ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಥಳದಲ್ಲೇ ನಕಲಿ ಕೀ ತಯಾರಿಸಿ ಕಳ್ಳತನ ಮಾಡುತ್ತಿದ್ದ ಖದೀಮನ ಬಂಧನ

|
Google Oneindia Kannada News

ಬೆಂಗಳೂರು, ಏ.3: ಈ ಕೀ ಮೇಕರ್ ಕತೆ ಯಾವ ಸಿನಿಮಾ, ಕಾದಂಬರಿ ಕತೆಗಿಂತಲೂ ಕಡಿಮೆ ಇಲ್ಲ, ನಿರ್ಮಾಣ ಹಂತದಲ್ಲಿರುವಾಗಲೇ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲ್ಯಾಟ್‌ಗಳನ್ನು ಗುರುತಿಸಿ ಅವುಗಳ ಮುಖ್ಯದ್ವಾರದ ನಕಲಿ ಕೀ ತಯಾರಿಸಿಕೊಡುತ್ತಿದ್ದ ಚೋರನನ್ನು ಪೊಲೀಸರು ಬಂಧಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅಂತಹ ಮನೆಗಳಿಗೆ ಬಾಡಿಗೆ ಬರುವವರೆಗೆ ಕಾದು ಕಳ್ಳತನ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಸದಾ ಕೀ ತಯಾರಿಸುವ ಯಂತ್ರವನ್ನೇ ಬ್ಯಾಗ್‌ನಲ್ಲಿಟ್ಟುಕೊಂಡು ಈ ಖತರ್ನಾಕ್ ಖದೀಪ ಸ್ಥಳದಲ್ಲೇ ನಕಲಿ ಕೀ ತಯಾರಿಸಿ ಬೀಗ ಹಾಕಿದ ನೂರಾರು ಮನೆಗಳಿಗೆ ಕನ್ನ ಹಾಕಿ ದೋಚಿದ್ದ 40 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್ ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ, ವಿಡಿಯೋ ವೈರಲ್

ಉತ್ತರಹಳ್ಳಿ ಸಮೀಪದ ಭುವನೇಶ್ವರಿ ನಗರ ನಿವಾಸಿ ಪ್ರಕಾಶ್ ಬಾಲಾಜಿ(32) ಬಂಧಿತ. 2018ರ ಡಿ.2ರಂದು ವಿವಾಹ ನಡೆಯುವ ವೇಳೆ ಒಡವೆ ಕಳ್ಳತನವಾಗಿದ್ದವು. ಈ ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡ ಇನ್ಸ್‌ಪೆಕ್ಟರ್ ಎಂ ಮಹಮ್ಮದ್ ನೇತೃತ್ವದ ತಂಡ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಆತನ ಬಳಿ 2 ಸಾವಿರಕ್ಕೂ ಹೆಚ್ಚಿನ ಕೀಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

Police arrest burglar who made duplicate keys after memorising lock patterns

ಪ್ರಕಾಶ್ ಒಬ್ಬ ವೃತ್ತಿಪರ ಕಳ್ಳನಾಗಿದ್ದು, ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2018ರ ಫೆಬ್ರವರಿಯಲ್ಲಿ ಆತನನ್ನು ಬಂಧಿಸಿದ್ದ ಬೊಮ್ಮನಹಳ್ಳಿ ಪೊಲೀಸರು 1,750 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದರು. ನಂತರ ಜಾಮೀನು ಪಡೆದು ಹೊರ ಬಂದು ತನ್ನ ಹಳೆ ಚಾಳಿ ಮುಂದುವರೆಸಿದ್ದ. ಹತ್ತು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ಆರೋಪಿ ಕಳೆದ ವರ್ಷ ಬಂಧನವಾಗಿದ್ದ. ಆದರೆ ಜಾಮೀನು ಪಡೆದು ಹೊರಬಂದು ಮತ್ತೆ ಕಳ್ಳತನಕ್ಕೆ ಮುಂದಾಗಿದ್ದನು.

English summary
The Suddaguntepalya police on Tuesday arrested a 32-year-old habitual offender who had allegedly come up with a novel way to burgle homes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X