ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಬಾಡಿಗೆ ಮನೆ ವಾಸಿಗಳ ವಿವರ ಪೊಲೀಸ್ APPನಲ್ಲಿ ದಾಖಲಿಸಬೇಕು!

|
Google Oneindia Kannada News

ಬೆಂಗಳೂರು, ಜು. 07: ರಾಜಧಾನಿಯಲ್ಲಿ ಬಾಡಿಗೆ ಮನೆ ಹೊಂದಿದ್ದೀರಾ ? ಹಾಗಿದ್ದರೆ ಮೊದಲು ಈ ಸ್ಟೋರಿ ಓದಿ. ಇನ್ನು ಮುಂದೆ ಬಾಡಿಗೆ ಮನೆಗೆ ಬರುವವರ ಪೂರ್ಣ ವಿವರಗಳನ್ನು ಆಧಾರ್ ನಂಬರ್ ಸಮೇತ ಪೊಲೀಸ್ APPನಲ್ಲಿ ನಮೂದಿಸಬೇಕು. ಪೊಲೀಸರು ಅತಿ ಶೀಘ್ರದಲ್ಲಿಯೇ ಈ ವಿನೂತನ ಆಫ್ ರಾಜಧಾನಿ ಜನರಿಗೆ ಪರಿಚಯಿಸಲಿದ್ದಾರೆ. ಬಾಡಿಗೆ ಮನೆ ಮಾಲೀಕರು ತಮ್ಮ ಮನೆಯ ಬಾಡಿಗೆದಾರರ ವಿವರಗಳನ್ನು ಕಡ್ಡಾಯವಾಗಿ ನೀಡಬೇಕು.

ತಪ್ಪಿದಲ್ಲಿ ಬಾಡಿಗೆದಾರರಿಂದ ಆಗುವ ಅನಾಹುತಕ್ಕೆ ಮನೆ ಮಾಲೀಕರು ಹೊಣೆಯಾಗಬೇಕಾಗುತ್ತದೆ. ಬಾಡಿಗೆದಾರರ ವಿವರ ಪೊಲೀಸರಿಗೆ ನೀಡದಿದ್ದರೆ, ಅವರಿಂದ ಏನಾದರೂ ಅಪರಾಧ ಕೃತ್ಯ ವರದಿಯಾದಲ್ಲಿ, ಮನೆ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ತಂತ್ರಜ್ಞಾನ ಬಳಸಿಕೊಂಡು ಅಪರಾಧ ನಿಯಂತ್ರಣಕ್ಕೆ ಬೆಂಗಳೂರು ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಲಾಕ್ ಡೌನ್‌ ಸಡಿಲವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾತ್ತಿವೆ. ಬಹುತೇಕ ಅಪರಾಧ ಕೃತ್ಯಗಳಲ್ಲಿ ಹೊರ ರಾಜ್ಯದವರೇ ಭಾಗಿಯಾಗುತ್ತಿರುವ ಕಾರಣ ಇದಕ್ಕೆ ಕಡಿವಾಣ ಹಾಕಲು ಬೆಂಗಳೂರು ಪೊಲೀಸರು ಹೊಸ ಐಡಿಯಾ ಕಂಡು ಕೊಂಡಿದ್ದಾರೆ.

ರೌಡಿ ಚುಟವಟಿಕೆ ಮೇಲೆ ನಿಗಾ ಇಡಲು ಸೂಚನೆ

ರೌಡಿ ಚುಟವಟಿಕೆ ಮೇಲೆ ನಿಗಾ ಇಡಲು ಸೂಚನೆ

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಯಾವುದೇ ಅಪರಾಧ ಪ್ರಕರಣಗಳು ವರದಿಯಾಗುತ್ತಿರಲಿಲ್ಲ. ಇದೀಗ ಗಲ್ಲಿ ಗಲ್ಲಿಯಲ್ಲೂ ರೌಡಿ ಗ್ಯಾಂಗ್ ವಾರ್ ಆಗುತ್ತಿವೆ. ಇತ್ತೀಚೆಗೆ ಕೆ.ಆರ್. ಪುರದಲ್ಲಿ ನಡೆದ ಬಾಂಗ್ಲಾದೇಶಿ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣವಂತೂ ಬೆಂಗಳೂರಿನ ಮರ್ಯಾದೆಯನ್ನು ರಾಷ್ಟ್ರ ಮಟ್ಟದಲ್ಲಿ ಹರಾಜು ಹಾಕಿತ್ತು. ಕಳೆದ ಹದಿನೈದು ದಿನದಲ್ಲಿ ಹಳೇ ವೈಷಮ್ಯದಿಂದ ನಾಲ್ಕು ರೌಡಿ ಕಾಳಗ ನಡೆದಿವೆ. ಫೈನಾನ್ಷಿಯರ್ ಮದನ್ ಕೊಲೆ, ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಹೀಗೆ ಸಾಲು ಸಾಲು ಅಪರಾಧ ಪ್ರಕರಣಗಳು ಬೆಂಗಳೂರಿಗರ ನಿದ್ದೆ ಗೆಡಿಸಿದೆ. ಹೀಗಾಗಿ ಬೆಂಗಳೂರಿನ ರೌಡಿ, ರೌಡಿ ಚಟುವಟಿಕೆ ವಿರುದ್ಧ ನಿಗಾ ಇಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಹೊರ ರಾಜ್ಯದವರಿಂದ ಅಪರಾಧ ಹೆಚ್ಚಳ

