಶದ ನಲ್ಲೂರಿನ ಸತ್ಯ ಹಾಗೂ ಗುಂಟೂರಿನ ಲಕ್ಷ್ಮಣ್ ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದು ಅಕ್ಕ-ತಂಗಿಯನ್ನು ವಿವಾಹವಾಗಿದ್ದರು. ಆತ ತನ್ನ ಪತ್ನಿ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ, ಮದುವೆ ನಂತರ ತನ್ನ ಕಿರಿಯ ನಾದಿನಿ ಮೇಲೆ ಮೋಹಿತನಾಗಿದ್ದ ಸತ್ಯ ಪ್ರೇಮ ನಿವೇದನೆಯನ್ನೂ ಮಾಡಿದ್ದ, ಇದಕ್ಕೆ ನಾದಿನಿ ಆಕ್ಷೇಪ ವ್ಯಕ್ತಪಡಿಸಿದ್ದಳು.

2016ರಲ್ಲಿ ನಾದಿನಿಯ ವಿವಾಹವೂ ಆಗಿತ್ತು.ಈಗ ಆರು ತಿಂಗಳ ಮಗುವಿದೆ. ಆದರೆ ಸತ್ಯನಿಗೆ ಮಾತ್ರ ನಾದಿನಿಯ ಸೆಳೆತ ಮಾತ್ರ ಕಡಿಮೆಯಾಗಿರಲಿಲ್ಲ. ಹೀಗಾಗಿ 15ಲಕ್ಷಕ್ಕೆ ಸುಮಾರಿ ನೀಡಿ ಆಕೆಯ ಗಂಡನನ್ನು ಹತ್ಯೆ ಮಾಡಿದ್ದಾನೆ.

English summary
Police Got Explosive Information when Interrogating The Techie Murder Case
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X