ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಷಿಂಗ್ ಮಷಿನ್ ರಿಪೇರಿಗೆ ಕರೆಸಿದ್ರೆ ಪಕ್ಕದ ಮನೆಗೆ ಕನ್ನ ಹಾಕ್ತಾನೆ ಜಸ್ಟ್ ಡಯಲ್ ಕಳ್ಳ !

|
Google Oneindia Kannada News

ಬೆಂಗಳೂರು, ಜನವರಿ 02: ಇತ್ತೀಚೆಗೆ ಜನರು ಎಲ್ಲದಕ್ಕೂ ಅಂತರ್ಜಾಲದ ಮೊರೆ ಹೋಗುವುದು ಸಾಮಾನ್ಯ. ಜಸ್ಡ್ ಡಯಲ್ ನಿಂದ ಎಲೆಕ್ಟ್ರಿಯೇಷನ್, ವಾಷಿಂಗ್ ಮಷಿನ್ ರಿಪೇರಿ ಮಾಡುವರನ್ನು ಕರೆಸುವ ಮುನ್ನ ಈ ಸ್ಟೋರಿ ನೆನಪಿಟ್ಟುಕೊಳ್ಳಿ. ವಾಷಿಂಗ್ ಮಷಿನ್ ರಿಪೇರಿ ಮಾಡುತ್ತಿದ್ದ ಯುವಕನೊಬ್ಬ ಜಸ್ಟ್ ಡಯಲ್‌ನಿಂದ ನಂಬರ್ ಪಡೆದು ಕರೆ ಮಾಡುವರ ಮನೆಗೆ ಹೋಗಿ ವಾಷಿಗ್ ಮಷಿನ್ ರಿಪೇರಿ ಮಾಡಿಕೊಡುತ್ತಿದ್ದ. ಜತೆಗೆ ಅಕ್ಕ ಪಕ್ಕದ ಬೀಗ ಹಾಕಿರುವ ಮನೆ ಗುರುತಿಸಿಕೊಂಡು ಬರುತ್ತಿದ್ದ ! ರಾತ್ರಿ ವೇಳೆ ಅದೇ ಮನೆಗೆ ಹೋಗಿ ಬೀಗ ಹೊಡೆದು ಲೂಟಿ ಮಾಡುತ್ತಿದ್ದ ! ಇದು ಸಿನಿಮಾ ಸ್ಟೋರಿ ಅಲ್ಲ. ಸಿಲಿಕಾನ್ ಸಿಟಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಅಸಲಿ ಸ್ಟೋರಿ.

ಶೆಟ್ಟಿಹಳ್ಳಿಯ ಎ.ವೈ.ಆರ್. ಲೇಔಟ್ ನಿವಾಸಿ ಸಂಧ್ಯಾ ಅವರು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದರು. ಬೆಳಗಿನ ವೇಳೆಯೇ ಯಾರೋ ಕಳ್ಳರು ಮನೆ ಬೀಗ ಹೊಡೆದು ಸುಮಾರು ಹತ್ತು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಡಿಸೆಂಬರ್ 25 ರಂದು ಕಳ್ಳತನ ಮಾಡಿದ್ದರು. ಈ ಕುರಿತು ಸಂಧ್ಯಾ ಅವರು ಬಾಗಲುಗುಂಟೆ ಪೊಲೀಸರಿಗೆ ದೂರು ನೀಡಿದ್ದರು. .

