ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಆರೋಗ್ಯ ಕಾಪಾಡಲು ಹೊಸ ಯೋಜನೆ: ಬಸವರಾಜ್ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಅ. 22: ಪೊಲೀಸರು ಎಂದಾಕ್ಷಣ ನೆನಪಿಗೆ ಬರುವುದು ಕೈಯಲ್ಲಿ ಲಾಠಿ ಹಿಡಿದು ಜನರನ್ನು ಬೆದರಿಸುವ ಚಿತ್ರಣ. ಆದರೆ ಪೊಲೀಸರು ಭದ್ರತೆ ಕೊಡದಿದ್ದರೆ ನಾವು ಒಂದು ಕ್ಷಣವೂ ನೆಮ್ಮದಿಯಿಂದ ಇರುವುದು ಅಸಾಧ್ಯ. ನಮಗೆ ಭದ್ರತೆ ಕೊಡುತ್ತಲೇ ಪ್ರತಿವರ್ಷ ನೂರಾರು ಪೊಲೀಸರು ಹುತಾತ್ಮರಾಗುತ್ತಾರೆ. ಅಂತಹ ಬಲಿದಾನಗಳು ಬಹಳಷ್ಟು ಬಾರಿ ಸಮಾಜದ ಗಮನಕ್ಕೆ ಬರುವುದೇ ಇಲ್ಲ. ಹೀಗೆ ಕರ್ತವ್ಯ ನಿರತವಾಗಿದ್ದಾಗಲೇ ಹುತಾತ್ಮರಾದ ಪೊಲೀಸರ ಕರ್ತವ್ಯ ನೆನಪಿಸುವ ಪೊಲೀಸ್ ಅಮರವೀರರ ಛಾಯಾಚಿತ್ರ ಪ್ರದರ್ಶನ "ಸ್ಮರಣಾಂಜಲಿ" ಬೆಂಗಳೂರಿನಲ್ಲಿ ನಡೆಯಿತು.

ಪ್ರದರ್ಶನ ಉದ್ಘಾಟಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಕೋವಿಡ್-19 ನಿಂದಾಗಿ ಪ್ರಾಣ ಕಳೆದುಕೊಳ್ಳುವ ಭೀತಿಯ ನಡುವೆಯೂ ಪ್ರಾಣದ ಹಂಗು ತೊರೆದು ಹೋರಾಡಿದ ಕೀರ್ತಿ ಮತ್ತು ನಿಜವಾದ ಕೊರೊನಾ ವಾರಿಯರ್ಸ್ ಎಂದರೆ ಪೊಲೀಸರು ಎಂದರು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಸಂಸ್ಮರಣಾ ದಿನಾಚರಣೆ ಹಿನ್ನೆಲೆಯಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೊಲೀಸ್ ಇಲಾಖೆಗೆ ಪ್ರೋತ್ಸಾಹ ಧನಕ್ಕಿಂತ ಮುಖ್ಯವಾಗಿ ನಿಮ್ಮ ಜೊತೆ ನಾವಿದ್ದೇವೆ ಎಂಬ ಬೆಂಬಲದ ಅಗತ್ಯವಿದೆ ಎಂದರು. ಪೊಲೀಸರ ಕಾರ್ಯವ್ಯಾಪ್ತಿ ಬದಲಾಗುತ್ತಿರುವ ಜೀವನಕ್ರಮಕ್ಕನುಗುಣವಾಗಿ ಹೆಚ್ಚಾಗುತ್ತಿದ್ದು, ಹೊಸ ತಂತ್ರಜ್ಞಾನದ ಕಲಿಕೆ ಅವಶ್ಯಕವಾಗಿದೆ. ಅದಕ್ಕಾಗಿ ವಿಶೇಷ ತರಬೇತಿಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಪೊಲೀಸರ ಸುರಕ್ಷತೆ, ಜೀವ ಮತ್ತು ಜೀವನ ಕಟ್ಟಿಕೊಡುವುದು ಸರ್ಕಾರದ ಜವಬ್ಧಾರಿಯಾಗಿದೆ. ಮುಖ್ಯವಾಗಿ ಅವರ ಆರೋಗ್ಯ ಕಾಪಾಡುವುದಕ್ಕಾಗಿ ಹೊಸ ಯೋಜನೆಯೊಂದನ್ನು ರೂಪಿಸಲಾಗುತ್ತಿದೆ ಎಂದು ಗೃಹಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಪೊಲೀಸರು ಕಠಿಣ, ಅವರ ಹೃದಯ ಮೆದು

ಪೊಲೀಸರು ಕಠಿಣ, ಅವರ ಹೃದಯ ಮೆದು

ಕಠಿಣವಾಗಿ ಕಾಣುವವರ ಹೃದಯ ಅತ್ಯಂತ‌ ಮೆದುವಾಗಿರುತ್ತದೆ. ಪೊಲೀಸರು ಮೇಲ್ನೋಟಕ್ಕೆ ಕಠಿಣವಾಗಿ ಕಂಡರೂ ಅವರ ಹೃದಯ ಮೆದು. ಕೊರೊನಾ ಸಂಕಷ್ಟದ ಸಮಯದಲ್ಲಿ ಒಬ್ಬ ಆಶಾ ಕಾರ್ಯಕರ್ತೆಗೆ ರಕ್ಷಣೆ ನೀಡುವುದರಿಂದ ಶುರುವಾಗಿ ರೋಗಿಯನ್ನು ಆಸ್ಪತ್ರೆಗೆ ಸೇರಿಸುವುದು ಹಾಗೂ ಗಲಾಟೆಗಳ ನಿಯಂತ್ರಣದಲ್ಲಿ ಪೊಲೀಸ್ ಇಲಾಖೆ ಅತ್ಯಂತ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದೆ.

