ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್; 4.54 ಕೋಟಿ ದಂಡ ಕಟ್ಟಿದ ಬೆಂಗಳೂರು ಜನರು!

|
Google Oneindia Kannada News

ಬೆಂಗಳೂರು, ಜೂನ್ 16; ಕೊರೊನಾ 2ನೇ ಅಲೆ ತಡೆಯಲು ಕರ್ನಾಟಕ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿತ್ತು. ಬೆಂಗಳೂರು ನಗರದಲ್ಲಿ ಜನರು ಲಾಕ್‌ಡೌನ್ ಸಮಯದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ 4.54 ಕೋಟಿ ದಂಡ ಕಟ್ಟಿದ್ದಾರೆ.

ಬೆಂಗಳೂರು ನಗರ ಪೊಲೀಸರು ಪ್ರತಿಯೊಂದು ವಿಭಾಗದಲ್ಲಿಯೂ ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಜನರು ಅಗತ್ಯ ವಸ್ತುಗಳ ಖರೀದಿ ಸಮಯದಲ್ಲಿ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡುವ ಬಗ್ಗೆ ಕಣ್ಗಾವಲಿಟ್ಟಿದ್ದರು.

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಮತ್ತಷ್ಟು ವಿಳಂಬಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾಮಗಾರಿ ಮತ್ತಷ್ಟು ವಿಳಂಬ

ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡದ ಜನರಿಂದ ದಂಡವನ್ನು ಸಂಗ್ರಹ ಮಾಡಿದ್ದಾರೆ. ಮಾಸ್ಕ್ ಧರಿಸಿದ 1.52 ಲಕ್ಷ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ 34 ಸಾವಿರ ಜನರಿಗೆ ದಂಡವನ್ನು ಹಾಕಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರಲ್ಲಿ ಹೊಸ ಕೋವಿಡ್ ಪ್ರಕರಣ 1000ಕ್ಕೆ ಇಳಿಕೆ ಬೆಂಗಳೂರಲ್ಲಿ ಹೊಸ ಕೋವಿಡ್ ಪ್ರಕರಣ 1000ಕ್ಕೆ ಇಳಿಕೆ

 Police Collected 4.54 Crore Fine From People In The Time Of Lockdown

ವಾಹನಗಳ ಜಪ್ತಿ; ಜೂನ್ 14ರ ತನಕ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 10 ಗಂಟೆ ತನಕ ಮಾತ್ರ ಅವಕಾಶ ನೀಡಲಾಗಿತ್ತು. ಬಳಿಕ ಅನಗತ್ಯವಾಗಿ ಸಂಚಾರ ನಡೆಸಿದರೆ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಿದ್ದರು.

ಲಾಕ್‌ಡೌನ್; ವಶಕ್ಕೆ ಪಡೆದ ವಾಹನ ಬಿಡುಗಡೆಗೆ ಬಂತು ಹೊಸ ನಿಯಮಲಾಕ್‌ಡೌನ್; ವಶಕ್ಕೆ ಪಡೆದ ವಾಹನ ಬಿಡುಗಡೆಗೆ ಬಂತು ಹೊಸ ನಿಯಮ

ಅನಗತ್ಯವಾಗಿ ಸಂಚಾರ ನಡೆಸಿದ ಜನರಿಂದ 43,615 ದ್ವಿಚಕ್ರ ವಾಹನ, 2,326 ಮೂರು ಚಕ್ರದ ವಾಹನಗಳು ಮತ್ತು 3,083 ನಾಲ್ಕು ಚಕ್ರದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಕ್‌ಡೌನ್ ಸಂಪೂರ್ಣವಾಗಿ ಮುಕ್ತಾಯವಾದ ಬಳಿಕ ಜನರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ತೆರಳಿ ವಾಹನಗಳನ್ನು ದಂಡಕಟ್ಟಿ ಬಿಡಿಸಿಕೊಳ್ಳಬಹುದು.

ನಿಯಮ ಸಡಿಲಿಕೆ; ಬೆಂಗಳೂರು ನಗರದಲ್ಲಿ ಸೋಮವಾರದಿಂದಲೇ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 2 ಗಂಟೆಯ ತನಕ ಅವಕಾಶ ನೀಡಲಾಗಿದೆ.

ಬೆಳಗ್ಗೆ ವಾಯುವಿಹಾರಕ್ಕಾಗಿ ಪಾರ್ಕ್‌ಗಳನ್ನು ತೆರೆಯಲಾಗಿದೆ. ಸರ್ಕಾರಿ ಕಚೇರಿ, ಗಾರ್ಮೆಂಟ್ಸ್‌ ಶೇ 50ರಷ್ಟು ಸಿಬ್ಬಂದಿ ಜೊತೆ ಕೆಲಸ ಮಾಡಲು ಅವಕಾಶ ಕೊಡಲಾಗಿದೆ. ಆದರೆ ಬಿಎಂಟಿಸಿ ಬಸ್, ನಮ್ಮ ಮೆಟ್ರೋ ಸಂಚಾರ ಇನ್ನೂ ಆರಂಭವಾಗಿಲ್ಲ.

ಜೂನ್ 21ರಿಂದ ಬೆಂಗಳೂರು ನಗರ ಸಂಪೂರ್ಣ ಅನ್‌ಲಾಕ್ ಆಗುವ ನಿರೀಕ್ಷೆ ಇದೆ. ಈಗಾಗಲೇ ತಜ್ಞರ ಸಮಿತಿ ಹೇಗೆ ಅನ್‌ಲಾಕ್ ಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ವರದಿ ನೀಡಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಕುರಿತು ಎರಡು ದಿನದಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

Recommended Video

Sanchari Vijay ಗೆ ಹುಟ್ಟೂರಿನಲ್ಲಿ ಸರ್ಕಾರಿ ಗೌರವ ಸಿಕ್ಕಿದ್ದು ಹೀಗೆ... | Oneindia Kannada

ಉದ್ಯಾನ ನಗರಿ ಬೆಂಗಳೂರಿನಲ್ಲಿ ಲಾಕ್‌ಡೌನ್ ಬಳಿಕ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ. ಮಂಗಳವಾರದ ವರದಿಯಂತೆ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 1000ಕ್ಕೆ ಇಳಿಕೆಯಾಗಿದೆ.

English summary
Bengaluru police collected 4.54 crore fine from the people who not wearing mask and not follow social distancing in the time of lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X