ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿನಿಮಾ ಶೈಲಿಯಲ್ಲಿ ಓಜಿಕುಪ್ಪಂ ಗ್ಯಾಂಗ್ ಅರೆಸ್ಟ್ ಮಾಡಿದ ಬೆಂಗಳೂರು ಪೊಲೀಸ್!

|
Google Oneindia Kannada News

ಬೆಂಗಳೂರು, ಮೇ. 06: ಬ್ಯಾಂಕ್‌ನಲ್ಲಿ ಹಣ ಡ್ರಾ ಮಾಡುವ ವ್ಯಕ್ತಿಗಳ ಮೈಮೇಲೆ ಗಲೀಜು ಹಾಕಿ ಗಮನ ಬೇರಡೆ ಸೆಳೆದು ಅವರಿಂದ ಹಣ ಕದ್ದು ಪರಾರಿಯಾಗುವ ಓಜಿಕುಪ್ಪಂ ಗ್ಯಾಂಗ್ ನ್ನು ಬ್ಯಾಡರಹಳ್ಳಿ ಪೊಲೀಸರು ಸಿನಿಮಾ ಶೈಲಿಯಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ.

ಓಜಿಕುಪ್ಪಂ ಗ್ಯಾಂಗ್ ತಂಗಿದ್ದ ಮನೆಗೆ ಬಾಡಿಗೆದಾರ ವೇಷದಲ್ಲಿ ತೆರಳಿದ ಪೊಲೀಸ್ ಕಾನ್‌ಸ್ಟೇಬಲ್‌ಗಳು ಓಜಿ ಕುಪ್ಪಂ ಗ್ಯಾಂಗ್ ಇಬ್ಬರು ಸದಸ್ಯರ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾ ಶೈಲಿಯಲ್ಲಿ ನಡೆದ ಆಪರೇಷನ್ ಓಜಿಕುಪ್ಪಂ ಗ್ಯಾಂಗ್ ಸ್ಟೋರಿ ಇಲ್ಲಿದೆ ನೋಡಿ.

ಓಜಿ ಕುಪ್ಪಂ ಗ್ಯಾಂಗ್ ಕಾರ್ಯಾಚರಣೆ:

ಓಜಿ ಕುಪ್ಪಂ ಗ್ಯಾಂಗ್ ಕಾರ್ಯಾಚರಣೆ:

ತಮಿಳುನಾಡು ಮೂಲದ ಓಜಿಕುಪ್ಪಂ ಗ್ಯಾಂಗ್ ಅಂದ್ರೆ ಪೊಲೀಸರಿಗೂ ಭಯ. ಜನರಿಗೆ ಯಾವುದೇ ಗಾಯ ಮಾಡದೇ ಯಾಮಾರಿಸುವ ಕಿರಾತಕರು ಇವರು. ಅಪರಾಧ ಕೃತ್ಯ ಎಸಗಿದ ಒಂದು ದಿನದ ನಂತರ ಸಿಕ್ಕರೂ ಅವರ ಬಳಿ ಐದು ಪೈಸೆ ಕಾಸು ರೀಕವರಿಯಾಗಲ್ಲ. ಹೀಗಾಗಿ ಓಜಿಕುಪ್ಪಂ ಗ್ಯಾಂಗ್ ಹೆಸರು ಕೇಳಿದ್ರೆ ಪೊಲೀಸರೇ ದಂಗಾಗುತ್ತಾರೆ. ಇಂತಹ ಗ್ಯಾಂಗ್ ಬೆಂಗಳೂರಿಗೆ ಕಾಲಿಟ್ಟಿದೆ. ಇನ್ನು ಇವರು ಶುಕ್ರವಾರ ಮತ್ತು ಸೋಮವಾರ ಮಾತ್ರ ಕಾರ್ಯಾಚರಣೆ ಮಾಡುತ್ತಾರೆ. ಟಾರ್ಗೆಟ್ ರೀಚ್ ಆದ ಬಳಿಕ ನಗರ ಬಿಟ್ಟು ಎಸ್ಕೇಪ್ ಆಗುತ್ತಾರೆ. ಇವರು ಬಂಧನಕ್ಕೆ ಒಳಗಾದ್ರೂ ಎರಡೇ ದಿನಕ್ಕೆ ಜಾಮೀನು ಪಡೆದು ಹೊರ ಬಂದು ಪುನಃ ಕಾರ್ಯಾಚರಣೆಗೆ ಇಳಿಯುತ್ತಾರೆ. ಹೀಗಾಗಿ ಓಜಿಕುಪ್ಪಂ ಗ್ಯಾಂಗ್ ಬಂದಿದೆ ಅಂದರೆ ಪೊಲೀಸರಿಗೆ ತಲೆನೋವು.

