ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸ್ ಇಲಾಖೆಯಿಂದ ನೊಂದವರ ದಿನಾಚರಣೆ: ಹಾಗೆಂದರೇನು?

|
Google Oneindia Kannada News

ಬೆಂಗಳೂರು, ಜುಲೈ 4: ಸಾರ್ವಜನಿಕರ ಸಂಕಷ್ಟ ಆಲಿಸಲು ಪೊಲೀಸ್ ಇಲಾಖೆ ನೊಂದವರಣ ದಿನಾಚರಣೆಯನ್ನು ಜಾರಿಗೆ ತರುತ್ತಿದೆ.

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಸಂತ್ರಸ್ತರೊಂದಿಗೆ ಮಾಹಿತಿ ಹಂಚಿಕೊಳ್ಳಲು ಈ ದಿನ ಆಚರಿಸಲಾಗುತ್ತಿದೆ.

ಅತ್ಯಾಚಾರ ದೂರು: ತನಿಖೆಗೆ ಹೋದ ಪೊಲೀಸರಿಗೆ ಕಾದಿತ್ತು ಅಚ್ಚರಿಅತ್ಯಾಚಾರ ದೂರು: ತನಿಖೆಗೆ ಹೋದ ಪೊಲೀಸರಿಗೆ ಕಾದಿತ್ತು ಅಚ್ಚರಿ

ಗಂಭೀರ ಸ್ವರೂಪದ ಅತ್ಯಾಚಾರ ಹಾಗೂ ಪೋಕ್ಸೊ ಪ್ರಕರಣಗಳ ತನಿಖೆ ಸಹ ಸೂಕ್ಷ್ಮವಾಗಿ ನಡೆಸಬೇಕಿದೆ. ಆದರೆ ಹಲವು ಸಂದರ್ಭಗಳಲ್ಲಿ ತನಿಖಾ ಹಂತ ಅಥವಾ ನ್ಯಾಯಾಲಯದ ವಿಚಾರಣೆ ಹಂತದಲ್ಲಿ ಪ್ರಕರಣದಿಂದ ಹಿಂದೆ ಸರಿಯುವಂತೆ ದೂರುದಾರರು ಹಾಗೂ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಕಷ್ಟು ಘಟನೆಗಳಿವೆ.

Police department will start token system Nondavara dina in station

ನಾಗರಿಕ ಜೊತೆ ಪೊಲೀಸರ ನಡವಳಿಕೆ ಬದಲಾಗಬೇಕಿದೆ ಎಂದು ಕಟ್ಟುನಿಟ್ಟಾಗಿ ಗೃಹ ಸಚಿವರು ಸೂಚಿಸಿದ್ದಾರೆ. ಹೀಗಾಗಿ ಸರ್ಕಾರದ ಜನ ಸ್ನೇಹಿ ಪೊಲೀಸ್ ಯೋಜನೆಯು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಿದೆ ಎಂದು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಜನರ ಪರಿಹಾರಕ್ಕೆ ಟೋಕನ್ ವ್ಯವಸ್ಥೆ ಜಾರಿಗೊಳಿಸಲು ಆಯುಕ್ತರು ಚಿಂತನೆ ನಡೆಸಿದ್ದಾರೆ. ಠಾಣಾ ಮಟ್ಟದಲ್ಲಿ ಜನರ ದೂರುಗಳು ಇತ್ಯರ್ಥವಾಗಬೇಕು. ಅಲ್ಲಿ ಪರಿಹಾರ ಕಾಣದೆ ಹೋದರೆ ಮಾತ್ರ ಮೇಲಧಿಕಾರಿಗಳಿಗೆ ವರ್ಗಾವಣೆಯಾಗಬೇಕು ಎಂದು ತಿಳಿಸಲಾಗಿದೆ.

English summary
The city Police department will start token system Nondavara dina in station, to resolve cases in priority basis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X