• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರವಿಬೆಳಗೆರೆ ಕಚೇರಿ ಮೇಲೆ ಸಿಸಿಬಿ ದಾಳಿ, ಹಲವಾರು ವಸ್ತುಗಳು ವಶ

By Mahesh
|
   ರವಿ ಬೆಳಗೆರೆ ಬಂಧನ | ಕಚೇರಿ ಮೇಲೆ ಸಿಸಿಬಿ ದಾಳಿ, ಹಲವಾರು ವಸ್ತುಗಳು ವಶ | Oneindia Kannada

   ಬೆಂಗಳೂರು, ಡಿಸೆಂಬರ್ 08: ಪತ್ರಕರ್ತ ರವಿ ಬೆಳಗೆರೆ ಅವರು ಹಾಯ್ ಬೆಂಗಳೂರು ಪತ್ರಿಕೆಯ ಮಾಜಿ ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಪ್ರಕರಣದ ಬಗ್ಗೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರು ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ವಿವರಗಳನ್ನು ನೀಡಿದರು.

   ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ರವಿ ಬೆಳಗೆರೆ

   ಬೆಂಗಳೂರು ಕ್ರೈಂ ವಿಭಾಗದ ಹೆಚ್ಚುವರಿ ಆಯುಕ್ತ ಸತೀಶ್ ಕುಮಾರ್ ಅವರ ನೇತೃತ್ವದ ಸಿಸಿಬಿ ಪೊಲೀಸರು ಶುಕ್ರವಾರ ಮಧ್ಯಾಹ್ನ ವೇಳೆಗೆ ಬೆಂಗಳೂರಿನ ಪದ್ಮನಾಭನಗರದಲ್ಲಿರುವ 'ಹಾಯ್ ಬೆಂಗಳೂರು' ಕಚೇರಿ ಮೇಲೆ ದಾಳಿ ನಡೆಸಿದರು.

   ಈ ವೇಳೆ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಹೇಳಿದರು.

   ಸುನಿಲ್ ಹತ್ಯೆಗೆ ಸುಪಾರಿ, ಬೆಳೆಗೆರೆ ವಿರುದ್ಧ ಎಫ್ಐಆರ್ : ಎಸಿಪಿ ಸತೀಶ್

   ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಬಳಸಿದ್ದ ಆಯುಧ(ಗನ್)ದ ಮೂಲ ಹುಡುಕಿಕೊಂಡು ಹೋದಾಗ ಈ ಕೇಸ್ ಬಗ್ಗೆ ತಿಳಿದು ಬಂದಿತು.

   ನನಗೆ ನಿಜಕ್ಕೂ ಆಘಾತವಾಗಿದೆ: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ

   ಈ ಪ್ರಕರಣ ಆರೋಪಿ ತಾಹೀರ್ ಹುಸೇನ್ ನೀಡಿದ ಮಾಹಿತಿ ಮೇಲೆ ಸಿಸಿಬಿ ಪೊಲೀಸರು ಸರ್ಚ್ ವಾರೆಂಟ್ ಪಡೆದು ರವಿ ಬೆಳಗೆರೆ ಅವರ ಕಚೇರಿ, ಮನೆ ಮೇಲೆ ದಾಳಿ ನಡೆಸಿದರು.

   ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್

   ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್

   ವೆಪನ್ ಡೀಲರ್ ಆಗಿರುವ ತಾಹೀರ್ ಹುಸೇನ್ ಅಲಿಯಾಸ್ ಅನೂಪ್ ಗೌಡನನ್ನು ಡಿಸೆಂಬರ್ 03ರಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಜಯಪುರದ ಚಡಚಣದ ಶಶಿಧರ ರಾಮಚಂದ್ರ ಮುಂಡೆವಾಡಿ ಹೆಸರು ತಿಳಿಸುತ್ತಾನೆ. ತಾಹೀರ್ ನಿಂದ ಶಶಿಧರ 2 ಜೀವಂತ ಗುಂಡು ಪಡೆದಿರುತ್ತಾನೆ. ಆದರೆ, ಆತನ ಬಳಿ ಪಿಸ್ತೂಲ್ ಇರುವ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ.

   ಶಶಿಧರ ರಾಮಚಂದ್ರ ಮಂಡೇವಾಡಿ

   ಶಶಿಧರ ರಾಮಚಂದ್ರ ಮಂಡೇವಾಡಿ

   ಶಶಿಧರ ಮುಂಡೆವಾಡಗಿ ಎಂಬಾತನನ್ನು ಡಿಸೆಂಬರ್ 07ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ರವಿ ಬೆಳಗೆರೆ ಅವರು ಸುಪಾರಿ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿತು. ಆಗಸ್ಟ್ 28, 2017ರಂದು ಶಶಿಧರ ಹಾಗೂ ಆತನ ಸಹಚರ ವಿಜು ಬಡಿಗೇರ್ ಅವರು ಹಾಯ್ ಬೆಂಗಳೂರು ಕಚೇರಿಗೆ ಹೋಗಿರುತ್ತಾರೆ.

