ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಡುಗಿಯರ ಕೊಡಿಸುತ್ತೇವೆ ಎಂದು ನಂಬಿಸಿ ದೋಚಿದರು

|
Google Oneindia Kannada News

ಬೆಂಗಳೂರು, ಫೆ. 3: ಅಂತರ್ಜಾಲದಲ್ಲಿ ಸಿಗುವ ಅಶ್ಲೀಲ ಭಂಗಿಯ ಹುಡುಗಿಯರ ಫೋಟೋಗಳೇ ಇವರ ವಂಚನೆಯ ಅಸ್ತ್ರ. ಅಶ್ಲೀಲ ಭಂಗಿಯ ಫೋಟೋಗಳನ್ನು ಒಂದೆಡೆ ಸೇರಿಸಿ ಹುಡುಗಿಯರನ್ನು ಒದಗಿಸುವುದಾಗಿ ಜಾಹೀರಾತನ್ನು ನೀಡುತ್ತಾರೆ. ಇದನ್ನು ನಂಬಿ ಕರೆ ಮಾಡುವ ಆಸಾಮಿ ವಂಚಕರ ಕೈಗೆ ಸಿಕ್ಕಿಬೀಳುತ್ತಾನೆ.

ಹೌದು.. ಇಂಥ ಒಂದು ಸೈಬರ್ ಅಪರಾಧ ಇಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರೆ ಮಾಡಿದ ವ್ಯಕ್ತಿಯನ್ನು ಅಪಹರಿಸಿ ಬೆದರಿಕೆ ಹಾಕಿ ಸುಮಾರು 97 ಸಾವಿರ ರೂ. ಲಪಟಾಯಿಸಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2 ಕಾರು ಸೇರಿದಂತೆ ನಗದು ವಶಪಡಿಸಿಕೊಳ್ಳಲಾಗಿದೆ.[ಮೈಸೂರಲ್ಲಿ ವೇಶ್ಯಾವಾಟಿಕೆ ಜಾಲ : 2 ಯುವತಿಯರ ರಕ್ಷಣೆ]

police

ಹೊಸಕೋಟೆಯ ಅಬ್ದುಲ್ ಕರೀಮ್, ಮೊಹಮ್ಮದ್ ಸಲೀಂ, ಸೋಮವಾರಪೇಟೆಯ ಅಬ್ಬಾಸ್ ಬಿನ್ ಮೊಹಮ್ಮದ್, ಮಡಿಕೇರಿಯ ಸೈನುದ್ದೀನ್ ಮತ್ತು ಸಮೀರ್ ಬಿನ್ ಅಬ್ಬಾಸ್ ಬಂಧಿತ ಆರೋಪಿಗಳು.

ವಂಚನೆ ಮಾಡಿರುವ ಬಗ್ಗೆ ಸಬೀನ್ ಸಲೀಂ ಎಂಬುವರು ದೂರು ದಾಖಲಿಸಿದ್ದರು. 4 ಜನ ಅಪರಿಚಿತ ವ್ಯಕ್ತಿಗಳು ಕಾರಿನಲ್ಲಿ ಬಂದು ಎಲೆಕ್ಟ್ರಾನಿಕ್ಸ್ ಸಿಟಿಯ ಎಚ್.ಪಿ ಗೇಟ್ ಬಳಿಯಿಂದ ಹುಡುಗಿಯರನ್ನು ಕೊಡಿಸುವುದಾಗಿ ನನ್ನನ್ನು ಅಪಹಸಿದ್ದರು. ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ನಿನ್ನ ಮೇಲೆ ಅನುಮಾನವಿದೆ . ನಿನ್ನನ್ನು ಠಾಣೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಎಂದು ಬೆದರಿಕೆ ಹಾಕಿದ್ದರು.[ಬೆಂಗಳೂರು : ಎಟಿಎಂ ದೋಚಲು ಬಂದು ಸಿಕ್ಕಿಬಿದ್ದರು]

ನಂತರ ನನ್ನ ಬಳಿಯಿದ್ದ ಹಣ, ವಾಚ್ ಮತ್ತು ಆಭರಣಗಳ ಹಾಗೂ ಎಟಿಎಂ ಕಾರ್ಡ್ ದೋಚಿ ರಾಮನಗರ ಬಳಿಯ ಎಟಿಎಂ ಗಳಲ್ಲಿ ಹಣ ಡ್ರಾ ಮಾಡಿಕೊಂಡು ಮಂಡ್ಯದ ಬಸ್ ನಿಲ್ದಾಣದಲ್ಲಿ ಮಧ್ಯರಾತ್ರಿ ಬಿಟ್ಟು ಪರಾರಿಯಾಗಿದ್ದರು ಎಂದು ದೂರು ದಾಖಲಿಸಿದ್ದರು.

ಬೆಂಗಳೂರು ನಗರ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತೆ ರೋಹಿಣಿ ಕಟೋಚ್ ಸೆಪಟ್ ಮತ್ತು ಮೈಕೊಲೇಔಟ್ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಬಿ.ಎಸ್ ಓಬಳೇಶ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ ಇನ್ಸ್ ಪೆಕ್ಟರ್ ಶ್ರೀ ವಿ.ಜೆ ಮಿಥುನ್ ಶಿಲ್ಪಿ, ಬಾಬು, ಶಿವರಾಜು, ಶಿವಚಂದ್ರಪ್ಪ, ಅಶೋಕ ಮತ್ತಿತರರು ಭಾಗವಹಿಸಿದ್ದರು.

English summary
Bengaluru South-east division police on Tuesday claimed to have arrested a gang of robbers who blackmailed and robbed several people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X