ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್ ಲೈನ್ ಮಾರಾಟಗಾರರೊಂದಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆ

|
Google Oneindia Kannada News

ಬೆಂಗಳೂರು, ಮಾರ್ಚ್ 25: ಕೊರೊನಾ ಭೀತಿಯಿಂದ ಬಹುತೇಕ ಎಲ್ಲ ಆನ್ ಲೈನ್ ಮಾರಾಟ ಸಂಸ್ಥೆಗಳು ಬಂದ್ ಆಗಿದೆ. ಇದರಿಂದ ಜನರಿಗೆ ತೊಂದರೆ ಆಗಿದ್ದು, ಈ ಸಂಸ್ಥೆಗಳ ಜೊತೆಗೆ ಮಾತುಕತೆ ನಡೆಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನಿರ್ಧಾರ ಮಾಡಿದ್ದಾರೆ.

ಇಂದು (ಮಾರ್ಚ್ 25) ಸಂಜೆ 7 ಗಂಟೆಗೆ ಆನ್ ಲೈನ್ ಮಾರಾಟಗಾರರ ಜೊತೆಗೆ ಭಾಸ್ಕರ್ ರಾವ್ ಮಾತುಕತೆ ನಡೆಸಲಿದ್ದಾರೆ. ಇನ್ಫೆಂಟ್ರಿ ರಸ್ತೆಯಲ್ಲಿರುವ ಅವರ ಕಛೇರಿಗೆ ಬರುವಂತೆ ತಿಳಿಸಲಾಗಿದೆ. ಜನರಿಗೆ ಅಗತ್ಯ ವಸ್ತುಗಳ ಸರಿಯಾದ ಪೂರೈಕೆ ಸಿಗಲು ಈ ಸಭೆ ನಡೆಸಲಾಗುತ್ತಿದೆ.

ಲಾಕ್ ಡೌನ್: ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದ ಅಜ್ಜಿ ಬೀದಿಗೆಲಾಕ್ ಡೌನ್: ದೇವಸ್ಥಾನದಲ್ಲಿ ಭಿಕ್ಷೆ ಬೇಡುತ್ತಿದ್ದ ಅಜ್ಜಿ ಬೀದಿಗೆ

''ಆಹಾರ, ದಿನಸಿ, ತರಕಾರಿ, ಹಣ್ಣು, ವೈದ್ಯಕೀಯ ಮತ್ತು ಪ್ರಾಣಿ ಮೂಲ ಉತ್ಪನ್ನಗಳನ್ನು ಒದಗಿಸುವ ಸಂಸ್ಥೆಗಳ ಪ್ರತಿನಿಧಿಗಳನ್ನು ಬರಲು ಹೇಳಿದ್ದೇನೆ. ಅವರ ಜೊತೆ ನನ್ನ ಕಚೇರಿಯಲ್ಲಿ ಮಾತುಕತೆ ನಡೆಸಿ ಜನತೆಗೆ ಅಗತ್ಯ ಸೇವೆ ಒದಗಿಸುವಂತೆ ಕೋರುತ್ತೇನೆ'' ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.

Police Commissioner Bhaskar Rao Call A Meeting With Online Sellers

ಇಂದಿನಿಂದ 21 ದಿನಗಳ ಕಾಲ ಭಾರತ ಲಾಕ್ ಡೌನ್ ಆಗಿರಲಿದೆ. ಮೂರು ವಾರ ಜನರು ಮನೆಯಲ್ಲಿಯೇ ಇರಬೇಕಿದೆ. ಇದರಿಂದ ದಿನ ನಿತ್ಯದ ವಸ್ತುಗಳನ್ನು ಪಡೆಯಲು ತೊಂದರೆ ಆಗುತ್ತಿದೆ. ಹೀಗಾಗಿ ಆನ್ ಲೈನ್ ಮಾರಾಟಗಾರರಿಗೆ ಸಹಕಾರ ನೀಡಲು ಭಾಸ್ಕರ್ ರಾವ್ ಚಿಂತನೆ ನಡೆಸಿದ್ದಾರೆ.

English summary
Bengaluru police commissioner Bhaskar Rao call a meeting with online sellers Today (march 25 ).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X