ಹೊರ ರಾಜ್ಯದವರಿಂದ ಅಪರಾಧ ಹೆಚ್ಚಳ

ರಾಜಧಾನಿಯಲ್ಲಿ ಇತ್ತೀಚೆಗೆ ಗಲ್ಲಿ ಗಲ್ಲಿಯಲ್ಲೂ ಗಾಂಜಾ ಮೂಟೆಗಳು ಸಿಗುತ್ತಿವೆ. ಈ ಹಿಂದೆ ಗ್ರಾಂ ಲೆಕ್ಕದಲ್ಲಿ ಸಿಗುತ್ತಿದ್ದ ಮಾದಕ ವಸ್ತುಗಳು ಇದೀಗ ಕೆ.ಜಿ. ಗಟ್ಟಲೇ ಜಪ್ತಿಯಾಗುತ್ತಿವೆ. ಬೆಂಗಳೂರು ಉಡ್ತಾ ಬೆಂಗಳೂರಾಗಿ ಪರಿವರ್ತನೆಯಾಗುತ್ತಿದೆ. ಇದರ ಜಾಡು ಹಿಡಿದು ನೋಡಿದರೆ ಬಹುತೇಕ ಡ್ರಗ್ ಪೆಡ್ಲರ್ ವಿದೇಶಿಯರು ಇಲ್ಲವೇ, ಹೊರ ರಾಜ್ಯದವರು. ಹೀಗಾಗಿ ಬೆಂಗಳೂರಿನಲ್ಲಿ ಮಾದಕ ವಸ್ತು ಜಾಲ ಕುರಿತ ಅಪರಾಧಗಳನ್ನು ನಿಯಂತ್ರಿಸಲು ಬೆಂಗಳೂರು ಪೊಲೀಸರು ಪ್ಲಾನ್ ರೂಪಿಸಿದ್ದಾರೆ. ಬೆಂಗಳೂರಿನಲ್ಲಿರುವ ವಿದೇಶಿಯರು ಹಾಗೂ ಹೊರ ರಾಜ್ಯದವರ ತಲೆ ಎಣಿಕೆ ಕಾರ್ಯಕ್ಕೆ ಬೆಂಗಳೂರು ಪೊಲೀಸರು ಹೊಸ ಐಡಿಯಾ ಕಂಡುಕೊಂಡಿದ್ದಾರೆ.

ಹೊಸ ಆಪ್ ಅಭಿವೃದ್ಧಿ

ಹೊಸ ಆಪ್ ಅಭಿವೃದ್ಧಿ

ರಾಜಧಾನಿ ಬೆಂಗಳೂರಿಗೆ ಹೊರ ರಾಜ್ಯ, ದೇಶದಿಂದ ಬರುವರು ಪಡೆಯುವ ಬಾಡಿಗೆ ಮನೆಯ ವಿವರ ಪೊಲೀಸರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಆಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಮನೆ ಮಾಲೀಕರು ತಮ್ಮ ಮನೆಯ ಬಾಡಿಗೆದಾರರ ಸಂಪೂರ್ಣ ವಿವರಗಳನ್ನು APPನಲ್ಲಿ ದಾಖಲಿಸಬೇಕು. ಬಾಡಿಗೆಗೆ ಬಂದವರ ವಿವರ, ಅವರ ಮನೆಯಲ್ಲಿರುವರ ವಿವರ, ಎಷ್ಟು ದಿನದ ವರೆಗೆ ಅವರುಇದ್ದರು, ಮನೆ ಖಾಲಿ ಮಾಡಿದ ವಿವರವನ್ನು ಈ ಆಪ್‌ನಲ್ಲಿ ಮನೆ ಮಾಲೀಕರು ನಮೂದಿಸಬೇಕು. ರಾಜಧಾನಿಯಲ್ಲಿ ನೆಲೆಸಿರುವ ವಿದೇಶಿಯರ ಹಾಗೂ ಹೊರ ರಾಜ್ಯದ ಬಾಡಿಗೆ ವಾಸಿಗಳ ವಿವರ ಸ್ಥಳೀಯ ಪೊಲೀಸರ ಕೈ ಸೇರಿರುತ್ತದೆ. ಯಾವುದೇ ಅಪರಾಧ ಕೃತ್ಯ ವರದಿಯಾದ ಕೂಡಲೇ ಅವರ ವಿವರ ಸಂಗ್ರಹಿಸಿ ವಿಚಾರಣೆ ನಡೆಸಲು ಪೊಲೀಸರಿಗೆ ಅನುಕೂಲ ವಾಗಲಿದೆ. ಹೊರ ರಾಜ್ಯ ಹಾಗೂ ದೇಶೀಯರ ವಿವರ ಸಂಗ್ರಹಿಸುವ ಸಂಬಂಧ ವಿಶೇಷ ಆಪ್‌ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕ ಬಳಕೆಗೆ ಅವಕಾಶ ಮಾಡಿಕೊಡುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ತಿಳಿಸಿದ್ದಾರೆ.

