ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಡಿವೈಸ್ ಅಳವಡಿಸಿದ್ದ ವ್ಯಕ್ತಿ ಬಂಧನ

|
Google Oneindia Kannada News

ಬೆಂಗಳೂರು, ನವೆಂಬರ್ 17: ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಉಪಕರಣ ಹಾಗೂ ಕ್ಯಾಮರಾವನ್ನು ಅಳವಡಿಸಿದ್ದ ಉಗಾಂಡ ಪ್ರಜೆಯನ್ನು ಸ್ಥಳೀಯ ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ. ರಾಜಾಜಿನಗರದ ಎಚ್‌ಡಿಎಫ್‌ಸಿ ಎಟಿಎಂ ಒಂದರಲ್ಲಿ ಎಟಿಎಂ ಯಂತ್ರಕ್ಕೆ ಸ್ಕಿಮ್ಮಿಂಗ್ ಉಪಕರಣ ಅಳವಡಿಸಿದ್ದ.

 ಸೈಬರ್ ಅಪರಾಧ: ರಾಜ್ಯದ ಮೊದಲ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ ಸೈಬರ್ ಅಪರಾಧ: ರಾಜ್ಯದ ಮೊದಲ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆ

ನೀರೋ ಇಸ್ಮಾಯಿಲ್ ಬಂಧಿತ ಆರೋಪಿ, ಈತನಿಂದ ಒಂದು ಸ್ಕಿಮ್ಮಿಂಗ್ ಉಪಕರಣ, ಪುಟ್ಟ ಕ್ಯಾಮರಾ, ಮೊಬೈಲ್ ಫೋನ್ ಹಾಗೂ 2 ನಕಲಿ ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜಾಜಿನಗರದ ಎರಡನೇ ಬ್ಲಾಕ್ ಎಂಕೆ ರಸ್ತೆಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಶುಕ್ರವಾರ ಬೆಳಗ್ಗೆ 5.45 ರ ಸುಮಾರಿಗೆ ಆರೋಪಿ ಇಸ್ಮಾಯಿಲ್ ಹಾಗೂ ಮತ್ತೊಬ್ಬ ವಿದೇಶಿ ಪ್ರಜೆ ತೆರಳಿದ್ದರು.

 ಸೈಬರ್ ಕ್ರೈಂ ಭಾರತದ ಭದ್ರತೆಗೆ ದೊಡ್ಡ ಸವಾಲು: ರಾಜನಾಥ್ ಸೈಬರ್ ಕ್ರೈಂ ಭಾರತದ ಭದ್ರತೆಗೆ ದೊಡ್ಡ ಸವಾಲು: ರಾಜನಾಥ್

Police arreste cyber fraudster

ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಬರುವ ಗ್ರಾಹಕರು ಕಾರ್ಡ್ ಸ್ವೈಪ್ ಮಾಡಿದಾಗ ಅದರ ಮಾಹಿತಿ ಸ್ಕಿಮ್ಮಿಂಗ್ ಉಪಕರಣದಲ್ಲಿ ದಾಖಲಾಗುವಂತೆ ಗೌಪ್ಯವಾಗಿ ಅಳವಡಿಸಲಾಗುತ್ತದೆ. ಕಿಪ್ಯಾಡ್ ನಲ್ಲಿ ಪಿನ್ ಒತ್ತುತ್ತಿರುವುದು ಸೆರೆಯಾಗುವಂತೆ ಪುಟ್ಟ ಕ್ಯಾಮರಾ ಅಳವಡಿಸಲಾಗುತ್ತದೆ. ಬ್ಯಾಟರಿ ಚಾಲಿತ ಈ ಕಿರು ಉಪಕರಣ ಸೂಕ್ಷ್ಮವಾಗಿ ಎಲ್ಲ ಮಾಹಿತಿಯನ್ನು ಸೆರೆ ಹಿಡಿದುಕೊಳ್ಳುತ್ತದೆ.

English summary
Bengaluru police arrested cyber fraudster who is using skimming machine in ATMs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X