• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮ್ಯಾಂಡೊಲಿನ್ ಮಾಂತ್ರಿಕನ ಅಗಲಿಕೆಗೆ ಪ್ರಧಾನಿ ಕಂಬನಿ

By Mahesh
|

ಬೆಂಗಳೂರು, ಸೆ.19: ಮ್ಯಾಂಡೊಲಿನ್ ಮಾಂತ್ರಿಕ ಯು. ಶ್ರೀನಿವಾಸ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಸಚಿವಾಲಯದ ಅಧಿಕೃತ ಟ್ವೀಟ್ ಖಾತೆಯಿಂದ ಶ್ರೀನಿವಾಸ್ ಅವರ ಅಗಲಿಕೆ ನೋವು ತಂದಿದೆ ಎಂದು ಶೋಕ ಸಂದೇಶ ಹೊರಡಿಸಲಾಗಿದೆ.

ಚಿಕ್ಕ ವಯಸ್ಸಿನಲ್ಲೇ ತಮ್ಮ ದೈತ್ಯ ಪ್ರತಿಭೆಯ ಕುರುಹು ತೋರಿದ್ದ ಶ್ರೀನಿವಾಸ್ ಅವರು ಭಾರತದ ಸಂಗೀತ ಜಗತ್ತಿನ ಅದ್ಭುತ ಆಸ್ತಿಯಾಗಿದ್ದರು. ಅವರ ನಿಧನದಿಂದ ಆಗಾಧ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.[ಮ್ಯಾಂಡೋಲಿನ್ ಶ್ರೀನಿವಾಸ್ ಗೆ ಸಂಗೀತ ನಮನ]

ಸಂಗೀತಗಾರರು, ಸಿನಿಮಾ ಜಗತ್ತಿನ ಸೆಲೆಬ್ರಿಟಿಗಳು, ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ. ಸಂಗೀತಗಾರ ಎ.ಆರ್ ರೆಹಮಾನ್, ಗಾಯಕ ಸೋನು ನಿಗಮ್ ಸೇರಿದಂತೆ ಹಲವಾರು ಮಂದಿ ತಮ್ಮ ದುಃಖ ತೋಡಿಕೊಂಡಿದ್ದಾರೆ.

ಫೇಸ್ ಬುಕ್ ನಲ್ಲಿ ಶ್ರೀನಿವಾಸ್ ಅವರ ಅಭಿಮಾನಿಯೊಬ್ಬರ ಸಂದೇಶ ಹೀಗಿದೆ

ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಮ್ಯಾಂಡೊಲಿನ್ ನಂಥ ಅಪರಿಚಿತ ವಾದ್ಯವನ್ನು ಪರಿಚಯಿಸಿ ಇಲ್ಲಿನ ತಾಳ ಮೇಳ ಶ್ರುತಿ ಲಯಕ್ಕೆ ಒಗ್ಗುವಂತೆ ಮಾಡಿದ ದೈತ್ಯ ಪ್ರತಿಭೆ ಶ್ರೀನಿವಾಸ್ ಅವರ ಸಾವಿನಿಂದ ಸಂಗೀತ ಜಗತ್ತಿನಲ್ಲಿ ಮೌನರಾಗ ತುಂಬಿದೆ. ಶೋಕ ಸಂದೇಶಗಳ ಸಂಗ್ರಹ ಇಲ್ಲಿದೆ

ಸಾಮಾಜಿಕ ಜಾಲ ತಾಣಗಳಲ್ಲಿ ಶ್ರೀನಿವಾಸ್ ಗೆ ನಮನ

ಸಾಮಾಜಿಕ ಜಾಲ ತಾಣಗಳಲ್ಲಿ ಶ್ರೀನಿವಾಸ್ ಗೆ ನಮನ

ಪ್ರಧಾನಿ ಸಚಿವಾಲಯ ಸೇರಿದಂತೆ ಸಂಗೀತಗಾರರು, ಸಿನಿಮಾ ಜಗತ್ತಿನ ಸೆಲೆಬ್ರಿಟಿಗಳು, ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಮೂಲಕ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಸಚಿವಾಲಯದಿಂದ ಬಂದ ಟ್ವೀಟ್ ಸಂದೇಶ

ಮ್ಯಾಂಡೊಲಿನ್ ಶ್ರೀನಿವಾಸ್ ನಿಧನಕ್ಕೆ ಪ್ರಧಾನಿ ಸಚಿವಾಲಯದಿಂದ ಟ್ವೀಟ್ ಮೂಲಕ ಬಂದ ಶೋಕ ಸಂದೇಶ

ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ದಿಗ್ಬ್ರಮೆ

ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ದಿಗ್ಬ್ರಮೆ ವ್ಯಕ್ತಪಡಿಸಿ ಮುಂದಿನ ಲೋಕದಲ್ಲಿ ಅವರಿಗೆ ನೆಮ್ಮದಿ ಸಂತೋಷ ಸಿಗಲಿ ಎಂದಿದ್ದಾರೆ.

