• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉದ್ಯಮಿಗಳಿಗೆ ಗಾಳ ಹಾಕಿ ಹನಿ ಟ್ರ್ಯಾಪ್ ಜಾಲ ಅಂದರ್

|
Google Oneindia Kannada News

ಬೆಂಗಳೂರು, ಜನವರಿ 27: ಉದ್ಯಮಿಗಳಿಗೆ ಗಾಳ ಹಾಕಿ ಹನಿಟ್ರಾಪ್ ಮಾಡಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್ ನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಉದ್ಯಮಿ ಹನಿ ಟ್ರಾಪ್ ಮಾಡಿ ಲಕ್ಷಾಂತರ ಹಣ ಸುಲಿಗೆ ಮಾಡಿದ್ದ ಖಾಸಗಿ ಯೂ ಟ್ಯೂಬ್ ಚಾನೆಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ವೀರೇಶ್, ಜಾನ್ ಕೆನಡಿ, ನರ್ಮಲ್ ಬಾಬು ಹಾಗೂ ವಿರುದಯ್ ಬಂಧಿತರು. ಬಂಧಿತ ಆರೋಪಿಗಳ ಬಳಿ ಹಲವು ಅಧಿಕಾರಿಗಳ ಹನಿ ಟ್ರ್ಯಾಪ್ ವಿಡಿಯೋ ಗಳು ಲಭ್ಯವಾಗಿವೆ.

ಬಂಧನವಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ನಲ್ಲಿರುವ ವಿಡಿಯೋ ಡಿಲೀಟ್ ಮಾಡಿದ್ದು, ಮೊಬೈಲ್ ನಲ್ಲಿರುವ ವಿಡಿಯೊ ರೀಕವರಿ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮೂಲದ ಶೇಖರ್ ಎಂಬ ಉದ್ಯಮಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು. ಈ ವೇಳೆ ಸುಕನ್ಯಾ ಹೆಸರಿನ ಕೊಠಡಿಗೆ ಭೇಟಿ ನೀಡಿ ಪುಸಲಾಯಿಸಿದ್ದಾಳೆ‌. ಕೊನೆಗೂ ಇಬ್ಬರು ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಇದನ್ನು ಯುವತಿ ಗೊತ್ತಿಲ್ಲದೇ ವಿಡಿಯೋ ಮಾಡಿಕೊಂಡು ಹೋಗಿದ್ದಾಳೆ‌.

ಇದಾದ ಕೆಲ ತಿಂಗಳ ಬಳಿಕ ಉದ್ಯಮಿ ಮೊಬೈಲ್ ಗೆ ವಿಡಿಯೋ ಕಳಿಸಿದ್ದು, ನೀವು 80 ಲಕ್ಷ ರೂ. ಹಣ ನೀಡದಿದ್ದರೆ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಬಿಡುವುದಾಗಿ ಹೆದರಿಸಿದ್ದಾರೆ. ಪದೇ ಪದೇ ಹೆದರಿಸಿ 34 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ಪುನಃ ಮತ್ತೆ ಕರೆ ಮಾಡಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ತನ್ನ ಪಾಲುದಾರನೊಬ್ಬನ ಬಳಿ ಹೇಳಿಕೊಂಡಿದ್ದು, ಅವರಿಗೂ ಆಮ ಇದೇ ರೀತಿ ಆಗಿರುವ ಸಂಗತಿ ಹೊರಬಿದ್ದಿದೆ‌. ಶೇಖರ್ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಮೇರೆಗೆ ಖಾಸಗಿ ಯೂ ಟ್ಯೂಬ್ ಚಾನೆಲ್ ಕಚೇರಿ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

   ಅಂಗಡಿಗಳ ಮುಂದೆ ರಾರಾಜಿಸಲಿದೆ ಕನ್ನಡ ಫಲಕ-ಇಲ್ಲದಿದ್ರೆ Trade License Cancel ! | Oneindia Kannada

   ಬಂಧಿತರೊಂದಿಗೆ ಸಂಪರ್ಕದಲ್ಲಿರುವ ಆರೋಪಿಗಳಿಗೆ ಇದೀಗ ಸಿಸಿಬಿ ತಲೆ ನೋವು ಶುರುವಾಗಿದೆ. ಕೆಲ ಉದ್ಯಮಿಗಳನ್ನು ಹನಿ ಟ್ರ್ಯಾಪ್ ಮಾಡಿದ್ದು ಅದರ ವಿವರಗಳನ್ನು ಪೊಲೀಸರು ಪಡೆಯುತ್ತಿದ್ದಾರೆ.

   English summary
   Central Crime Branch of Bengaluru Police arrested a gang involved in alleged honey trap. Know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X