• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಅಂದ್ರೆ ಭಯನಾ? ಬೆಂಗಳೂರು ಪೊಲೀಸರ ಟಿಕ್‌ಟಾಕ್ ನೋಡಿ

|

ಸಣ್ಣ ವಿಡಿಯೋ ಹಂಚಿಕೆ ಮಾಡುವ ಜನಪ್ರಿಯ ಸೋಷಿಯಲ್ ನೆಟ್‍ವರ್ಕ್ ವೇದಿಕೆಯಾಗಿರುವ ಟಿಕ್‍ಟಾಕ್‍ಗೂ ಪ್ರವೇಶ ಪಡೆದಿರುವ ಬೆಂಗಳೂರು ಪೊಲೀಸರು, ಸಾರ್ವಜನಿಕರಿಗೆ ಕಾನೂನಿನ ಪಾಠ ಮಾಡುತ್ತಿದ್ದಾರೆ. ಈಗ ಎಲ್ಲೆಡೆ ಕೊರೊನಾವೈರಸ್ ಭೀತಿ ಆವರಿಸಿರುವುದರಿಂದ ಜನಜಾಗೃತಿಗಾಗಿ ಟಿಕ್‍ಟಾಕ್‍ ಬಳಸುತ್ತಿದ್ದಾರೆ. ಬೆಂಗಳೂರು ಪೊಲೀಸರಲ್ಲದೆ ಕೇರಳ, ದುರ್ಗ್ ಪೊಲೀಸರು ಟಿಕ್‍ಟಾಕ್‍ ಬಳಸಿ ಕೊರೊನಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಟಿಕ್‍ಟಾಕ್‍ಗೆ ಬೆಂಗಳೂರು ನಗರ ಪೊಲೀಸರ ಸೇರ್ಪಡೆ

ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರೇರಕ ವಿಡಿಯೋಗಳನ್ನು ಟಿಕ್‍ಟಾಕ್ ಮೂಲಕ ಹಂಚುವ ಗುರಿಯನ್ನು ಬೆಂಗಳೂರು ಪೊಲೀಸ್ ವಿಭಾಗವು ಹೊಂದಿದೆ

'ಅಧಿಕ' ವರ್ಷಕ್ಕಿದೆ ಭೀಕರ ಇತಿಹಾಸ: 'ವಿಪತ್ತು'ಗಳನ್ನೇ ತರಲಿದ್ಯಾ 2020?

ಹೊಸ ಸಾಮಾಜಿಕ ಜಾಲತಾಣದ ಪ್ರವೇಶದ ಕುರಿತು ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಐಪಿಎಸ್ "ಸಾಮಾಜಿಕ ಜಾಲತಾಣಗಳ ವೇದಿಕೆಯನ್ನು ಬಳಸಿಕೊಂಡು ಸಾರ್ವಜನಿಕ ಅರಿವು ಮೂಡಿಸಬಹುದು ಎಂಬುದರ ಬಗ್ಗೆ ಬೆಂಗಳೂರು ಪೊಲೀಸರಿಗೆ ಹೆಚ್ಚು ವಿಶ್ವಾಸವಿದೆ. ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಾಗೂ ವಿನೋದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸಾರ್ವಜನಿಕರ ಜತೆ ಸಂವಹನ ಮಾಡುವಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ಉಳಿದೆಲ್ಲ ನಗರಗಳ ಪೊಲೀಸ್ ವಿಭಾಗಕ್ಕಿಂತ ಒಂದು ಹೆಜ್ಜೆ ಮುಂದಿದೆ. ಟಿಕ್‍ಟಾಕ್‍ಗೂ ಬೆಂಗಳೂರು ಪೊಲೀಸರು ಎಂಟ್ರಿ ಪಡೆದಿರುವುದು ಈ ಸಾಲಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರೇರಕವಾದ ವಿಡಿಯೋಗಳನ್ನು ಟಿಕ್‍ಟಾಕ್‍ನಲ್ಲಿ ಹಂಚುವ ಮೂಲಕ ಹೆಚ್ಚಿನ ಜಾಗೃತಿ ಮೂಡಿಸಲು ಸಾಧ್ಯವಿದೆ,'' ಎಂದು ಹೇಳಿದರು.

