ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೋದಿ ಬೆಂಗಳೂರು ಭೇಟಿ; ಈ ಶಾಲೆ, ಕಾಲೇಜುಗಳಿಗೆ ರಜೆ

|
Google Oneindia Kannada News

ಬೆಂಗಳೂರು ಜೂ.19: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸಕ್ಕಾಗಿ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಕೇಂಗೇರಿ ಮತ್ತು ಕೇಂಗೇರಿ ಉಪನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಪ್ರಧಾನಿ ಮೋದಿ ಸಂಚರಿಸಲಿರುವ ಮಾರ್ಗದಲ್ಲಿ ಸೂಕ್ತ ಮುನ್ನೆಚ್ಚರಿಕೆ, ಬಿಗಿ ಭದ್ರತೆ ದೃಷ್ಟಿಯಿಂದ ಶಾಲಾ ಕಾಲೇಜು ಸೇರಿ ಒಟ್ಟು 22 ಶೈಕ್ಷಣಿಕ ಸಂಸ್ಥೆಗಳಿಗೆ ಸೋಮವಾರ ರಜೆ ಘೋಷಿಸಿ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

ರಜೆ ಪಡೆದ ಶಾಲೆ-ಕಾಲೇಜುಗಳು; ಕೆಂಗೇರಿಯ ಕಾರ್ಮೆಲ್ ಪಬ್ಲಿಕ್ ಶಾಲೆ, ಸರ್ಕಾರಿ ಪ್ರೌಢ ಶಾಲೆ (ಆರ್.ಎಂ.ಎಸ್.ಇ), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ನ್ಯೂ ಸೆಂಟ್ ಆನ್ನಾಸ್, ಕೆಂಗೇರಿ ಉಪನಗರ ವ್ಯಾಪ್ತಿಯಲ್ಲಿನ ಇಂಗ್ಲೀಷ್ ಸ್ಕೂಲ್, ಹೋಲಿ ಚೈಲ್ಡ್ ಇಂಗ್ಲೀಷ್ ಸ್ಕೂಲ್, ಶಂಕರಾಚಾರ್ಯ ವಿದ್ಯಾಪೀಠ, ಮದರ್ಸ್ ಮಿಲೇನಿಯಂ ಶಾಲೆ, ವಿದ್ಯಾಭಾರತಿ ಶಾಲೆ, ಎಸ್.ಜೆ.ಆರ್. ಪಬ್ಲಿಕ್ ಶಾಲೆ, ಶ್ರೀ ಭಂಡೇಶ್ವರಿ ಸ್ವಾಮಿ ಶಾಲೆ.

PM Narendra Modi Bengaluru Visit Holiday Announced For School And Colleges

ರೋಮನ್ ಕಿಂಟೋ ಶಾಲೆ, ಕೊಮ್ಮಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀಡಿ ಕಾರ್ಮಿಕರ ಕಾಲೋನಿಯಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕರ ಶಾಲೆಗೆ ರಜೆ ನೀಡಲಾಗಿದೆ.

PM Narendra Modi Bengaluru Visit Holiday Announced For School And Colleges

ಕೆಂಗೇರಿಯ ಸರ್ಕಾರಿ ಉರ್ದು ಪ್ರೌಢಶಾಲೆ, ಪಿಜೆಎನ್ ಪಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪಿಜೆಎನ್ ಪಿ ಪದವಿ ಪೂರ್ವ ಕಾಲೇಜು, ರಾಧಾಕೃಷ್ಣ ಶಾಲೆ, ಇನ್ನು ಕೆಂಗೇರಿ ಉಪನಗರದ, ಪ್ರಿಯದರ್ಶಿನಿ ಕಾಲೇಜು, ಶೇಷಾದ್ರಿಪುರಂ ಕಾಲೇಜು, ಸುರಾನಾ ಕಾಲೇಜು, ಸರ್ಕಾರಿ ಪ್ರೌಢ ಶಾಲೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಆದೇಶಿಸಲಾಗಿದೆ.

English summary
Prime minister Narendra Modi will visit Bengaluru on Monday, June 20th. Holiday announced for school and colleges by education department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X