ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಧಾನಿ ಮೋದಿಯನ್ನು ತಬ್ಬಿ ಕಣ್ಣೀರಿಟ್ಟ ಇಸ್ರೋ ಮುಖ್ಯಸ್ಥ ಕೆ.ಶಿವನ್

|
Google Oneindia Kannada News

Recommended Video

ಬಿಕ್ಕಿ ಬಿಕ್ಕಿ ಅಳುತ್ತಿದ್ದ ವಿಜ್ಞಾನಿ ಕಂಡು ಮೋದಿ ಮಾಡಿದ್ದೇನು ಗೊತ್ತಾ..? | Chandrayaan 2 | Oneindia Kannada

ಬೆಂಗಳೂರು, ಸೆಪ್ಟೆಂಬರ್ 07: ತನ್ನ ಗುರಿ ತಲುಪುವ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಚಂದ್ರಯಾನ- 2 ನೌಕೆ ಸಂವಹನ ಕಳೆದುಕೊಳ್ಳುತ್ತಿದ್ದಂತೆಯೇ ಬೆಂಗಳೂರಿನ ಇಸ್ರೋದ ಕಂಟ್ರೋಲ್ ಸೆಂಟರ್ ನಲ್ಲಿ ದುಗುಡ ಮನೆ ಮಾಡಿತ್ತು. ಈ ಹೆಮ್ಮೆಯ ಕ್ಷಣಕ್ಕಾಗಿ ಉಸಿರುಬಿಗುಹಿಡಿದು ಕಾದಿದ್ದ ಭಾರತೀಯರ ಮನಸ್ಸಿನಲ್ಲೂ ಬೇಸರ ಮನೆ ಮಾಡಿತ್ತು.

ಆದರೆ ಎಲ್ಲಕ್ಕಿಂತ ಭಾವುಕ ಅನ್ನಿಸಿದ ಕ್ಷಣವೆಂದರೆ ತಮ್ಮ ಕನಸಿನ ಕೂಸು ಚಂದ್ರಯಾನ 2 ಕೊನೆಯ ಕ್ಷಣದಲ್ಲಿ ಕಂಡ ಅನಿರೀಕ್ಷಿತ ತಿರುವನ್ನು ನೆನೆದು ಇಸ್ರೋ ಅಧ್ಯಕ್ಷ ಕೆ. ಶಿವನ್ ಕಣ್ಣೀರಿಟ್ಟಿದ್ದು. ನಂತರ ಪ್ರಧಾನಿ ಮೋದಿ ಅವರನ್ನು ತಬ್ಬಿದ್ದು!

PM Narendra Modi hugs, consoles ISRO Chief K Sivan

ಹೌದು, ಇಸ್ರೋ ಕಂಟ್ರೋಲ್ ಸೆಂಟರ್ ನಲ್ಲಿ ಭಾಷಣ ಮುಗಿಸಿ ಹೊರಟ ಮೋದಿಯವರನ್ನು ಬೀಳ್ಕೊಡಲು ಬಂದ ಶಿವನ್, ಅದುವರೆಗೂ ಗಂಟಲೊಳಗೇ ಹುದುಗಿಸಿಕೊಂಡಿದ್ದ ದುಃಖವನ್ನು ಹೊರಹಾಕಿದರು. ಅವರ ನೋವನ್ನು ಅರ್ಥಮಾಡಿಕೊಂಡ ಪ್ರಧಾನಿ ಮೋದಿ, ರಕ್ಷಣವೇ ಅವರನ್ನು ತಬ್ಬಿ, ಬೆನ್ನುಸವರಿ, ಸಂತೈಸಿದರು. ಚಂದ್ರಯಾನ 2 ಶಿವನ್ ಅವರಿಗೆ ಒಂದು ಬಾಹ್ಯಾಕಾಶ ಯೋಜನೆಯಷ್ಟೇ ಆಗದೆ ತಮ್ಮ ಕುಟುಂಬದ ಕೂಸೇ ಆಗಿತ್ತು ಎಂಬುದಕ್ಕೆ ಈ ಕ್ಷಣ ಸಾಕ್ಷಿಯಾಯಿತು.

English summary
PM Narendra Modi hugged and consoled ISRO Chief K Sivan after he(Sivan) broke down,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X