   * ಈ ಸಂದರ್ಭದಲ್ಲಿ ಒಂದು ಗನ್, 04 ಜೀವಂತ ಗುಂಡುಗಳು, 01 ಚಾಕು ನೀಡಿ ಸುನೀಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲುವಂತೆ ರವಿ ಬೆಳಗೆರೆ ಸೂಚಿಸುತ್ತಾರೆ. ಆತನ ಮೇಲೆ ವೈಯಕ್ತಿಕ ದ್ವೇಷವಿದೆ ಎಂದು ರವಿ ಹೇಳಿರುತ್ತಾರೆ.

   ತಾಹೀರ್ ಹುಸೇನ್ ಅಲಿಯಾಸ್ ಅನೂಪ್

   ತಾಹೀರ್ ಹುಸೇನ್ ಅಲಿಯಾಸ್ ಅನೂಪ್

   ಸುಪಾರಿ ಮೊತ್ತದ ಮುಂಗಡವಾಗಿ 15,000 ರು ನೀಡಿರುತ್ತಾರೆ. ಆದರೆ, ಸುನಿಲ್ ಹತ್ಯೆ ಮಾಡುವಲ್ಲಿ ವಿಫಲರಾದ ಶಾರ್ಪ್ ಶೂಟರ್ಸ್ ಗಳು ಆಯುಧಗಳನ್ನು ವಾಪಸ್ ಮಾಡಿ ಮುಂದಿನ ತಿಂಗಳು ಮತ್ತೆ ಪ್ರಯತ್ನಿಸುವುದಾಗಿ ಹೇಳುತ್ತಾರೆ.

   * ಸುನೀಲ್ ಹೆಗ್ಗರವಳ್ಳಿ ಕೊಲೆಯತ್ನದ ಬಗ್ಗೆ ಮಾಹಿತಿ ಸಿಕ್ಕಿದ ಬಳಿಕ ರವಿ ಬೆಳೆಗೆರೆ ಹಾಗೂ ಶಾರ್ಪ್ ಶೂಟರ್ಸ್ ಮೇಲೆ ಪ್ರಕರಣ ದಾಖಲಿಸಿಕೊಂಡು ಸುಬ್ರಮಣ್ಯಪುರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

   ರವಿ ಬೆಳೆಗೆರೆ ವಿರುದ್ಧ ದಾಖಲಾದ ಕೇಸುಗಳು

   ರವಿ ಬೆಳೆಗೆರೆ ವಿರುದ್ಧ ದಾಖಲಾದ ಕೇಸುಗಳು

   ರವಿ ಬೆಳಗೆರೆ ಅವರ ಪದ್ಮನಾಭನಗರದ ಮನೆ, ಕಚೇರಿ, ಕಾರು ತಪಾಸಣೆ(ಮಧ್ಯಾಹ್ನ 1.30ರ ವೇಳೆಗೆ) ನಡೆಸಿದರು. ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಹಾಗೂ 120 (ಬಿ) ಅನ್ವಯ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ 1958ರ ಸೆಕ್ಷನ್ 3 ಹಾಗೂ 25ರ ಅನ್ವಯ ಸುಬ್ರಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

   ದಾಳಿ ವೇಳೆ ದಾಖಲಾದ ವಸ್ತುಗಳು

   ದಾಳಿ ವೇಳೆ ದಾಖಲಾದ ವಸ್ತುಗಳು

   * ಒಂದು ರಿವಾಲ್ವರ್, 53 ಜೀವಂತ ಗುಂಡುಗಳು, ಒಂದು ಬಳಸಿರುವ ಗುಂಡು

   * ಚಿಂಕೆ ಚರ್ಮ

   * ಒಂದು ಡಬ್ಬಲ್ ಬ್ಯಾರೆಲ್ ಗನ್, 41 ಜೀವಂತ ಗುಂಡುಗಳು

   * 1.5 ಅಡಿ X 1.5 ಅಡಿ ಉದ್ದಗಲದ ಒಂದು ದೊಡ್ಡ ಆಮೆ ಚಿಪ್ಪು

   ಶಶಿಧರ ವಿರುದ್ಧದ ಕೇಸುಗಳು

   * 2006ರಲ್ಲಿ ಮುತ್ತು ಮಾಸ್ತರ್ ಕೊಲೆ

   * 2013ರಲ್ಲಿ ಬಸಪ್ಪ ಹರಿಜನ ಕೊಲೆ

   * 2014ರಲ್ಲಿ ಸ್ನೇಹಿತ ಸುರೇಶ್ ಲಾಳಸಂಗಿ ಕೊಲೆ

   * 2016ರಲ್ಲಿ ಸುಲಿಗೆ ಪ್ರಕರಣ, ಇಂಡಿ ಪೊಲೀಸ್ ಠಾಣೆ ವ್ಯಾಪ್ತಿ.

   * 2017ರಲ್ಲಿ ಮೀರಜ್ ನ ಗಾಂಧಿ ಚೌಕ್ ನಲ್ಲಿ ಶಸ್ತ್ರಾಸ್ತ್ರ ಹೊಂದಿರುವ ಆರೋಪದ ಕೇಸ್.

   English summary
   Supari to Kill Sunil Heggaravalli: Ravi Belagere and the contract killers have been booked under Section 307 (attempt to murder) and 120 B(criminal conspiracy) of the Indian Penal Code. Weapons have also been recovered from them said Bengaluru city police Commissioner T Suneel Kumar
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X