ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಕಲ್‌ನಲ್ಲಿ ಬೆಂಗಳೂರು ಪೊಲೀಸರ ಬೀಟ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 16 : ಬೆಂಗಳೂರು ನಗರದ ಪೊಲೀಸರು ಇನ್ನು ಮುಂದೆ ಸೈಕಲ್ ಮೂಲಕ ಬೀಟ್ ಕೈಗೊಳ್ಳಲಿದ್ದಾರೆ. ಹೌದು, ಇದರಿಂದಾಗಿ ಪೊಲೀಸರಿಗೆ ವ್ಯಾಯಾಮವಾಗಲಿದ್ದು, ಪರಿಸರ ಮಾಲಿನ್ಯವೂ ಕಡಿಮೆಯಾಗಲಿದೆ.

ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಸೈಕಲ್‌ ಮೂಲಕ ಬೀಟ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಇದನ್ನು ಜಾರಿಗೆ ತರಲಾಗಿದೆ. ಪೊಲೀಸರು ಆಧುನಿಕ ಸೈಕಲ್ ಏರಿ ಬೀಟ್ ಕೈಗೊಳ್ಳಲಿದ್ದಾರೆ.

ಸ್ಮೋಕ್ ಫ್ರೀ ಬೆಂಗಳೂರು: ಬಿಬಿಎಂಪಿ ಆಯುಕ್ತರ ಪಣಸ್ಮೋಕ್ ಫ್ರೀ ಬೆಂಗಳೂರು: ಬಿಬಿಎಂಪಿ ಆಯುಕ್ತರ ಪಣ

Police Beat In Bengaluru From Bicycles

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಸೈಕಲ್ ಮೂಲಕ ಬೀಟ್ ಮಾಡುವ ವ್ಯವಸ್ಥೆಗೆ ಚಾಲನೆ ನೀಡಿದರು. ಮುಂದಿನ ದಿನಗಳಲ್ಲಿ ನಗರದ ಪ್ರತಿ ಪೊಲೀಸ್ ಠಾಣೆಗೆ 5 ಸೈಕಲ್‌ಗಳಂತೆ 500 ಸೈಕಲ್‌ಗಳನ್ನು ವಿತರಣೆ ಮಾಡಲು ಯೋಜನೆ ರೂಪಿಸಲಾಗಿದೆ.

ಬೆಂಗಳೂರು-ಮೈಸೂರು ನಡುವೆ ಹೊಸ ರೈಲು, ವೇಳಾಪಟ್ಟಿ ಬೆಂಗಳೂರು-ಮೈಸೂರು ನಡುವೆ ಹೊಸ ರೈಲು, ವೇಳಾಪಟ್ಟಿ

ದಶಕಗಳ ಹಿಂದೆ ಬೆಂಗಳೂರು ಪೊಲೀಸರು ಬೀಟ್‌ಗೆ ಸೈಕಲ್ ಬಳಕೆ ಮಾಡುತ್ತಿದ್ದರು. ಬಳಿಕ ಬುಲೆಟ್‌ಗಳು ಬಂದವು. ನಂತರ ಚೀತಾ, ಹೊಯ್ಸಳ ವಾಹನಗಳು ಬಂದವು. ಈಗ ಪುನಃ ಸೈಕಲ್‌ಗಳನ್ನು ಪೊಲೀಸರಿಗೆ ನೀಡಲಾಗುತ್ತಿದೆ.

ಸೈಕಲ್ ಬಿಟ್ಟು 159 ಸೀಟುಗಳನ್ನು ಮಾತ್ರ ಕದ್ದ ವೃದ್ಧ ಕಾರಣವೇನು? ಸೈಕಲ್ ಬಿಟ್ಟು 159 ಸೀಟುಗಳನ್ನು ಮಾತ್ರ ಕದ್ದ ವೃದ್ಧ ಕಾರಣವೇನು?

ಹಿಂದೆ ಜ್ಯೋತಿ ಪ್ರಕಾಶ್ ಮಿರ್ಜಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದಾಗ ಪೊಲೀಸರ ಬೀಟ್‌ಗೆ ಸೈಕಲ್ ನೀಡುವ ಬಗ್ಗೆ ಚರ್ಚೆ ನಡೆದಿತ್ತು. ಈಗ ಅದು ಜಾರಿಗೆ ಬರುತ್ತಿದ್ದು, ಆಧುನಿಕ ಸೈಕಲ್‌ಗಳನ್ನು ನೀಡಲಾಗುತ್ತಿದೆ.

English summary
Cubbon Park police will beat in station limits with bicycles. Every police station in the city will get 5 bicycles soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X