ಗಾಯಕ ಸೋನು ನಿಗಮ್ ಕಂಬನಿ

ಗಾಯಕ ಸೋನು ನಿಗಮ್ ಕಂಬನಿ ಮಿಡಿದಿದ್ದು, ಕರುಳು ಕಸಿಗೆ ಒಳಗಾಗಿ ಸುಧಾರಿಸಿಕೊಳ್ಳುತ್ತಿದ್ದರು ಆದರೆ, ಅವರ ಸಾವು ದುಃಖ ತಂದಿದೆ.

ಸಂಗೀತಗಾರ ಎಹಸಾಸ್ ನೂರನಿ

ಸಂಗೀತಗಾರ ಎಹಸಾಸ್ ನೂರನಿ ಅವರಿಂದ ಸಂತಾಪ ಸಂದೇಶ

ತಬಲಾ ಮಾಂತ್ರಿಕ ಝಾಕೀರ್ ಹುಸೇನ್

ಭಾರತ ಮಾತೆ ಇಂದು ರೋದಿಸುತ್ತಿದ್ದಾಳೆ, ನಾವು ತಬ್ಬಲಿಯಾಗಿದ್ದೇವೆ. ನನ್ನ ಸೋದರನನ್ನು ಕಳೆದುಕೊಂಡಿದ್ದೇನೆ ಎಂದು ತಬಲಾ ಮಾಂತ್ರಿಕ ಝಾಕೀರ್ ಹುಸೇನ್ ಕಂಬನಿ ಮಿಡಿದಿದ್ದಾರೆ.

ಗಾಯಕಿ ಶ್ರೇಯಾ ಘೋಷಾಲ್ ಸಂತಾಪ

ಗಾಯಕಿ ಶ್ರೇಯಾ ಘೋಷಾಲ್ ಸಂತಾಪ ವ್ಯಕ್ತಪಡಿಸಿ, ವಿಶ್ವದ ಶ್ರೇಷ್ಠ ಸಂಗೀತಗಾರನನ್ನು ಕಳೆದುಕೊಂಡೆವು ಎಂದಿದ್ದಾರೆ.

ಎನ್ ಚಂದ್ರಬಾಬು ನಾಯ್ಡು ಸಂತಾಪ ಸಂದೇಶ

ಶ್ರೀನಿವಾಸ್ ಅವರ ಸಾವು ದಿಗ್ಭ್ರಮೆ ಉಂಟು ಮಾಡಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಸಂದೇಶ ಹೊರಡಿಸಿದ್ದಾರೆ.

ಗಾಯಕ ವಿಜಯ್ ಏಸುದಾಸ್ ಸಂದೇಶ

ಸಂಗೀತಜ್ಞ ಕೆಜೆ ಏಸುದಾಸ್ ಅವರ ಪುತ್ರ ವಿಜಯ್ ಯೇಸುದಾಸ್ ಅವರ ಶೋಕ ಸಂದೇಶ.

ಗಾಯಕಿ ಚಿನ್ಮಯಿ ಶ್ರೀಪಾದ

ಗಾಯಕಿ ಚಿನ್ಮಯಿ ಶ್ರೀಪಾದ ಅವರು ದೈತ್ಯ ಪ್ರತಿಭೆ ಶ್ರೀನಿವಾಸ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಹಂಸಾನಂದಿ ಅವರಿಂದ ಶೋಕ ಸಂದೇಶ

ಕೆವಿ ರಾಮಪ್ರಸಾದ್(ಹಂಸಾನಂದಿ) ಅವರು ತಮ್ಮ ನೆಚ್ಚಿನ ಸಂಗೀತಗಾರ ಮ್ಯಾಂಡೊಲಿನ್ ಶ್ರೀನಿವಾಸ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ

ಗಾಯಕ ಶ್ರೀನಿವಾಸ್ ಶೋಕಾಚರಣೆ

ಗಾಯಕ ಶ್ರೀನಿವಾಸ್ ಅವರು ಚಿಕ್ಕ ವಯಸ್ಸಿನಲ್ಲೇ ದೇವರು ಶ್ರೀನಿವಾಸ್ ಅವರನ್ನು ಕರೆದುಕೊಂಡು ಬಿಟ್ಟ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಗಾಯಕ ಕ್ರಿಶ್ ಅವರಿಂದ ಶೋಕ ಸಂದೇಶ

ಸುದ್ದಿ ಕೇಳಿ ಶಾಕ್ ಆಯಿತು ಎಂದು ಗಾಯಕ ಕ್ರಿಶ್ ಅವರಿಂದ ಶೋಕ ಸಂದೇಶ

English summary
Prime Minister's Office, Musicians and several Cinema Celebrities took to Twitter to offer their condolences to sad demise of Mandolin U Srinivas. Here's what they said. Musicians across the country expressed grief and disbelief. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more