ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೋಗಿಗಳಿಗೆ ನರಕ: ಆಸ್ಪತ್ರೆ ಮುಂದೆ ಗುಂಡಿಗಳನ್ನು ಮುಚ್ಚಿದ ಪೊಲೀಸರು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 3: ಬೆಂಗಳೂರಿನಲ್ಲಿ ವಾಹನದಟ್ಟಣೆಯೂ ವಿಪರೀತವಾಗಿದೆ ಅದರ ಮಧ್ಯೆ ರಸ್ತೆಗಳಲ್ಲಿ ಗುಂಡಿಗಳು ಇರುವುದರಿಂದ ಸುಗಮ ಸಂಚಾರಕ್ಕೆ ಅನನಕೂಲವಾಗುತ್ತಿತ್ತು. ಕಳೆದ ಕೆಲವು ದಿನಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿದೆ.

ಆದರೂ ಸಾಕಷ್ಟು ಕಡೆ ಹಾಗೆಯೇ ಉಳಿದಿದೆ, ಇನ್ನು ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ ರೋಗಿಗಳಿಗೆ ನರಕ ದರ್ಶನ ಮಾಡಿಸುತ್ತಿದ್ದ ರಸ್ತೆಗುಂಡಿಗಳನ್ನು ವಿವಿಪುರಂ ಸಂಚಾರ ಪೊಲೀಸರು ಮುಚ್ಚಿದ್ದು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.

ಭಯೋತ್ಪಾದಕರಿಗಿಂತ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ ರಸ್ತೆ ಗುಂಡಿಗಳು ಭಯೋತ್ಪಾದಕರಿಗಿಂತ ಹೆಚ್ಚು ಜನರನ್ನು ಬಲಿ ಪಡೆಯುತ್ತಿವೆ ರಸ್ತೆ ಗುಂಡಿಗಳು

ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಅದರಲ್ಲಿಯೂ ರೋಗಿಗಳಿಗೆ ಆಸ್ಪತ್ರೆಗೆ ತೆರಳಲು ತೊಂದರೆಯುಂಟಾಗುತ್ತಿದೆ ಎಂದು ಬಿಬಿಎಂಪಿ ಬಳಿ ಎಷ್ಟೇ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

Police filled potholes overnight

ಹಾಗಾಗಿ ಸಂಚಾರ ಪೊಲೀಸರೇ ಈ ಕಾರ್ಯಕ್ಕೆ ಮುಂದಾಗಿದ್ದು ಸ್ಥಳೀಯರು ಅವರಿಗೆ ಸಹಕಾರ ನೀಡಿದ್ದಾರೆ, ಆಸ್ಪತ್ರೆ ಮುಂದಿದ್ದ ಏಳೆಂಟು ಗುಂಡಿಗಳನ್ನು ಪೊಲೀಸರು ಮುಚ್ಚಿದ್ದಾರೆ. 7537 ರಸ್ತೆಗುಂಡಿಗಳ ಪೈಕಿ 4944ಗುಂಡಿಗಳನ್ನು ಮುಚ್ಚಲಾಗಿದೆ, ಇನ್ನೂ ಸಾವಿರಕ್ಕೂ ಹೆಚ್ಚು ಗುಂಡಿಗಳು ಬಾಕಿ ಇದೆ.

Police filled potholes overnight

ಬಿಬಿಎಂಪಿಯ 20 ಇಲಾಖೆಗಳಿಗೆ ಸಂಬಂಧಿಸಿದ ದೂರುಗಳನ್ನು ಮೊಬೈಲ್ ಮೂಲಕವೇ ನೀಡಬಹುದಾಗಿದೆ.ದೂರಿಗೆ ಸಂಬಂಧಪಟ್ಟಂತೆ ತೆಗೆದುಕೊಂಡ ಕ್ರಮಗಳ ವಿವರ ನಿಮ್ಮ ಮೊಬೈಲ್‌ಗೆ ಸಂದೇಶ ರೂಪದಲ್ಲಿ ಬರುತ್ತದೆ. ಆದರೂ ಈ ರಸ್ತೆಯನ್ನು ಸರಿಪಡಿಸಿರಲಿಲ್ಲ.

English summary
Bengaluru police have filled potholes near Victoria hospital last night to avoid deadly accidents everyday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X