ಕೈಚಳಕ ತೋರಿ ಎಸ್ಕೇಪ್

ಕೈಚಳಕ ತೋರಿ ಎಸ್ಕೇಪ್

ಓಜಿಕುಪ್ಪಂ ಗ್ಯಾಂಗ್ ಬ್ಯಾಂಕ್ ಗಳ ಮುಂದೆ ನಿಂತು ಹಣ ಡ್ರಾ ಮಾಡುವ ಜನರನ್ನು ಟಾರ್ಗೆಟ್ ಮಾಡಿ ಹಣ ದೋಚುತ್ತಾರೆ. ಹಣ ತೆಗೆದುಕೊಂಡು ಹೋಗುವ ವ್ಯಕ್ತಿಗಳ ಮೈಮೇಲೆ ಗಲೀಜು ಹಾಕಿ, ನಿಮ್ಮ ಮೈಮೇಲೆ ಏನೋ ಬಿದ್ದದೆ ನೋಡಿ ಎಂದು ಗಮನ ಬೇರಡೆ ಸೆಳೆಯುತ್ತಾರೆ. ವಾಹನ ನಿಲ್ಲಿಸಿ ಗಲೀಜು ಒರಿಸಿಕೊಳ್ಳುವಷ್ಟರಲ್ಲಿ ಈ ಗ್ಯಾಂಗ್ ಹಣದ ಬ್ಯಾಗ್ ತೆಗೆದುಕೊಂಡು ಎಸ್ಕೇಪ್ ಆಗುತ್ತದೆ. ಹಣ ಡ್ರಾ ಮಾಡುವ ವ್ಯಕ್ತಿ ಬಗ್ಗೆ ವಿವರ ಕೊಡಲು ಒಬ್ಬ ಬ್ಯಾಂಕ್ ನಲ್ಲಿರುತ್ತಾನೆ. ಇನ್ನೊಬ್ಬ ಜನರ ಮೇಲೆ ಗಲೀಜು ಹಾಕಿ ಗಮನ ಬೇರಡೆ ಸೆಳೆಯುತ್ತಾನೆ. ಆತ ಗಮನ ಬೇರಡೆ ಹೋಗುತ್ತಿದ್ದಂತೆ ಮತ್ತಿಬ್ಬರು ಬಂದು ಹಣ ಎಗರಿಸಿ ಎಸ್ಕೇಪ್ ಅಗುತ್ತಾರೆ. ಒಂದು ವೇಳೆ ಹಣ ಕಸಿದವ ಸಿಕ್ಕಿಬಿದ್ದರೂ, ಗ್ಯಾಂಗ್ ಒಂದಾಗಿ, ನ್ಯಾಯ ಪಂಚಾಯಿತಿ ಮಾಡಿಸುವ ಸೋಗಿನಲ್ಲಿ ಎಸ್ಕೇಪ್ ಮಾಡಿಸುತ್ತದೆ. ಇದು ಓಜಿ ಕುಪ್ಪಂ ಗ್ಯಾಂಗ್ ಯಾಮಾರಿಸುವ ಶೈಲಿ.

ಹಣ ಸಿಕ್ಕ ನಂತರ ಬಿಂದಾಸ್ ಲೈಫ್

ಹಣ ಸಿಕ್ಕ ನಂತರ ಬಿಂದಾಸ್ ಲೈಫ್

ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡುವರನ್ನು ಟಾರ್ಗೆಟ್ ಮಾಡಿ ಹಣ ದೋಚುವ ಈ ಗ್ಯಾಂಗ್ ಹಣ ಕೈಗೆ ಸಿಕ್ಕ ನಂತರ ಬೆಂಗಳೂರಲ್ಲಿ ಇರಲ್ಲ. ಚೆನ್ನೈ, ಗೋವಾ, ಬಾಂಬೆಗೆ ಹೋಗಿ ಹಣ ವೆಚ್ಚ ಮಾಡಿ ಮಜಾ ಮಾಡುತ್ತಾರೆ. ಹಣ ಖಾಲಿಯಾದ ಬಳಿಕ ಮೆಟ್ರೋ ಸಿಟಿಗೆ ಭೇಟಿ ಕೊಟ್ಟು ತಮ್ಮ ಕೈಚಳಕ ತೋರುತ್ತಾರೆ. ಬೆಂಗಳೂರಿನ ಹೊರ ವಲಯದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಐದಾರು ಅಪರಾಧ ಕೃತ್ಯ ಎಸಗಿದ ಬಳಿಕ ಪುನಃ ಎಸ್ಕೇಪ್ ಆಗುತ್ತಾರೆ. ಇಲ್ಲವೇ ಕೈಚಳಕ ಏರಿಯಾ ಬದಲಿಸುತ್ತಾರೆ. ಹೀಗಾಗಿ ಇವರು ಪೊಲೀಸರಿಗೆ ಸಿಕ್ಕಿ ಬೀಳುವುದೇ ಅಪರೂಪ.

