ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕಾಲೇಜೊಂದರ ಬಳಿ ಡ್ರಗ್ಸ್ ಮಾರುತ್ತಿದ್ದ ನಟ ಸೇರಿ ಮೂವರ ಬಂಧನ

|
Google Oneindia Kannada News

ಬೆಂಗಳೂರು, ಸೆ. 25: ಡ್ರಗ್ಸ್ ಮಾರುತ್ತಿದ್ದರೆನ್ನಲಾದ ಒಬ್ಬ ಮಲಯಾಳಂ ನಟ ಸೇರಿ ಮೂವರನ್ನು ಬೆಂಗಳೂರಿನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಪ್ರತಿಷ್ಠಿತ ಎಚ್‌ಎಸ್‌ಆರ್ ಲೇಔಟ್‌ನ ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್‌ಐಎಫ್‌ಟಿ) ಕ್ಯಾಂಪಸ್ ಬಳಿ ಈ ಆರೋಪಿಗಳು ಮಾದಕ ವಸ್ತುಗಳನ್ನು ಮಾರುತ್ತಿದ್ದರೆನ್ನಲಾಗಿದೆ.

ಸೆಪ್ಟೆಂಬರ್ 19ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ ಆರೋಪಿಗಳು ಈ ಕ್ಯಾಂಪಸ್‌ನಲ್ಲಿ ಕೆಲ ವಾರಗಳಿಂದ ಡ್ರಗ್ಸ್ ಮಾರುತ್ತಿದ್ದರು. ಪೊಲೀಸರು ಆರೋಪಿಗಳಿಂದ 191 ಗ್ರಾಂ ಎಂಡಿಎಂಎ ಮತ್ತು 2.8 ಕಿಲೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಮೊಹಮ್ಮದ್ ಶಾನೀದ್, ಶಿಯಾಸ್ ಮತ್ತು ಎಂ ಜಿತಿನ್ ಎಂದು ಗುರುತಿಸಲಾಗಿದೆ. ಇವರ ಪೈಕಿ ಶಿಯಾಸ್ ಮಲಯಾಳಂ ಕಿರುತೆರೆಯ ನಟ ಎಂದು ಹೇಳಲಾಗಿದೆ. ಮೂವರೂ ಕೂಡ ಕೇರಳ ಮೂಲದವರೇ ಆಗಿರುವುದು ತಿಳಿದುಬಂದಿದೆ.

ಬೆಂಗಳೂರು:ಡ್ರಗ್ಸ್‌ ಪೆಡ್ಲಿಂಗ್ ನಿಂದ ಸಂಪಾದಿಸಿದ್ದ ಕೋಟಿ ಮೌಲ್ಯ ಆಸ್ತಿ ಮುಟ್ಟುಗೋಲು!ಬೆಂಗಳೂರು:ಡ್ರಗ್ಸ್‌ ಪೆಡ್ಲಿಂಗ್ ನಿಂದ ಸಂಪಾದಿಸಿದ್ದ ಕೋಟಿ ಮೌಲ್ಯ ಆಸ್ತಿ ಮುಟ್ಟುಗೋಲು!

"ಇಬ್ಬರು ಆರೋಪಿಗಳು ಬಿಕಾಂ ಪದವೀಧರರಾಗಿದ್ದು ಬೆಂಗಳೂರಿನ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಾರೆ. ಮೂರನೇ ವ್ಯಕ್ತಿ 10ನೇ ತರಗತಿ ಓದಿದ್ದಾರೆ. ಈ ಮೂವರೂ ಕೂಡ ಕೇರಳದಿಂದ ಬಂದವರೇ ಆಗಿದ್ದಾರೆ. ಅವರಲ್ಲಿ ಒಬ್ಬಾತ ಟಿವಿ ಸೀರಿಯಲ್ ನಟ ಎಂದು ಅವರು ಹೇಳಿಕೊಂಡಿದ್ದಾರೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

police-arrest-3-including-a-malayalam-actor-on-drug-selling-charges

ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ 1985ರ ಮಾದಕವಸ್ತು ನಿಷೇಧಕ ಕಾಯ್ದೆಯ ಸೆಕ್ಷನ್ 20 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಡ್ರಗ್ ಪೆಡ್ಲರ್ ಕೋಟ್ಯಾಧಿಪತಿ

