• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಚ್ಚರ: ನೋಟ್ ಬ್ಯಾನ್ ಆಗಿ 5 ವರ್ಷವಾದರೂ ಜೀವಂತವಾಗಿದೆ exchange ದಂಧೆ

|
Google Oneindia Kannada News

ಬೆಂಗಳೂರು, ಅ 27: ಮುಂದಿನ ತಿಂಗಳು ಅಂದರೆ ನವೆಂಬರ್ ಎಂಟಕ್ಕೆ ಒಂದು ಸಾವಿರ ಮತ್ತು ಐನೂರು ರೂಪಾಯಿ ನೋಟು ಬ್ಯಾನ್ ಆಗಿ ಐದು ವರ್ಷವಾಗುತ್ತದೆ. ಮೋಸ ಹೋಗುವವರು ಇರುವವರೆಗೆ, ಮೋಸ ಮಾಡುವವರೂ ಇರುತ್ತಾರೆ ಎನ್ನುವ ಹಾಗೇ, ಹಳೇ ನೋಟಿನಿಂದ ಇನ್ನೂ ಜನರನ್ನು ಯಾಮಾರಿಸುವ ದಂಧೆ ನಡೆಯುತ್ತಲೇ ಇದೆ.

ನೋಟು ಅಪನಗದೀಕರಣಗೊಂಡ ಆರಂಭದ ಕೆಲವು ತಿಂಗಳಲ್ಲಿ, ಹಳೇ ನೋಟಿಗೆ ಇಂತಿಷ್ಟು ಕಮಿಷನ್ ನಿಗದಿ ಮಾಡಿ, ಹೊಸ ನೋಟು ಕೊಡುವ ಅಡ್ಡದಾರಿಯನ್ನು ಹಿಡಿದವರು ತುಂಬಾ ಜನ. ಅವರೆಲ್ಲರೂ ಕೋಟ್ಯಧಿಪತಿಗಳಾದರು ಎನ್ನುವ ಸುದ್ದಿಯನ್ನು ಬಹಳಷ್ಟು ಕೇಳಿದ್ದಾಗಿದೆ.

ಸೈಬರ್ ವಂಚನೆಗೆ ಒಳಗಾದ ಕೂಡ್ಲೇ ಈ ಪ್ಲಾನ್ ಬಳಿಸಿ ಮೋಸದಿಂದ ಬಚಾವ್ ಆಗಿ ಸೈಬರ್ ವಂಚನೆಗೆ ಒಳಗಾದ ಕೂಡ್ಲೇ ಈ ಪ್ಲಾನ್ ಬಳಿಸಿ ಮೋಸದಿಂದ ಬಚಾವ್ ಆಗಿ

ಭಾರತೀಯ ರಿಸರ್ವ್ ಬ್ಯಾಂಕ್ ಹಳೇ ನೋಟು ವಿನಿಮಯ ನಿಲ್ಲಿಸಿದ ನಂತರವೂ ಕೂಡಾ ಈ ಎಕ್ಸ್ ಚೇಂಜ್ ದಂಧೆ ಸುಮಾರು ಒಂದು ವರ್ಷ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದ್ದವು. ಕಾಲಕ್ರಮೇಣ ಇದಕ್ಕೆ ಕಡಿವಾಣ ಬಿದ್ದರೂ, ಈ ದಂಧೆಗೆ ಫುಲ್ ಸ್ಟಾಪ್ ಬಿದ್ದಿಲ್ಲ.

ಹಳೆಯ ನಿಷೇಧಿತ ನೋಟನ್ನು ಕೊಟ್ಟು, ಕಡಿಮೆ ಪರ್ಸೆಂಟ್ ನಲ್ಲಿ ಹೊಸ ನೋಟು ಪಡೆಯುವವರ ಜಾಲವನ್ನು ಬೆಂಗಳೂರು ಪೊಲೀಸರು ಒಂದು ದಿನದ ಹಿಂದೆ ಭೇದಿಸಿದ್ದಾರೆ. ಕಳೆದ ವರ್ಷದ ಜುಲೈ ಮತ್ತು ಆಗಸ್ಟ್ ನಲ್ಲೂ , ಬೆಂಗಳೂರಿನ ಜಾಲಹಳ್ಳಿ ಮತ್ತು ಯಶವಂತಪುರ ಪೊಲೀಸರು ದಂಧೆಯ ಖದೀಮರನ್ನು ಬಂಧಿಸಿದ್ದರು.