ಬ್ಯಾಡರಹಳ್ಳಿಯಲ್ಲಿ ಅಪರಾಧ ಕೃತ್ಯ

ಬ್ಯಾಡರಹಳ್ಳಿಯಲ್ಲಿ ಅಪರಾಧ ಕೃತ್ಯ

ಇತ್ತೀಚೆಗೆ ಬ್ಯಾಡರಹಳ್ಳಿಗೆ ಎಂಟ್ರಿ ಕೊಟ್ಟಿದ್ದ ಗ್ಯಾಂಗ್ ಹಲವಡೆ ಹಣ ಎಗರಿಸಿ ಎಸ್ಕೇಪ್ ಆಗಿತ್ತು. ಈ ಕುರಿತು ಸರಣಿ ವರದಿ ದೂರು ದಾಖಲಾಗುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸರು ಎಚ್ಚೆತ್ತುಕೊಂಡಿದ್ದರು. ಸುಮಾರು 500 ಸಿಸಿಟಿವಿ ಕ್ಯಾಮರಾ ಪರಿಶೀಲಿಸಿ ಓಜಿ ಕುಪ್ಪಂ ಗ್ಯಾಂಗ್ ಸದಸ್ಯರ ವಿವರಗಳನ್ನು ಸಂಗ್ರಹಿಸಿದ್ದರು. ಈ ಗ್ಯಾಂಗ್ ನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯಲು ಇನ್‌ಸ್ಪೆಕ್ಟರ್ ರವಿ ಕುಮಾರ್ ನೇತೃತ್ವದಲ್ಲಿ ಪ್ಲಾನ್ ರೂಪಿಸಿ ಕಾರ್ಯಗತ ಗೊಳಿಸಿದ್ದರು.

ಆಪರೇಷನ್ ಓಜಿಕುಪ್ಪಂ ಗ್ಯಾಂಗ್

ಆಪರೇಷನ್ ಓಜಿಕುಪ್ಪಂ ಗ್ಯಾಂಗ್

ಬ್ಯಾಡರಹಳ್ಳಿ ಠಾಣೆ ಪೇದೆ ಗುರುದೇವ್, ತೀರ್ಥ ಪ್ರಸಾದ್, ಪ್ರಸನ್ನ ಮತ್ತು ನವೀನ್ ಸಾಮಾನ್ಯ ವ್ಯಕ್ತಿಗಳ ವೇಷ ಧರಿಸಿದ್ದಾರೆ. ಓಜಿಕುಪ್ಪಂ ಗ್ಯಾಂಗ್ ಎಲೆಕ್ಟ್ರಾನಿಕ್ ಸಿಟಿ ಬಳಿ ಬಾಡಿಗೆಗೆ ಪಡೆದಿದ್ದ ಮನೆಯ ಬಳಿ ಹೋಗಿ ಪೊಲೀಸ್ ಸಿಬ್ಬಂದಿ ಬಾಡಿಗೆ ಮನೆ ಪಡೆದಿದ್ದಾರೆ. ಅಲ್ಲಿ ಸಾಮಾನ್ಯ ವ್ಯಕ್ತಿಗಳಂತೆ ನಾಟಕವಾಡಿಕೊಂಡಿದ್ದರು. ಓಜಿ ಕುಪ್ಪಂ ಬೆಂಗಳೂರಿನ ವಿವಿಧೆಡೆ ಕಾರ್ಯಾಚರಣೆ ಮಾಡಿ ಹಣ ಸಮೇತ ಬಂದಾಗ ಅರೆಸ್ಟ್ ಮಾಡಿದ್ದಾರೆ. ಸಾಮಾನ್ಯ ವ್ಯಕ್ತಿಗಳಂತೆ ಆರೋಪಿಗಳು ಇದ್ದ ಮನೆಯನ್ನೇ ಬಾಡಿಗೆ ಪಡೆದು ಸಿನಿಮಾ ಶೈಲಿಯಲ್ಲಿ ಕಾರ್ಯಾಚರಣೆ ಮಾಡಿ ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಅರೋಪಿಗಳು ಅರೆಸ್ಟ್

ಇಬ್ಬರು ಅರೋಪಿಗಳು ಅರೆಸ್ಟ್

ಪೊಲೀಸರು ಮಾರುವೇಷದ ಕಾರ್ಯಾಚರಣೆ ನಡೆಸಿ ಓಜಿ ಕುಪ್ಪಂ ಗ್ಯಾಂಗ್ ನ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ. ಪ್ರದೀಪ್@ಕಾರ್ತಿಕ್ ಮತ್ತು ಗೋಪಿ ಬಂಧಿತ ಆರೋಪಿಗಳು. ಇವರಿಂದ 5.6 ಲಕ್ಷ ರೂ. ಹಣ ಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. ಮತ್ತಿಬ್ಬರು ಆರೋಪಿಗಳಾದ ಮಾರನ್ ಹಾಗೂ ಮತ್ತೊಬ್ಬ ಎಸ್ಕೇಪ್ ಆಗಿದ್ದಾರೆ. ಪೊಲೀಸರ ಮಾರು ವೇಷದ ಈ ಕಾರ್ಯಾಚರಣೆಯನ್ನು ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

English summary
Cinema style operation from Byadarahalli police: OGkuppam gang two members arrested in Electronic city. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X