ಧಣಿವರಿಯದೆ ಹಗಲು ರಾತ್ರಿ ಶ್ರಮ ಜೀವಿಗಳಂತೆ ದುಡಿಯುತ್ತಾರೆ ಪೊಲೀಸರು. ಅನೇಕ ವೇಳೆ‌ ಪ್ರಯಾಣ ಮಾಡುವ ಸಂದರ್ಭಗಳಲ್ಲಿ ನಡುರಾತ್ರಿಯಲ್ಲಿ ಸಹ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರನ್ನು ಕಂಡಿದ್ದೇನೆ ಎಂದು ಬೊಮ್ಮಾಯಿ ಅವರು ಶ್ಲಾಘಿಸಿದರು.

ಪೊಲೀಸರ ಮಕ್ಕಳ ಶಿಕ್ಷಣಕ್ಕೆ ಒತ್ತು

ಪೊಲೀಸರ ಮಕ್ಕಳ ಶಿಕ್ಷಣಕ್ಕೆ ಒತ್ತು

ಅವರ ಜೀವನವನ್ನು ಉತ್ತಮಗೊಳಿಸಲು ಸರ್ಕಾರ ಬದ್ಧವಾಗಿದೆ. ಇಂತಹ ಸ್ಮರಣೆಗಳಿಗಿಂತ ಪೊಲೀಸರ ಮಕ್ಕಳ ಶಿಕ್ಷಣ ಆರೋಗ್ಯ ಸೇರಿದಂತೆ ಉತ್ತಮ ಜೀವನ ನಡೆಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಬದ್ಧನಾಗಿದ್ದೇನೆ ಎಂದರು.

ಡಿಜಿಪಿ ಪ್ರವೀಣ್ ಸೂದ್ ಅವರು ಮಾತನಾಡಿ, ಇದೊಂದು ವಿನೂತನ ಕಾರ್ಯಕ್ರಮ. ಸಾಮಾನ್ಯರು ತಮ್ಮ ಅಸಾಮಾನ್ಯ ತ್ಯಾಗ ಬಲಿದಾನಗಳಿಂದ ಅಮರವೀರರಾಗುತ್ತಾರೆ. ಅಂತಹ ಸನ್ನಿವೇಶಗಳನ್ನು ಸೆರೆಹಿಡಿದಿರುವ ವಿಶೇಷ ಛಾಯಾಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳುವ ಮೂಲಕ ಶೌರ್ಯ ಮೆರೆದು ಇಲಾಖೆಗೆ ಹೆಸರು ತಂದುಕೊಟ್ಟವರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.

85 ಪೊಲೀಸರು ಕೋವಿಡ್‌ಗೆ ಬಲಿ

85 ಪೊಲೀಸರು ಕೋವಿಡ್‌ಗೆ ಬಲಿ

ಕೋವಿಡ್ -19 ಸಮಯದಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ, ಪ್ರತಿ ಪೊಲೀಸರ ಕುಟುಂಬ ಒತ್ತಡ ಹಾಗೂ ಭಯದ ನಡುವೆ ಸಹ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇಲ್ಲಿಯತನಕ 85 ಪೊಲೀಸರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇತರೆ ಕಾರಣಗಳಿಂದ 100 ಒಟ್ಟು 185 ಪೊಲೀಸರು ಪ್ರಾಣತ್ಯಾಗ ಮಾಡಿದ್ದಾರೆ. ಆದರೂ ಸಹ ಭಯ‌ ಪಡದೆ ಉಳಿದವರು ಕಾರ್ಯನಿರ್ವಹಿಸುತ್ತಿರುವುದು ಇಲಾಖೆಗೆ ಹೆಮ್ಮೆ ಮತ್ತು ಗೌರವ ತಂದಿದೆ.

Recommended Video

ಮುಂದೆ ಜೆಡಿಎಸ್ ಕಥೆ ಏನು? | Ramachandrappa | Oneindia Kannada
9 ಸಾವಿರ ಪೊಲೀಸರು ಕೋವಿಡ್‌ನಿಂದ ವಾಸಿ

9 ಸಾವಿರ ಪೊಲೀಸರು ಕೋವಿಡ್‌ನಿಂದ ವಾಸಿ

ಇಲ್ಲಿಯವರೆಗೆ 9000 ಪೊಲೀಸರು ಕೋವಿಡ್ ಸೋಂಕಿಗೆ ತುತ್ತಾಗಿ ವಾಸಿಯಾಗಿದ್ದಾರೆ. ಅವರ ಈ ದೈರ್ಯಕ್ಕೆ ಅವರಿಗೂ ಮತ್ತು ಅವರ ಸಂಸಾರಕ್ಕೂ ಧನ್ಯವಾದಗಳು ಎಂದು ಹೇಳಿದರು. ಈ ಸಂದರ್ಭದಲ್ಲಿ ಸರ್ಕಾರದ ಅಪರ‌ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ ಅವರು ಸೇರಿದಂತೆ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಕಳೆದ ವರ್ಷ ವಿವಿಧ ಕಾರಣಗಳಿಂದ ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ ಎರಡು ನಿಮಿಷದ ಮೌನಾಚರಣೆ ಹಾಗೂ ಸಂಗೀತ ನುಡಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಪೊಲೀಸ್ ಇಲಾಖೆ ಹೊರತಂದಿರುವ ಸ್ಮರಣ ಸಂಚಿಕೆಯನ್ನು ಇದೆ‌ ಸಮಯದಲ್ಲಿ‌ ಬಿಡುಗಡೆ‌ ಮಾಡಲಾಯಿತು.

English summary
Karnataka State Police Department organized a photographic exhibition of "Smaranjali", which is being held today in the city's Chitrakala Parishat on the occasion of the police commemoration day. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X