ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಕಮೀಷನರೇಟ್ ಇತಿಹಾಸ ನಿಮಗೆಷ್ಟು ಗೊತ್ತು?

|
Google Oneindia Kannada News

ಬೆಂಗಳೂರು, ಮೇ. 17: ಬೆಂಗಳೂರಿನ 37 ನೇ ಕಮೀಷನರ್ ಅಗಿ ಸಿ.ಎಚ್‌. ಪ್ರತಾಪ್ ರೆಡ್ಡಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮೀಷನರೇಟ್ ತನ್ನದೇ ಆದ ಇತಿಹಾಸ ಹೊಂದಿದೆ. ಈವರೆಗೂ 37 ಐಪಿಎಸ್ ಅಧಿಕಾರಿಗಳು ಕಮೀಷನರ್ ಹುದ್ದೆ ಅಲಂಕರಿಸಿದ್ದಾರೆ. ಬೆಂಗಳೂರು ಪೊಲೀಸ್ ಕಮೀನಷರೇಟ್ ಇತಿಹಾಸದ ವಿವರ ಇಲ್ಲಿದೆ.

ಬೆಂಗಳೂರು ಪೊಲೀಸ್ ಕಮೀಷನರೇಟ್ ಆರಂಭ:

ಕರ್ನಾಟಕದಲ್ಲಿ ಮೊಟ್ಟ ಮೊದಲು ಪೊಲೀಸ್ ಕಮೀನಷರೇಟ್ ಪ್ರಾರಂಭವಾಗಿದ್ದು ಬೆಂಗಳೂರಿನಲ್ಲಿ. 1963 ರಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀನಷರೇಟ್ ಆಗಿ ರೂಪಗೊಂಡಿತು. ಇದಕ್ಕೂ ಮೊದಲು ಬೆಂಗಳೂರು ನಗರ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ಘಟಕಗಳನ್ನು ಹೊಂದಿತ್ತು. ಇಬ್ಬರು ಐಪಿಎಸ್ ಅಧಿಕಾರಿಗಳು ಎಸ್ಪಿಗಳಾಗಿದ್ದರು. 1963 ರಲ್ಲಿ ಎಸ್. ನಿಜಲಿಂಗಪ್ಪ ಸರ್ಕಾರ ಬೆಂಗಳೂರನ್ನು ಪೊಲೀಸ್ ಕಮೀಷನರೇಟ್ ರಚನೆ ಮಾಡಿದ್ದರು.

ಬೆಂಗಳೂರು ಮೊದಲ ಕಮೀನಷನರ್:

ಬೆಂಗಳೂರು 1963 ರಲ್ಲಿ ಪೊಲೀಸ್ ಕಮೀನಷರೇಟ್ ಆಗಿ ಪರಿವರ್ತನೆ ಆಯಿತು. ಡಿಐಜಿಪಿ ದರ್ಜೆಯ ಸಿ. ಚಾಂಡಿ ಎಂಬ ಐಪಿಎಸ್ ಅಧಿಕಾರಿ ಬೆಂಗಳೂರು ಕಮೀಷನರೇಟ್ ನ ಮೊದಲ ಕಮೀಷನರ್ ಆಗಿ ಕಾರ್ಯ ನಿರ್ವಹಿಸಿದ್ದರು. ಅವತ್ತಿಗೆ ಬೆಂಗಳೂರಿನಲ್ಲಿ ಕೇವಲ 37 ಪೊಲೀಸ್ ಠಾಣೆಗಳಿದ್ದವು. ಐದು ಪೊಲೀಸ್ ಉಪ ವಿಭಾಗಗಳನ್ನಾಗಿ ರಚನೆ ಮಾಡಿ ಐವರು ಡಿಸಿಪಿಗಳನ್ನು ನೇಮಕ ಮಾಡಲಾಗಿತ್ತು.