ಹೃದಯ ಶ್ರೀಮಂತ ''ದುರ್ಯೋಧನ'' ಮೊಹಮ್ಮದ್ ರಫೀ ಹೆಜ್ಜೆ ಹಿಂದೆ ಅಡಗಿರುವ ಬದುಕಿನ ಸತ್ಯಗಳು ಹೃದಯ ಶ್ರೀಮಂತ ''ದುರ್ಯೋಧನ'' ಮೊಹಮ್ಮದ್ ರಫೀ ಹೆಜ್ಜೆ ಹಿಂದೆ ಅಡಗಿರುವ ಬದುಕಿನ ಸತ್ಯಗಳು

 35 ಲಕ್ಷ ನಿಷೇಧಿತ ಐನೂರು, ಒಂದು ಸಾವಿರ ರೂಪಾಯಿ ಅಸಲಿ ನೋಟು

35 ಲಕ್ಷ ನಿಷೇಧಿತ ಐನೂರು, ಒಂದು ಸಾವಿರ ರೂಪಾಯಿ ಅಸಲಿ ನೋಟು

ಬೆಂಗಳೂರು ಪೂರ್ವ ವಿಭಾಗದ ಗೋವಿಂದಪುರ ಠಾಣೆಯ ಪೊಲೀಸರು ಹಳೇ ನೋಟ್ ಅನ್ನು ಚಲಾವಣೆ ಮಾಡುವ ಖತರ್ನಾಕ್ ಗ್ಯಾಂಗ್ ಅನ್ನು ಖೆಡ್ಡಾಗೆ ಕೆಡವಿದ್ದಾರೆ. ಏಳು ಮಂದಿಯ ಗ್ಯಾಂಗ್ ಇದಾಗಿದ್ದು, 35 ಲಕ್ಷ ನಿಷೇಧಿತ ಐನೂರು, ಒಂದು ಸಾವಿರ ರೂಪಾಯಿ ಅಸಲಿ ನೋಟನ್ನು ಕಡಿಮೆ ಪರ್ಸೆಂಟೇಜಿಗೆ ವಿನಿಮಯ ಮಾಡಲು ಬಕ್ರಾಗಳನ್ನು ಹುಡುಕುತ್ತಿದ್ದರು. ಆ ವೇಳೆ ಅನುಮಾನಗೊಂಡ ಪೊಲೀಸರು ಇವರನ್ನು ಕರೆದು ವಿಚಾರಣೆ ನಡೆಸಿದಾಗ, ದಂಧೆಯ ವಿವರಣೆಯನ್ನು ಪೊಲೀಸರಿಗೆ ನೀಡಿದ್ದಾರೆ.

 ನಮ್ಮ ಬಳಿ ಐನೂರು ಮತ್ತು ಸಾವಿರ ರೂಪಾಯಿಯ ಅಸಲಿ ನೋಟುಗಳಿವೆ

ನಮ್ಮ ಬಳಿ ಐನೂರು ಮತ್ತು ಸಾವಿರ ರೂಪಾಯಿಯ ಅಸಲಿ ನೋಟುಗಳಿವೆ

ಈ ದಂಧೆಯ ಮೂಲ ಕೇರಳದ ಕಾಸರಗೋಡು ಎಂದು ಆರೋಪಿಗಳ ಮಾಹಿತಿಯ ನಂತರ ಅಲ್ಲಿಗೆ ತೆರಳಿದ ಪೊಲೀಸರಿಗೆ ದಂಧೆಯ ಇನ್ನಷ್ಟು ಸತ್ಯಗಳು ಸಿಕ್ಕಿವೆ. ಈ ಗ್ಯಾಂಗ್ ಬಳಿ ಅಸಲಿ ನಿಷೇಧಿತ ನೋಟುಗಳು ಇನ್ನೂ ನಲವತ್ತು ಲಕ್ಷದಷ್ಟು ಇದ್ದವು. "ನಮ್ಮ ಬಳಿ ಐನೂರು ಮತ್ತು ಸಾವಿರ ರೂಪಾಯಿಯ ಅಸಲಿ ನೋಟುಗಳಿವೆ, ಕಡಿಮೆ ಪರ್ಸೆಂಟ್ ನಲ್ಲಿ ನಮಗೆ ಹೊಸ ನೋಟು ಕೊಡಿ ಎಂದು ನಾವು ಡೀಲ್ ಮಾಡುತ್ತಿದ್ದೆವು"ಎಂದು ಗ್ಯಾಂಗಿನ ಸದಸ್ಯರಾದ ಮಂಜುನಾಥ್ ಮತ್ತು ದಯಾನಂದ ಹೇಳಿದ್ದಾರೆ.