ಕಳೆದ ವಾರದಂದು ಬೆಂಗಳೂರಿನ ಸಿಸಿಬಿ ಪೊಲೀಸರು ಮೃತ್ಯುಂಜಯ ಎಂಬ ಡ್ರಗ್ ಪೆಡ್ಲರ್‌ನ ಆಸ್ತಿ ಜಫ್ತಿ ಮಾಡಿದ್ದರು. ಈತ ಡ್ರಗ್ ಪೆಡ್ಲಿಂಗ್ ದಂಧೆ ಮೂಲಕ ಗಳಿಸಿದ್ದ ಒಂದೂವರೆ ಕೋಟಿ ರೂ ಮೌಲ್ಯದ ಆಸ್ತಿಯನ್ನು ಸಿಸಿಬಿ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು. ೧೫ ವರ್ಷಗಳಿಂದ ವಿವಿಧ ಡ್ರಗ್ಸ್ ಪೆಡ್ಲಿಂಗ್ ಪ್ರಕರಣಗಳಲ್ಲಿ ಬೇಕಾಗಿದ್ದ ಈತನನ್ನು ಇದೇ ಜುಲೈ ತಿಂಗಳಲ್ಲಿ ಪೊಲೀಸರು ಬಂದಿಸಿದ್ದರು. ಈತ ಮಾದಕ ವಸ್ತು ಮಾರಾಟ ದಂಧೆ ಮೂಲಕ ಕೋಟಿ ಕೋಟಿ ಹಣ ಸಂಪಾದನೆ ಮಾಡಿದ್ದು ಬಯಲಾಗಿತ್ತು. ವಿವಿಧ ಮೂಲಗಳಿಂದ ೫ ಕೋಟಿ ರೂಗೂ ಹೆಚ್ಚು ಹಣವನ್ನು ತನ್ನ ಪತ್ನಿಯ ಬ್ಯಾಂಕ್ ಖಾತೆಗಳಿಂದ ಹಣ ಸಂದಾಯವಾಗಿರುವುದು ಪತ್ತೆಯಾಗಿತ್ತು.

ಗಾಂಜಾ ಮಾರಾಟದ ಅರೋಪದಲ್ಲಿ ಮಲ್ಲೇಶ್ ಎಂಬಾತನನ್ನು ಬಂಧಿಸಲಾಗಿತ್ತು. ಈತ ಕಳೆದ 10-12 ವರ್ಷಗಳಿಂದ ನಿರಂತರವಾಗಿ ಗಾಂಜಾ ಕಳ್ಳಸಾಗಣೆ ಮೂಲಕ ಮಾರಾಟವನ್ನು ಮಾಡುತ್ತಿದ್ದ. ಈ ಬಗ್ಗೆ ನಿಖರ ಮಾಹಿತಿಯನ್ನು ಪಡೆದಿದ್ದ ಸಿಸಿಬಿ ಪೊಲೀಸರು ಮಲ್ಲೇಶ್‌ನನ್ನು ಬಂಧಿಸಿದ್ದರು. ಮಲ್ಲೇಶ್ 2014 ರಿಂದ 2022ವರೆಗೂ ಗಾಂಜಾವನ್ನು ಮಾರಾಟವನ್ನು ಮಾಡಿದ್ದಾನೆ. ಈತನ ವಿರುದ್ದ 7ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

police-arrest-3-including-a-malayalam-actor-on-drug-selling-charges

ಬೆಂಗಳೂರು ಗ್ರಾ. ಪೊಲೀಸರು ಕಲಿಸಿದ್ದ ಪಾಠ ಬೆಂಗಳೂರು ಗ್ರಾಮಾಂತರ ಪೊಲೀಸರು ಅಂಜಯ್ ಕುಮಾರ್ ಎಂಬಾತನ ಆಸ್ತಿ ಪಾಸ್ತಿಯನ್ನು ಈ ಹಿಂದೆ ಮೊದಲ ಬಾರಿಗೆ ಜಪ್ತಿ ಮಾಡಿದ್ದರು. ನಗರ ಸಿಸಿಬಿ ಪೊಲೀಸರು ಮೊದಲ ಬಾರಿಗೆ ಗಾಂಜಾ ಪೆಡ್ಲಿಂಗ್ ಮಾಡಿದ್ದ ಮಲ್ಲೇಶ್ ನ ಆಸ್ತಿ ಪಾಸ್ತಿ ಜಪ್ತಿ ಮಾಡಿದ್ದರು. ರಾಜ್ಯದಲ್ಲಿ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದವರ ಆಸ್ತಿ ಮುಟ್ಟುಗೋಲಿನ ಮೂರನೇ ಪ್ರಕರಣ ಮೃತ್ಯುಂಜಯ ಎಂಬ ಆರೋಪಿಯದ್ದಾಗಿದೆ.

(ಗಮನಿಸಿ: ಡ್ರಗ್ಸ್ ಸೇವನೆಯಾಗಲೀ, ಮಾರಾಟವಾಗಲೀ ಶಿಕ್ಷಾರ್ಹ ಅಪರಾಧವಾಗಿದೆ. ಡ್ರಗ್ಸ್ ಸೇವನೆ ವ್ಯಕ್ತಿಯ ಆರೋಗ್ಯಕ್ಕೆ ಮಾರಕ. ಡ್ರಗ್ ಪೆಡ್ಲರ್‌ಗಳು ಯಾರಾದರೂ ನಿಮ್ಮ ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಅಲರ್ಟ್ ಮಾಡಿ. ಇದು ಸಾಮಾಜಿಕ ಸ್ವಾಸ್ಥ್ಯದ ಉದ್ದೇಶದಿಂದ ನೀಡಿರುವ ಸಂದೇಶ.)

(ಒನ್ಇಂಡಿಯಾ ಸುದ್ದಿ)

English summary
A Malayalam small screen actor and 2 others were arrested by Bengaluru CCB police after caught when selling drugs near NIFT campus in HSR Layout recently. Police have seized 2.8 kg ganja from the accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X