Bengaluru police commissioners list and names from 1963

ಹಾಲಿ ಪೊಲೀಸ್ ಕಮೀಷನರೇಟ್:

ಬೆಂಗಳೂರು ಪ್ರಸ್ತುತ ಎಂಟು ಉಪ ವಿಭಾಗಗಳನ್ನು ಹೊಂದಿದೆ. ಎಂಟು ಉಪ ವಿಭಾಗಕ್ಕೂ ಐಪಿಎಸ್ ಅಧಿಕಾರಿಗಳನ್ನು ಡಿಸಿಪಿಗಳನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ಕೇಂದ್ರ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪುರ್ವ, ಬೆಂಗಳೂರು ಆಗ್ನೇಯ, ಬೆಂಗಳೂರು ಈಶಾನ್ಯ ವಿಭಾಗ ಹಾಗೂ ವೈಟ್‌ ಫೀಲ್ಡ್ ಉಪ ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಬೆಂಗಳೂರು ಸಂಚಾರ ವಿಭಾಗಕ್ಕೆ ಜಂಟಿ ಪೊಲೀಸ್ ಆಯುಕ್ತರು ಹಾಗೂ ಎರಡು ಉಪ ವಿಭಾಗಗಳನ್ನು ರಚನೆ ಮಾಡಲಾಗಿದೆ. ಒಟ್ಟಾರೆ ಬೆಂಗಳೂರಿನಲ್ಲಿ 166 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆ ಹಾಗೂ ಸಂಚಾರ ವಿಭಾಗದ 44 ಪೊಲೀಸ್ ಠಾಣೆಗಳಿವೆ. ಇದರ ಜತೆಗೆ ಬೆಂಗಳೂರಿಗೆ ಸೀಮಿತಗಳಿಸಿ ಸಿಟಿ ಕ್ರೈಂ ಬ್ರಾಂಚ್ ವಿಶೇಷ ಪೊಲೀಸ್ ಘಟಕ ( CCB ರಚನೆ ಮಾಡಲಾಗಿದೆ. ಸಿಸಿಬಿ ಮುಖ್ಯಸ್ಥರಾಗಿ ಜಂಟೀ ಪೊಲೀಸ್ ಆಯುಕ್ತರು, ಅವರ ಅಧೀನದಲ್ಲಿ ಇಬ್ಬರು ಎಸ್ಪಿ ದರ್ಜೆಯ ಅಧಿಕಾರಿಗಳನ್ನು ನೇಮಿಸಲಾಗಿದೆ. ಇನ್ನು ಬೆಂಗಳೂರು ಕಮೀಷನರ್ ಜತೆಗೆ ಇಬ್ಬರು ಹೆಚ್ಚುವರಿ ಪೊಲೀಸ್ ಕಮೀನಷರ್ ಗಳನ್ನು ( ಪೂರ್ವ ಮತ್ತು ಪಶ್ಚಿಮ) ನಿಯೋಜಿಸಲಾಗಿದೆ.

Bengaluru police commissioners list and names from 1963

ಕಮೀಷನರ್ ಅವಧಿ:

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅವಧಿ ಒಂದು ವರ್ಷ ಮಾತ್ರ. ಎಡಿಜಿಪಿ ದರ್ಜೆಯ ಪೊಲೀಸ್ ಅಧಿಕಾರಿಯನ್ನು ಬೆಂಗಳೂರು ಪೊಲೀಸ್ ಕಮೀನಷರ್ ಅನ್ನಾಗಿ ನೇಮಕ ಮಾಡಲಾಗುತ್ತದೆ. ಬೆಂಗಳೂರು ಪೊಲೀಸ್ ಕಮೀನಷರ್ ಆಗಿ ಅತಿ ಹೆಚ್ಚು ಸೇವೆ ಸಲ್ಲಿಸಿದವರು ಪಿ.ಜಿ. ಹರ್ಲಂಕರ್. ಮೂರು ವರ್ಷ 9 ತಿಂಗಳು ಅತಿ ದೀರ್ಘ ಪೊಲೀಸ್ ಕಮೀನಷರ್ ಆಗಿ ಸೇವೆ ಸಲ್ಲಿಸಿದ ಅಧಿಕಾರಿ. 1983 ಮಾರ್ಚ್ ನಿಂದ 1986 ಡಿಸೆಂಬರ್ 08 ರ ವರೆಗೂ ಸೇವೆ ಸಲ್ಲಿಸಿದ್ದಾರೆ. ಕೇವಲ 43 ದಿನ ಪೊಲೀಸ್ ಕಮೀಷನರ್ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಅಧಿಕಾರಿ ಅಲೋಕ್ ಕುಮಾರ್.