ಹಗಲಿನ ವೇಳೆಯಲ್ಲಿ ಕಳ್ಳತನ ಮಾಡಿದ್ದ ಬಗ್ಗೆ ಬಾಗಲಗುಂಟೆ ಪೊಲೀಸರು ತಲೆ ಕೆಡಿಸಿಕೊಂಡಿದ್ದರು. ಶೆಟ್ಟಿಹಳ್ಳಿ ಸಮೀಪ ಪೊಲೀಸರು ಗಸ್ತಿನಲ್ಲಿದ್ದಾಗ ಯುವಕನೊಬ್ಬ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ. ಆತನನ್ನು ಕರೆದು ವಿಚಾರಣೆ ನಡೆಸಿದಾಗ ಭಯಾನಕ ಸಂಗತಿ ಹೊರಗೆ ಹಾಕಿದ್ದಾನೆ. ಮೂಲತಃ ಕೊಡಗು ಮೂಲದ ವಿರಾಜಪೇಟೆ ಯ ನಿವಾಸಿ ಸುಮನ್ ವಾಷಿಂಗ್ ಮಷಿನ್ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದ. ಜಸ್ಟ್ ಡಯಲ್ ನಲ್ಲಿ ಹಣ ಪಾವತಿಸಿ ನೋಂದಾಯಿಸಿದ್ದ ಈತನಿಗೆ ಆನ್‌ಲೈನ್ ನಲ್ಲಿ ಗ್ರಾಹಕರು ಕರೆ ಮಾಡುತ್ತಿದ್ದರು. ಕರೆ ಮಾಡಿದ ಮನೆಗೆ ಹೋಗಿ ವಾಷಿಂಗ್ ಮಷಿನ್ ರಿಪೇರಿ ಮಾಡಿ ವಾಪಸು ಬರುತ್ತಿದ್ದ. ಇಷ್ಟಾದರೆ ಯಾರೂ ಸುಮನ್ ತಂಟೆಗೆ ಹೋಗುತ್ತಿರಲಿಲ್ಲ.

Bengaluru: Police arrest Thief who steals from locked houses

ಜಸ್ಟ್ ಡಯಲ್ ನಿಂದ ನಂಬರ್ ಪಡೆದು ಕರೆ ಮಾಡುವರ ಮನೆಗೆ ಹೋಗುತ್ತಿದ್ದ ಸುಮನ್, ಅಕ್ಕ ಪಕ್ಕದ ಮನೆಗಳ ಮೇಲೆ ಕಣ್ಣು ಹಾಕುತ್ತಿದ್ದ. ಯಾರೂ ಇಲ್ಲದ ಮನೆ ನೋಡಿ ರಾತ್ರಿ ವೇಳೆ ಕಳ್ಳತನಕ್ಕೆ ಇಳಿಯುತ್ತಿದ್ದ. ಬಾಗಿಲು ಮುರಿದು ಚಿನ್ನಾಭರಣ ಕಳ್ಳತನ ಮಾಡಿ ಮೋಜು ಮಾಡುತ್ತಿದ್ದ. ವಾಷಿಂಗ್ ಮಷಿನ್ ರಿಪೇರಿಯಿಂದ ಬಂದ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಬೆಳಗ್ಗೆ ನೋಡಿಕೊಂಡು ಬರುತ್ತಿದ್ದ ಮನೆಗೆ ರಾತ್ರಿ ವೇಳೆ ಕಳವು ಮಾಡುತ್ತಿದ್ದ. ಸಂಧ್ಯಾ ಅವರ ಮನೆ ಸಮೀಪದ ಮಹಿಳೆಯೊಬ್ಬರು ಸುಮನ್ ನಿಂದ ವಾಷಿಂಗ್ ಮಷಿನ್ ರಿಪೇರಿ ಮಾಡಿಸಿಕೊಂಡಿದ್ದರು. ಸಂಧ್ಯಾ ಅವರ ಮನೆಯಲ್ಲಿ ಹಗಲು ವೇಳೆ ಯಾರೂ ಇಲ್ಲದ ವೇಳೆ ಗಮನಿಸಿದ ಈತ ಬಾಗಿಲು ಮುರಿದು ಹತ್ತು ಲಕ್ಷ ರೂಪಾಯಿ ಮೌಲ್ಯದ ಇನ್ನೂರು ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣ ಕದ್ದು ಪರಾರಿಯಾಗಿದ್ದ. ಇದೇ ರೀತಿ ನಾಲ್ಕು ಕಡೆ ಮಾಡಿದ್ದಾನೆ. ವಿಚಾರಣೆ ವೇಳೆ ಇಷ್ಟೆಲ್ಲಾ ಮಾಹಿತಿ ಹೊರ ಬಂದಿದೆ. ಆರೋಪಿಯನ್ನು ಬಂಧಿಸಿ ಕಳವು ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್ ಎಚ್‌.ಬಿ. ಸುನೀಲ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದೆ.

English summary
Police have arrested a thief who was burglarizing a locked house in the name of washing machine repairs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X