ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಾಸಕ ಎಸ್. ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ : ರೌಡಿ ಕುಳ್ಳ ದೇವರಾಜ್ ಮತ್ತು ಗೋಪಾಲಕೃಷ್ಣ ನಡುವೆ 20 ಭೇಟಿ

|
Google Oneindia Kannada News

ಬೆಂಗಳೂರು, ಡಿ. 02: ಶಾಸಕ ಎಸ್. ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ರೂಪಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಹಾಗೂ ರೌಡಿ ಶೀಟರ್ ಕುಳ್ಳ ದೇವರಾಜ್ 20 ಕ್ಕೂ ಹೆಚ್ಚು ಬಾರಿ ಭೇಟಿ ಮಾಡಿರುವ ಸಂಗತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಯಲಹಂಕ ಕ್ಷೇತ್ರದ ಶಾಸಕ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ದೂರುದಾರ ಎಸ್.ಆರ್. ವಿಶ್ವನಾಥ್ ಅವರಿಂದ ಹೆಚ್ಚಿನ ಹೇಳಿಕೆ ಪಡೆಯುವ ಸಂಬಂಧ ರಾಜಾನುಕುಂಟೆ ಪೊಲೀಸರು ನೋಟಿಸ್ ನೀಡಿದ್ದಾರೆ.

Breaking: ಶಾಸಕ ಎಸ್. ಆರ್‌. ವಿಶ್ವನಾಥ್ ಕೊಲೆಗೆ ಸಂಚು: ಒಬ್ಬನನ್ನು ಬಂಧಿಸಿದ ಸಿಸಿಬಿ ಪೊಲೀಸರುBreaking: ಶಾಸಕ ಎಸ್. ಆರ್‌. ವಿಶ್ವನಾಥ್ ಕೊಲೆಗೆ ಸಂಚು: ಒಬ್ಬನನ್ನು ಬಂಧಿಸಿದ ಸಿಸಿಬಿ ಪೊಲೀಸರು

ಪೊಲೀಸರ ನಡೆ ಅನುಮಾನ:

ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿ ಕುಳ್ಳ ದೇವರಾಜ್ ಹೆಸರನ್ನು ಕೈ ಬಿಡಲಾಗಿದೆ. ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಮಾತ್ರ ಎಫ್ಐಆರ್ ದಾಖಲಿಸಲಾಗಿದೆ. ರಾಜಾನುಕುಂಟೆ ಪೊಲೀಸರ ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಎಫ್ಐಆರ್ ದಾಖಲಿಸಿರುವ ಪಿಎಸ್ಐ ಬಬಿತಾ ಅವರ ಅವರು ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

 Plot to Kill MLA SR Vishwanath; Rowdy Kulla Deveraj and Gopalakrishna Met 20 Times

ರಾಜಾನುಕುಂಟೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ದೂರುದಾರ, ಶಾಸಕ ಎಸ್.ಆರ್ ವಿಶ್ವನಾಥ್ ಅವರಿಗೆ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ರಾಜಾನುಕುಂಟೆ ಠಾಣೆಗೆ ಭೇಟಿ ನೀಡಿದ್ದಾರೆ. ಶಾಸಕರ ಹೇಳಿಕೆ ಬಳಿಕ ಸುಪಾರಿ ನೀಡಿದ ಅರೋಪ ಎದುರಿಸುತ್ತಿರುವ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜ್ ಅವರನ್ನು ರಾಜಾನುಕುಂಟೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಎಸ್.ಆರ್.ವಿಶ್ವನಾಥ್‌ ಹತ್ಯೆಗೆ ಸಂಚು: ಎಚ್‌ಡಿಕೆ ಮಹತ್ವದ ಹೇಳಿಕೆಎಸ್.ಆರ್.ವಿಶ್ವನಾಥ್‌ ಹತ್ಯೆಗೆ ಸಂಚು: ಎಚ್‌ಡಿಕೆ ಮಹತ್ವದ ಹೇಳಿಕೆ

ಕಡಪ ಕಿಲ್ಲರ್ಸ್ ಎಂಟ್ರಿ ಮಾತು:

ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ ಸಂಬಂಧ ಅಡಿಯೋ ವೈರಲ್ ಆಗಿದೆ. ಅದರಲ್ಲಿ ಕಡಪದಿಂದ ಕಾಂಟ್ರ್ಯಾಕ್ಟ್ ಕಿಲ್ಲರ್ಸ್ ನ್ನು ಬೆಂಗಳೂರಿಗೆ ಕರೆಸಲಾಗಿತ್ತಾ? ಅವರು ಬೆಂಗಳೂರಿನ ಹೋಟೆಲ್ ನಲ್ಲಿ ಬಾಡಿಗೆ ಹಂತಕರು ತಂಗಿದ್ದರು. ಅವರ ಹಣ ನಾನೇ ಪಾವತಿ ಮಾಡುತ್ತೇನೆ ಎಂದು ಹೇಳಿದ್ದಾಗಿ ರೌಡಿ ಶೀಟರ್ ದೇವರಾಜ್ ಮತ್ತು ಗೋಪಾಲಕೃಷ್ಣ ನಡುವಿನ ಸಂಭಾಷಣೆಯ ಅಡಿಯೂ ವೈರಲ್ ಆಗಿದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸುಪಾರಿ ಕಿಲ್ಲರ್ಸ್ ಕರೆಸಿ ಹತ್ಯೆ ಮಾಡುವ ಪ್ಲಾನ್ ರೂಪಿಸಿದವರು ಅದನ್ನು ರೆಕಾರ್ಡ್ ಮಾಡಿಕೊಂಡಿದ್ದು ಯಾಕೆ ? ಸಂಚು ರೂಪಿಸಿದವರು ರೆಕಾರ್ಡ್ ಮಾಡಿಕೊಳ್ಳುತ್ತಾರಾ ? ಅಥವಾ ಗೋಪಾಲಕೃಷ್ಣ ನನ್ನು ಹಳ್ಳಕ್ಕೆ ತಳ್ಳಲು ಸುಫಾರಿ ಕಿಲ್ಲಿಂಗ್ ಪ್ರಕರಣವೇ ನಾಟಕವಾ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.

ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್: ಎಫ್ಐಆರ್ ದಾಖಲಿಸದೇ ಎನ್‌ಸಿಅರ್ ದಾಖಲಿಸಿದ್ದು ಯಾಕೆ?ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆಗೆ ಸ್ಕೆಚ್: ಎಫ್ಐಆರ್ ದಾಖಲಿಸದೇ ಎನ್‌ಸಿಅರ್ ದಾಖಲಿಸಿದ್ದು ಯಾಕೆ?

ವಿಡಿಯೋ ರೆಕಾರ್ಡ್ ಮೊಬೈಲ್ ಇಲ್ಲ:

ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ಹಾಕಿದ ಪ್ರಕರಣದಲ್ಲಿ ವಿಡಿಯೋ ಮಾಡಿರುವ ಮೂಲ ಮೊಬೈಲ್ ನಾಪತ್ತೆಯಾಗಿದೆ. ರೆಕಾರ್ಡ್ ಮಾಡಿದ ವಿಡಿಯೂ ಕೂಡ ಎಡಿಟ್ ಮಾಡಿದ್ದು, ಮೂಲ ಮೊಬೈಲ್ ಗಾಗಿ ಪೊಲೀಸರು ನಡೆಸುತ್ತಿದ್ದಾರೆ. ಮೂಲ ವಿಡಿಯೋಗಾಗಿ ಶೋಧ ನಡೆಸಲಾಗುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವಿಡಿಯೋ ರವಾನಿಸಲು ಪೊಲೀಸರು ಮೂಲ ಮೊಬೈಲ್ ಹಾಗೂ ಎಡಿಟ್ ಆಗದ ವಿಡಿಯೋ ಬೇಕಾಗಿದ್ದು, ಅದಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಗೋಪಾಲಕೃಷ್ಣ ಮುಗಿಸಲು ಸ್ಟಿಂಗ್ ಪ್ಲಾನ್ :

ಇನ್ನು ಶಾಸಕ ಎಸ್.ಆರ್. ವಿಶ್ವನಾಥ್‌ ವಿರೋಧಿ, ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಅವರ ರಾಜಕೀಯ ಭವಿಷ್ಯ ಮುಗಿಸಲು ಕುಳ್ಳ ದೇವರಾಜ್ ನೇತೃತ್ವದಲ್ಲಿ "ಸಂಚು" ರೂಪಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಬ್ಬ ರೌಡಿ ಶೀಟರ್ ಹಣಕ್ಕಾಗಿ ಬಾಡಿಗೆ ಹಂತಕರನ್ನು ತರುವುದು, ಶಾಸಕರ ಕೊಲೆಗೆ ಮುಹೂರ್ತ ಇಡುವುದು, ಆ ಬಳಿಕ ರೌಡಿಗೆ ಪಶ್ಚಾತಾಪ ಕಾಡುವುದು, ಆತ, ಕ್ಷಮಾಪಣ ಪತ್ರ ಬರೆದು ಶಾಸಕರ ಮನೆ ಬಾಗಿಲಿನಲ್ಲಿ ಹಾಕುವುದು, ಅದನ್ನು ನೋಡಿ ಶಾಸಕರು ಗಾಬರಿಯಾಗಿ ಪೊಲೀಸ್ ಠಾಣೆಗೆ ದೂರು ನೀಡುವುದು, ಸ್ಯಾಂಡಲ್ ವುಡ್ ಸಿನಿಮಾಗಾಗಿ ರೂಪಿಸಿದ ಕಥೆಯಂತಿದೆ.

Recommended Video

MP Sumalatha Ambareesh: ಈ ಪಕ್ಷಕ್ಕೆ ನನ್ನ ಬೆಂಬಲ ಸದಾ ಇರತ್ತೆ!! | Oneindia Kannada

English summary
Alleged plot to kill BJP MLA SR Vishwanath; Police investigation reveals rowdy Kulla Devaraj and Congress leader Gopalkrishna met more than 20 times. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X