Bengaluru police commissioners list and names from 1963

ಬೆಂಗಳೂರು ಪೊಲೀಸ್ ಕಮೀಷನರ್: ಹೆಸರು ಮತ್ತು ಅವಧಿ

1. ಸಿ. ಚಾಂಡಿ, ಐಪಿಎಸ್ 1963 ಜುಲೈ 1 ರಿಂದ 1966 ಏಪ್ರಿಲ್ 19

2. ಖಾದರ್ ಆಲಿ, 1966 20, ಏಪ್ರಿಲ್ ರಿಂದ 1968 ಅಕ್ಟೋಬರ್ 31st

3. ಎಚ್‌. ವೀರಭದ್ರಯ್ಯ, 1968 ಅಕ್ಟೋಬರ್ 31 ರಿಂದ 1972 ಜುಲೈ 1

4. ಕೆ.ಜಿ. ರಾಮಣ್ಣ, 1968 ಜೂನ್ 2 ರಿಂದ 1973 ಸೆಪ್ಟೆಂಬರ್ 19

5. ಎಂ.ಎಲ್. ಚಂದ್ರಶೇಖರ್ , 1973 ಸೆಪ್ಟೆಂಬರ್ 20, ರಿಂದ 1976 ಜೂನ್ 1

6. ಟಿ ಆಲ್ಬರ್ಟ್ ಮನೋರಾಜ್ 1976 ಜೂನ್ 2 ರಿಂದ 1976 ಅಕ್ಟೋಬರ್ 31

7. ಬಿ.ಎನ್‌. ಗರುಡಾಚಾರ್ 1976 ಅಕ್ಟೋಬರ್ 31 ರಿಂದ 1980 ಡಿಸೆಂಬರ್ 30

8. ಎ. ಅರ್. ನಿಜಾಮುದ್ದೀನ್, 1980 ಡಿಸೆಂಬರ್ 31 ರಿಂದ 1983 ಮಾರ್ಚ್ 2

9. ಪಿ.ಜಿ. ಹರ್ಲಂಕರ್, 1983 ಮಾರ್ಚ್ 2 ರಿಂದ 1986 ಡಿಸೆಂಬರ್ 08

10. ಕೆ. ಯು. ಬಾಲಕೃಷ್ಣರಾವ್ , 1986 ಡಿಸೆಂಬರ್ 08 ರಿಂದ 1987 ಅಕ್ಟೋಬರ್ 31,

11. ಎ.ಅರ್. ಶ್ರೀಧರನ್ 1987 ಅಕ್ಟೊಬರ್ 31, ರಿಂದ 1988 ಡಿಸೆಂಬರ್ 1

12. ಎಸ್.ಎನ್.ಎಸ್. ಮೂರ್ತಿ, 1988 ಡಿಸೆಂಬರ್ 1 ರಿಂದ 1989 ಜೂನ್ 5

13. ರಾಮಲಿಂಗಮ್ , 1989 ಜೂನ್ 5 ರಿಂದ 1992 ಜುಲೈ 31

Bengaluru police commissioners list and names from 1963

14. ಚಂದುಲಾಲ್, 1992 ಜುಲೈ 31 ರಿಂದ 1993 ಸೆಪ್ಟೆಂಬರ್ 15,

15. ಪಿ. ಕೋದಂಡರಾಮಯ್ಯ 1993 ಸೆಪ್ಟೆಂಬರ್ 15 ರಿಂದ 1994 ಡಿಸೆಂಬರ್ 21

16. ಟಿ. ಶ್ರೀನಿವಾಸುಲು, 1994 ಡಿಸೆಂಬರ್ 21 ರಿಂದ 1996 ಜೂನ್ 13,

17. ಎಸ್. ಸಿ ಬರ್ಮನ್, 1996 ಜೂನ್ 13, ರಿಂದ 1997 ಏಪ್ರಿಲ್ 2 ,

18. ಎಲ್. ರೇವಣ ಸಿದ್ಧಯ್ಯ, 1997 ಏಪ್ರಿಲ್ 14 ರಿಂದ 1999 ನವೆಂಬರ್ 18

19. ಟಿ. ಮಡಿಯಾಳ್, 1999 ನವೆಂಬರ್ 18 ರಿಂದ 2001 ಅಕ್ಟೋಬರ್ 31

