ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೌರಿ ಲಂಕೇಶ್ ಹತ್ಯೆ; 15 ದಿನ ಪೊಲೀಸ್ ವಶಕ್ಕೆ ಋಷಿಕೇಶ್‌

|
Google Oneindia Kannada News

ಬೆಂಗಳೂರು, ಜನವರಿ 13 : ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮುರಳಿಯನ್ನು 15 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಲಾಗಿದೆ. ಜಾರ್ಖಂಡ್‌ನ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಎಸ್‌ಐಟಿ ಬಂಧಿಸಿ, ಬೆಂಗಳೂರಿಗೆ ಕರೆ ತಂದಿತ್ತು.

ಸೋಮವಾರ ಎಸ್‌ಐಟಿ ಪೊಲೀಸರು ಆರೋಪಿ ಋಷಿಕೇಶ್ ದೇವ್ಡೆಕರ್ ಅಲಿಯಾಸ್ ಮುರಳಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಮನವಿ ಮಾಡಿತ್ತು.

ಗೌರಿ ಲಂಕೇಶ್ ಹತ್ಯೆ; ಜಾರ್ಖಂಡ್‌ನಲ್ಲಿ 18ನೇ ಆರೋಪಿ ಬಂಧನಗೌರಿ ಲಂಕೇಶ್ ಹತ್ಯೆ; ಜಾರ್ಖಂಡ್‌ನಲ್ಲಿ 18ನೇ ಆರೋಪಿ ಬಂಧನ

Police Custody For Gauri Lankesh Murder Case Accused Rishikesh Devdikar

ನ್ಯಾಯಾಲಯ 15 ದಿನಗಳ ಕಾಲ ಆರೋಪಿಯನ್ನು ಪೊಲೀಸರ ವಶಕ್ಕೆ ನೀಡಿತು. ಜಾರ್ಖಂಡ್‌ನ ಧನಾಬಾದ್ ಜಿಲ್ಲೆಯ ಕತ್ರಾಸ್‌ನಲ್ಲಿನ ನಿವಾಸದಲ್ಲಿ ಋಷಿಕೇಶ್ ದೇವ್ಡೆಕರ್ ಬಂಧಿಸಲಾಗಿತ್ತು. ಮನೆ ಬಿಟ್ಟು ಬಂದಿರುವುದಾಗಿ ಹೇಳಿ ಅಲ್ಲಿನ ಪೆಟ್ರೋಲ್ ಬಂಕ್‌ನಲ್ಲಿ ಋಷಿಕೇಶ್ ಕೆಲಸ ಗಿಟ್ಟಿಸಿಕೊಂಡಿದ್ದ.

ಗೌರಿ ಹತ್ಯೆ ಪ್ರಕರಣ ಭೇದಿಸಲು ಸಹಕರಿಸಿದ ಸಿಬ್ಬಂದಿಗೆ ಬಹುಮಾನ ಘೋಷಣೆಗೌರಿ ಹತ್ಯೆ ಪ್ರಕರಣ ಭೇದಿಸಲು ಸಹಕರಿಸಿದ ಸಿಬ್ಬಂದಿಗೆ ಬಹುಮಾನ ಘೋಷಣೆ

44 ವರ್ಷದ ಋಷಿಕೇಶ್ ದೇವ್ಡೆಕರ್ ಗೌರಿ ಲಂಕೇಶ್ ಹತ್ಯೆ ಪ್ರಕರಣದ 18ನೇ ಆರೋಪಿ. ಚಾರ್ಜ್ ಶೀಟ್‌ನಲ್ಲಿ ಆರೋಪಿ ಹೆಸರು ಉಲ್ಲೇಖಿಸಿದ್ದ ಎಸ್‌ಐಟಿ ಪೊಲೀಸರು ಎರಡು ವರ್ಷಗಳಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಕಲಬುರ್ಗಿ ಹತ್ಯೆ : ಆರೋಪಿ ಪ್ರವೀಣ್ ಚತುರ್‌ ಗೌರಿ ಹತ್ಯೆಯಲ್ಲಿ ಸಾಕ್ಷಿ! ಕಲಬುರ್ಗಿ ಹತ್ಯೆ : ಆರೋಪಿ ಪ್ರವೀಣ್ ಚತುರ್‌ ಗೌರಿ ಹತ್ಯೆಯಲ್ಲಿ ಸಾಕ್ಷಿ!

ಋಷಿಕೇಶ್ ದೇವ್ಡೆಕರ್ ಮಹಾರಾಷ್ಟ್ರ ಮೂಲದವನು. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆ ಬಂಧನವಾದ ಬಳಿಕ ಈತ ಜಾರ್ಖಂಡ್‌ಗೆ ಪರಾರಿಯಾಗಿದ್ದ. ಅಲ್ಲಿನ ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ.

ಗೌರಿ ಲಂಕೇಶ್ ಹತ್ಯೆ ಮಾಡಿದ ಪಿಸ್ತೂಲ್ ನಾಶ ಪಡಿಸುವಲ್ಲಿ ಆರೋಪಿ ಪ್ರಮುಖ ಪಾತ್ರ ವಹಿಸಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. 2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್‌ರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

English summary
Bengaluru court ordered for 15 days police custody for Gauri Lankesh murder case accused Rishikesh Devdikar. Murder case accused arrested by SIT at Jharkhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X