ಸಣ್ಣ ವಿಡಿಯೋ ಹಂಚಿಕೆ ತಾಣ, ಅಪ್ಲಿಕೇಷನ್

ಸಣ್ಣ ವಿಡಿಯೋ ಹಂಚಿಕೆ ತಾಣ, ಅಪ್ಲಿಕೇಷನ್

ಟಿಕ್‍ಟಾಕ್ ಬಗ್ಗೆ: ಮೊಬೈಲ್‍ನಲ್ಲಿ ಚಿತ್ರೀಕರಿಸಿರುವ ಸಣ್ಣ ವಿಡಿಯೋಗಳನ್ನು ಪ್ರಸರಣ ಮಾಡಲು ಇರುವ ಅತ್ಯಂತ ಪ್ರಶಸ್ತ ವೇದಿಕೆ ಟಿಕ್‍ಟಾಕ್. ಲಾಸ್ ಏಂಜಲೀಸ್, ನ್ಯೂಯಾರ್ಕ್, ಲಂಡನ್, ಪ್ಯಾರೀಸ್, ಬರ್ಲಿನ್, ದುಬೈ, ಮುಂಬಯಿ, ಸಿಂಗಾಪುರ, ಜಕಾರ್ತ, ಸಿಯೋಲ್ ಮತ್ತು ಟೋಕಿಯೋದಲ್ಲಿ ಟಿಕ್‍ಟಾಕ್ ಜಾಗತಿಕ ಕಚೇರಿಗಳನ್ನು ಹೊಂದಿದೆ.

@blrcitypolice

As a part of ##ArrestCorona initiative, Bengaluru City Police to help drive Corona virus away! Demonstrating on personal hygiene and social distancing

♬ original sound - BENGALURUCITYPOLICE

ವೈಯಕ್ತಿಕ ಶುಚಿತ್ವ ಹೆಚ್ಚಿಸಿಕೊಳ್ಳಿ

ವೈಯಕ್ತಿಕ ಶುಚಿತ್ವ ಹೆಚ್ಚಿಸಿಕೊಳ್ಳಿ ಪೊಲೀಸರು ಖುದ್ದು ಅಭಿನಯಿಸಿ ತೋರಿಸಿ ಜಾಗೃತಿ ಮೂಡಿಸಿರುವ ವಿಡಿಯೋ: ಎಲ್ಲರಿಗೂ ವಂದನೆ ಸಲ್ಲಿಸಿ ಎಂದಿದ್ದಾರೆ

@blrcitypolice

##ArrestCorona ##Covid_19 let’s spread awareness..prevention is the key.. awareness in Basavangudi ps limits

♬ original sound - BENGALURUCITYPOLICE

ಬಸನವಗುಡಿ ಬಳಿ ಜಾಗೃತಿ ವಿಡಿಯೋ

ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕೊರೊನಾವೈರಸ್ ಸೋಂಕು ಹರಡದಂತೆ ಜಾಗೃತಿ ಮೂಡಿಸಿದ್ದಾರೆ. ಬೆಂಗಳೂರು ಪೊಲೀಸರು ಟಿಕ್‍ಟಾಕ್‍ಗೆ ಸೇರುವ ಮೊದಲೇ ದೇಶದ ಹಲವು ರಾಜ್ಯಗಳ ಪೊಲೀಸ್ ವಿಭಾಗಗಳು ಟಿಕ್‍ಟಾಕ್ ವೇದಿಕೆಯನ್ನು ಉತ್ತಮ ಕಾರ್ಯಕ್ಕಾಗಿ ಬಳಸಿಕೊಳ್ಳುತ್ತಿವೆ. ಕೇರಳ ಪೊಲೀಸ್, ಉತ್ತರಾಖಂಡ ಪೊಲೀಸ್ ಹಾಗೂ ದುರ್ಗ್ ಪೊಲೀಸ್ ಇವುಗಳಲ್ಲಿ ಪ್ರಮುಖವಾದ ಪೊಲೀಸ್ ವಿಭಾಗಗಳಾಗಿವೆ.

@blrcitypolice

ಬೆಂಗಳೂರು ನಗರ ಪೊಲೀಸ್ ಘಟಕದ ಪೊಲೀಸ್ ಸಿಬ್ಬಂದಿಯವರಾದ ಮೌಲಾಲಿ ಬೋರಗಿ ರವರಿಂದ ಕೊರೊನ ವೈರಸ್ ಕುರಿತು ಜಾಗೃತಿ ಅಭಿಯಾನ ಗೀತೆ. PART-1

♬ original sound - BENGALURUCITYPOLICE

ಕೊರೊನಾ ಜಾಗೃತಿ ಗಾಯನ

ಬೆಂಗಳೂರು ಪೊಲೀಸರನ್ನು ಟಿಕ್‍ಟಾಕ್‍ನಲ್ಲಿ ಫಾಲೋ ಮಾಡಲು ಇಲ್ಲಿಗೆ ಕ್ಲಿಕ್ ಮಾಡಿ: @blrcitypolice ಐಒಎಸ್ ಹಾಗೂ ಗೂಗಲ್ ಪ್ಲೇನಿಂದ ಟಿಕ್‍ಟಾಕ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಿ.

English summary
Kerala Police, Bengaluru Police and Durg Police are using TikTok as a platform to spread awareness around Coronavirus effectively with thousands of engagements on their posts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more