20. ಎಚ್‌.ಟಿ. ಸಾಂಗ್ಲಿಯಾನ, 2001 ಅಕ್ಟೋಬರ್ 31 ರಿಂದ 21 ಅಕ್ಟೋಬರ್ 2002

21. ಎಂ.ಡಿ. ಸಿಂಗ್ 21 ಅಕ್ಟೋಬರ್ 2002 ರಿಂದ 2003 ಮೇ. 2.

22. ಮರಿಸ್ವಾಮಿ, 2003 ಮೇ. 2. ರಿಂದ 2005 ಜೂನ್ 08

23. ಅಜಯ್ ಕುಮಾರ್ ಸಿಂಗ್, 2005 ಜೂನ್ 08 ರಿಂದ 2006 ಜೂನ್ 21,

24. ಅಚ್ಯುತ ರಾವ್, 2006 ಜೂನ್ 21, ರಿಂದ 2008 ಜುಲೈ 11

Bengaluru police commissioners list and names from 1963

25. ಶಂಕರ್ ಬಿದರಿ 2008 ಜುಲೈ 11 ರಿಂದ 2011 ಮೇ. 2

26. ಬಿ.ಜಿ. ಜ್ಯೋತಿ ಪ್ರಕಾಶ್ ಮಿರ್ಜಿ, 2011 ಮೇ. 2 ರಿಂದ 2013 ಏಪ್ರಿಲ್ 5,

27. ರಾಘವೇಂದ್ರ ಔರಾದ್ಕರ್, 2013 ಏಪ್ರಿಲ್ 5, ರಿಂದ 2013 ಮೇ. 20

28. ಬಿ.ಜಿ ಜ್ಯೋತಿ ಪ್ರಕಾಶ್ ಮಿರ್ಜಿ, 2013 ಮೇ. 20 ರಿಂದ 2013 ಜೂನ್‌ 30

29. ರಾಘವೇಂದ್ರ ಔರಾದ್ಕರ್ 2013 ಜೂನ್‌ 30 ರಿಂದ 2014 ಜುಲೈ 21

30. ಎಂ.ಎನ್. ರೆಡ್ಡಿ, 2014 ಜುಲೈ 21 ರಿಂದ 2015 ಜುಲೈ 31

31. ಎನ್. ಎಸ್. ಮೇಘರಿಕ್ 2015 ಜುಲೈ 31 ರಿಂದ 2016 ಡಿಸೆಂಬರ್ 31

32. ಪ್ರವೀಣ್ ಸೂದ್, 2017 ಜನವರಿ 1 ರಿಂದ 2017 ಜುಲೈ 31

33. ಟಿ. ಸುನೀಲ್ ಕುಮಾರ್ 2017 ಜುಲೈ 31 ರಿಂದ 2019 ಜೂನ್ 17

34. ಅಲೋಕ್ ಕುಮಾರ್ 2019 ಜೂನ್ 17 ರಿಂದ 2019 ಆಗಸ್ಟ್ 02

35. ಭಾಸ್ಕರರಾವ್ 2019 ಆಗಸ್ಟ್ 02 ರಿಂದ 2020 ಆಗಸ್ಟ್ 01,

36. ಕಮಲ್ಪಂಥ್ 2020 ಆಗಸ್ಟ್ 01, 2022, ಮೇ. 17

37. ಸಿ.ಎಚ್‌. ಪ್ರತಾಪ್ ರೆಡ್ಡಿ, 2022, ಮೇ. 17 ರಿಂದ ಅರಂಭ.

Recommended Video

ಪ್ರವಾಹದಿಂದ ತತ್ತರಿಸಿದ ಅಸ್ಸಾಂ:ಸಂಕಷ್ಟದಲ್ಲಿ ಸಿಲುಕಿದ 4 ಲಕ್ಷಕ್ಕೂ ಹೆಚ್ಚು ಜನ | Oneindia Kannada

English summary
Bengaluru city police commissionerate history and police commissioners names from 1963 to till date. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X