ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಹಿತಿ ಯುಗದಲ್ಲಿನ ಬದಲಾವಣೆ ಕೈಗಾರಿಕಾ ಯುಗಕ್ಕಿಂತಲೂ ಕ್ಷಿಪ್ರ: ಮೋದಿ

|
Google Oneindia Kannada News

ಬೆಂಗಳೂರು, ನವೆಂಬರ್ 19: ಮಾಹಿತಿ ಯುಗದಲ್ಲಿನ ಬದಲಾವಣೆ ಕೈಗಾರಿಕಾ ಯುಗಕ್ಕಿಂತಲೂ ಕ್ಷಿಪ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

'ಬೆಂಗಳೂರು ಟೆಕ್ ಸಮಿತ್' 2020 ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕಾ ಯುಗದಲ್ಲಿ ಬದಲಾವಣೆ ನಿಧಾನವಾಗಿದೆ ಆದರೆ ಮಾಹಿತಿ ಯುಗದಲ್ಲಿ ಬದಲಾವಣೆ ಕ್ಷಿಪ್ರ ಗತಿಯಲ್ಲಿ ಸಾಗಿದೆ ಎಂದರು.

ಬೆಂಗಳೂರು ಟೆಕ್ ಶೃಂಗಸಭೆಯಲ್ಲಿಂದು ಮೋದಿಯಿಂದ ಭಾಷಣಬೆಂಗಳೂರು ಟೆಕ್ ಶೃಂಗಸಭೆಯಲ್ಲಿಂದು ಮೋದಿಯಿಂದ ಭಾಷಣ

ತಂತ್ರಜ್ಞಾನದಿಂದಲೇ ಆಯುಷ್ಮಾನ ಭಾರತ್ ಯಶಸ್ವಿಯತ್ತ ಸಾಗಿದೆ ಇದರಿಂದ ಬಡವರಿಗೆ ನೆರವಾಗುತ್ತದೆ. ಇಂದಿನ ತಂತ್ರಜ್ಞಾನದಿಂದ ಭಾರತದಿಂದ ಯಾವುದೇ ಮೂಲೆಯಿಂದ ಆರೋಗ್ಯ ಸೇವೆ ಪಡೆಯಲು ಸಾಧ್ಯವಾಗಲಿದೆ. ತಂತ್ರಜ್ಞಾನದಿಂದ ಭಾರತೀಯರ ಜೀವನ ವೇಗವಾಗಿ ಬದಲಾಗುತ್ತಿದೆ.

 PM Narendra Modi Inaugural Speech At Bengaluru Tech Summit 2020 Highlights

ವೇಗ ಹಾಗೂ ಪಾರದರ್ಶಕತೆ ತಂತ್ರಜ್ಞಾನದಿಂದ ಬಂದಿದೆ. ಎಲ್ಲಾ ಮನೆಗಳಿಗೂ ವಿದ್ಯುತ್ ನೀಡಲು ಸಾಧ್ಯವಾಗುತ್ತಿದೆ. ದೇಶಾದ್ಯಂತ ಹಲವು ಮಾಹಿತಿ ತಂತ್ರಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕೊವಿಡ್ 19 ಸಾಂಕ್ರಾಮಿಕ ರೋಗವು ರಸ್ತೆಗೆ ಬಂದಿರುವ ಒಂದು ಅಡ್ಡಿಯೇ ಹೊರತು ಕೊನೆಯಲ್ಲ, ಕೊವಿಡ್ 19 ಸವಾಲುಗಳು ಹೊಸ ಆವಿಷ್ಕಾರಕ್ಕೆ ಕಾರಣವಾಗಿದೆ.

ಶಿಕ್ಷಣ, ಉದ್ಯೋಗ, ವಾಣಿಜ್ಯ ಆರೋಗ್ಯ ಸೇವೆಗಳಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿದೆ, ಇದರಿಂದ ಜನರಿಗೂ ಲಾಭವಾಗಿದೆ. ಭವಿಷ್ಯವು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬರುತ್ತಿದೆ.

ಯಾವುದೇ ಸಂದರ್ಭದಲ್ಲಿ ಹೊಸ ಆವಿಷ್ಕಾರವು ಮಾರಕಟ್ಟೆಯ ದಿಕ್ಕನ್ನೇ ಬದಲಿಸುವ ಶಕ್ತಿಯನ್ನು ಹೊಂದಿದೆ ಎಂದರು.

English summary
The 23rd edition of the Bengaluru Tech Summit (BTS) inaugurated by Prime Minister Narendra Modi. Modi is the second Prime minister who inaugurated the summit after his predecessor Atal Bihari Vajpayee, who had declared the summit open 22 years ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X