Recommended Video

ಬೀದರ್ ನಲ್ಲಿ ಇತಿಹಾಸ ಸೃಷ್ಟಿಸಿದ ಭಗವಂತ್ ಖುಬಾ ಹಿನ್ನಲೆ ಆದ್ರು ಏನು..? | Oneindia Kannada
ಆಪ್ ನಲ್ಲಿ ನೋಂದಣಿ ಕಡ್ಡಾಯ

ಆಪ್ ನಲ್ಲಿ ನೋಂದಣಿ ಕಡ್ಡಾಯ

ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್‌ಗೆ ಸೀಮಿತಗೊಳಿಸಿ ಆಪ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದರಲ್ಲಿ ಬಾಡಿಗೆ ಮನೆದಾರರ ನೋಂದಣಿ ಕಲಂ ಇರಲಿದೆ. ಅದನ್ನು ಬಾಡಿಗೆ ಮನೆ ಮಾಲೀಕರು ತುಂಬಬೇಕು. ಕಾಲ - ಕಾಲಕ್ಕೆ ವಿವರಗಳನ್ನು ದಾಖಲಿಸಬೇಕು. ಇದು ಕೇವಲ ಬಾಡಿಗೆ ಮನೆ ಮಾಲೀಕರಿಗೆ ಮಾತ್ರವಲ್ಲದೇ ಪಿಜಿಗಳಿಗೂ ಅನ್ವಯವಾಗಲಿದೆ. ಹೀಗೆ ಮಾಡುವುದರಿಂದ ಬೆಂಗಳೂರು ನಗರಕ್ಕೆ ಹೊರಗಿನಿಂದ ಬರುವವರ ಸಂಪೂರ್ಣ ವಿವರ ಪೊಲೀಸರ ಕೈಯಲ್ಲಿರುತ್ತದೆ. ಹೀಗಾಗಿ ಏನಾದರೂ ಅಪರಾಧ ಕೃತ್ಯ ನಡೆದರೂ ಸಂಬಂಧಪಟ್ಟವರನ್ನು ತ್ವರಿತವಾಗಿ ಗುರುತು ಪತ್ತೆ ಮಾಡಿ ಕ್ರಮ ಜರುಗಿಸಲು ಅನುಕೂಲವಾಗಲಿದೆ. ಇದರಿಂದ ಅಪರಾಧ ಕೃತ್ಯಗಳು ಕಡಿಮೆಯಾಗುವ ಸಾಧ್ಯತೆಯಿದೆ. ಆಪ್ ಅಭಿವೃದ್ಧಿ ಸಂಗತಿಯನ್ನು ಸ್ಪಷ್ಟಪಡಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅತಿ ಶೀಘ್ರದಲ್ಲಿಯೇ ಆಪ್ ಸಾರ್ವಜನಿಕರ ಬಳಕೆಗೆ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಅಂತೂ ತಂತ್ರಜ್ಞಾನ ಬಳಕೆ ಮೂಲಕ ಅಪರಾಧ ನಿಯಂತ್ರಣಕ್ಕೆ ಹೊರಟಿರುವ ಪೊಲೀಸ್ ಇಲಾಖೆಯ ಜನ ಸ್ನೇಹಿ ಯೋಜನೆ ಚರ್ಚೆಗೆ ನಾಂದಿ ಹಾಡಿದೆ.

English summary
Police are developing a new app to keep an eye on tenants in Bangalore know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X