 ಬೆಂಗಳೂರು ಪೂರ್ವ ವಿಭಾಗದ ಗೋವಿಂದಪುರ ಠಾಣೆಯ ಪೊಲೀಸರು

ಬೆಂಗಳೂರು ಪೂರ್ವ ವಿಭಾಗದ ಗೋವಿಂದಪುರ ಠಾಣೆಯ ಪೊಲೀಸರು

ಗೋವಿಂದಪುರ ಪೊಲೀಸರು ಕಾಸರಗೋಡಿಗೆ ತೆರಳಿದಾಗ, ಹಳೆಯ ನೋಟನ್ನು ನೋಡಿ ಬೆಚ್ಚಿಬಿದ್ದಿದಾರೆ. ಅಸಲಿ ನಿಷೇಧಿತ ನೋಟ್ ಮಾತ್ರವಲ್ಲದೇ, ಸುಮಾರು ಆರು ಕೋಟಿ ಮೌಲ್ಯದ ನಕಲಿ ಜೆರಾಕ್ಸ್ ನೋಟು ಪತ್ತೆಯಾಗಿದೆ. ನೋಟು ಜೆರಾಕ್ಸ್ ಮಾಡಲು ಬಳಸುವ ಸಲುವಾಗಿ ತಂದಿಟ್ಟಿದ್ದ ಹದಿನಾರು ಮೂಟೆ ಪೇಪರ್ ಕೂಡಾ ಪತ್ತೆಯಾಗಿದೆ. ಹಳೆಯ ನೋಟನ್ನು ವಿನಿಮಯ ಮಾಡುವಾಗ ಜೆರಾಕ್ಸ್ ನೋಟನ್ನು ಅದರ ಮಧ್ಯೆ ಇಡುತ್ತಿದ್ದೆವು ಎಂದು ಆರೋಪಿಗಳು ತಪ್ಪೊಪ್ಪಿ ಕೊಂಡಿದ್ದಾರೆ.

 ಮತ್ತೊಂದು ಕಾರ್ಯಾಚರಣೆಯಲ್ಲಿ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದರು

ಮತ್ತೊಂದು ಕಾರ್ಯಾಚರಣೆಯಲ್ಲಿ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದರು

ಕಳೆದ ವರ್ಷದ ಜುಲೈ 28ರಂದು, ಮಾಗಡಿ ರಸ್ತೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಮೂವತ್ತು ಲಕ್ಷ ಹಳೆಯ ಸಾವಿರ ರೂಪಾಯಿ ನೋಟನ್ನು ಇಟ್ಟುಕೊಂಡಿದ್ದ ಈ ಮೂವರನ್ನು ಜಾಲಹಳ್ಳಿ ಪೊಲೀಸರು ಖೆಡ್ಡಾಗೆ ಕೆಡವಿದ್ದರು. ಜುಲೈ 30ರಂದು ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ನಾಲ್ವರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದರು. ಇವರಿಂದ 96 ಲಕ್ಷ ರೂಪಾಯಿ ಮೌಲ್ಯದ ಹಳೆಯ ಐನೂರು ಮತ್ತು ಸಾವಿರ ರೂಪಾಯಿ ನೋಟನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು. ಆಗಲೂ, ಈ ದಂಧೆಯ ಹಿಂದೆ ಕೇರಳ ಮೂಲದ ವ್ಯಕ್ತಿಯ ಛಾಯೆಯಿದ್ದದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ. ಇಲ್ಲಿ ಪೊಲೀಸರಿಗೂ ಅರ್ಥವಾಗದ ಪ್ರಶ್ನೆ ಏನಂದರೆ, ಹೊಸ ನೋಟನ್ನು ಕೊಟ್ಟು ಹಳೆಯ ನೋಟನ್ನು ಪಡೆಯುವವರು, ಅದನ್ನು ಇಟ್ಟುಕೊಂಡು ಏನು ಮಾಡುತ್ತಾರೆ ಎನ್ನುವುದು.

English summary
7 Members arrested for dealing in demonetized notes of Rs 500 & 1000 worth 35 lakh by Bengaluru East Govindapura Police station, they also have been busted with fake currency worth about 6 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X