ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆನ್‌ಲೈನ್ ಮೂಲಕ 3 ಕೋಟಿ ವಂಚನೆ ಮಾಡಿ ಆರೋಪಿಗಳು ಸಿಕ್ಕಿಬಿದ್ದಿದ್ಹೇಗೆ?

|
Google Oneindia Kannada News

ಬೆಂಗಳೂರು, ಜುಲೈ 5: ಆನ್‌ಲೈನ್‌ ಮೂಲಕ 3 ಕೋಟಿ ರೂ ವಂಚನೆ ಮಾಡಿದ್ದ ಆರೋಪಿಗಳು ಕೊನೆಗೂ ಸಿಕ್ಕಿ ಬಿದ್ದಿದ್ದಾರೆ. ಅದು ಹೇಗೆ ಅಂತೀರಾ ಮುಂದೆ ಓದಿ..

ಇತ್ತೀಚಿನ ದಿನಗಳಲ್ಲಿ ಕಳ್ಳರು ಕೂಡ ಅಪ್‌ಡೇಟ್ ಆಗಿದ್ದಾರೆ, ಯಾವ ಮಾರ್ಗದಲ್ಲಿ ಹಣ ಸಂಪಾದನೆ ಮಾಡಬಹುದು ಎಂದು ಹೊಂಚು ಹಾಕಿ ಕುಳಿತಿರುತ್ತಾರೆ. ಆನ್‌ಲೈನ್‌ ಮೂಲಕ ವಂಚಿಸಿ ಬಳಿಕ ಮತ್ತೊಂದು ಬ್ಯಾಂಕಿಗೆ ಕನ್ನ ಹಾಕಲು ಬಂದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

ಕಾರು ಲಾಕ್ ಮಾಡಿದ್ದೇನೆ, ಕೀ ನನ್ನ ಬಳಿಯೇ ಇದೆ ಎಂದು ಖುಷಿ ಪಡಬೇಡಿ ಕಾರು ಲಾಕ್ ಮಾಡಿದ್ದೇನೆ, ಕೀ ನನ್ನ ಬಳಿಯೇ ಇದೆ ಎಂದು ಖುಷಿ ಪಡಬೇಡಿ

ದಾವಣಗೆರೆ ಜಿಲ್ಲೆಯ ಹರಿಹರ ಮೂಲದ ಪರಿಶಿತ್ ನಾಯ್ಡು, ಗುರು ಮತ್ತು ರಂಗಸ್ವಾಮಿಯನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೂವರು ವ್ಯಕ್ತಿಗಳು ಕೋಟಿ ಕೋಟಿ ಹಣವನ್ನು ಬ್ಯಾಂಕಿಗೆ ಕಟ್ಟಲು ನಂಬರ್ ಇಲ್ಲದ ಹೊಸ ಸ್ಕೋಡಾ ಕಾರಿನಲ್ಲಿ ನೆಲಮಂಗಲ ಪಟ್ಟಣದ ಐಸಿಐಸಿಐ ಬ್ಯಾಂಕ್‌ಗೆಬಂದಿದ್ದರು.

Police arrested online fraudsters

ಹಣ ನೋಡಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಭಯ ಭೀತರಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ನೆಲಮಂಗಲ ಟೌನ್ ಪೊಲೀಸರು ಮೂವರನ್ನು ವಶಕ್ಕೆ ಪಡೆದ ಹಣ ಯಾರಿಗೆ ಸೇರಿದ್ದು ಎಂದು ವಿಚಾರಣೆ ಶುರು ಮಾಡಿದ್ದಾರೆ.

ಆರೋಪಿಗಳು ಮೂರು ದೊಡ್ಡ ಬ್ಯಾಗಿನಲ್ಲಿ ಹಣವನ್ನು ತಂದಿದ್ದರು. ಈ ಮೂವರು ಆನ್ ಲೈನ್ ಮೂಲಕ ವಂಚನೆ ಮಾಡಿ ಬರೋಬ್ಬರಿ 3 ಕೋಟಿ ಹಣವನ್ನು ಬೆಂಗಳೂರಿನ ರಾಮಮೂರ್ತಿನಗರದ ಐಸಿಐಸಿಐ ಬ್ಯಾಂಕಿನಿಂದ ಡ್ರಾ ಮಾಡಿದ್ದರು. ಡ್ರಾ ಮಾಡಿದ್ದ ಹಣವನ್ನು ಬೇರೆ ಅಕೌಂಟ್‍ಗೆ ಹಾಕಲು ಬಂದಿದ್ದಾಗ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ವಂಚಿಸಿದ್ದ ಮೂರು ಕೋಟಿಯಲ್ಲಿ ನೆಲಮಂಗಲದ ಐಸಿಐಸಿಐ ಬ್ಯಾಂಕಿಗೆ 1 ಕೋಟಿ 90 ಲಕ್ಷ ಹಣ ತುಂಬಲು ಬಂದಿದ್ದರು. ಆರೋಪಿಗಳು ನಕಲಿ ಫೋನ್ ನಂಬರ್ ಉಪಯೋಗಿಸಿ ಹಣವನ್ನು ಡ್ರಾ ಮಾಡಿದ್ದರು.

ಸದ್ಯಕ್ಕೆ ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಮೂವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

English summary
Police arrested online fraud those who looted 3 crore rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X