ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹತ್ಯೆ ಹಿಟ್ ಲಿಸ್ಟ್‌ನಲ್ಲಿ ಹಿಂದೂ ಮುಖಂಡರು: ಬೆಂಗಳೂರಿನ ತೇಜಸ್ ಗೌಡಗೆ ಭದ್ರತೆ

|
Google Oneindia Kannada News

ಬೆಂಗಳೂರು, ಫೆ. 22: ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇತರೆ ಹನ್ನೆರಡು ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದರ ಬೆನ್ನಲ್ಲೇ ಹತ್ಯೆ ಹಿಟ್ ಲಿಸ್ಟ್‌ನಲ್ಲಿರುವ ಹಿಂದೂ ಮುಖಂಡರಿಗೆ ಬೆಂಗಳೂರು ಪೊಲೀಸರು ಭದ್ರತೆ ಕಲ್ಪಿಸಿದ್ದಾರೆ.

ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣಕ್ಕೂ ಹಾಗೂ ಬೆಂಗಳೂರಿಗೂ ಲಿಂಕ್ ಇರುವ ಸ್ಫೋಟಕ ವಿಚಾರ ಹೊರ ಬಿದ್ದಿದೆ. ಇದರ ಜಾಡು ಹಿಡಿದು ಹರ್ಷ ಕೊಲೆಗೆ ಬಳಸಿರುವ ಕಾರು ಎಲ್ಲಿಂದ ಬಂದಿದೆ. ಯಾರಿಗೆ ಸೇರಿದ್ದು, ಈ ಮತೀಯ ಶಕ್ತಿಗಳಿಗೆ ಹಣಕಾಸು ನೆರವು ನೀಡುತ್ತಿರುವರು ಯಾರು ಎಂಬ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹರ್ಷನನ್ನು ಮುಸ್ಲಿಮರು ಕೊಲೆ ಮಾಡಿದ್ದಾರೆ ಎಂದು ಎಸ್ಪಿಯೇ ಹೇಳಿದ್ದು: ಈಶ್ವರಪ್ಪಹರ್ಷನನ್ನು ಮುಸ್ಲಿಮರು ಕೊಲೆ ಮಾಡಿದ್ದಾರೆ ಎಂದು ಎಸ್ಪಿಯೇ ಹೇಳಿದ್ದು: ಈಶ್ವರಪ್ಪ

ಇನ್ನು ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿರುವ ಹನ್ನೆರಡು ಮಂದಿಯ ಪೈಕಿ ಈ ಕೃತ್ಯದಲ್ಲಿ ಭಾಗಿಯಾಗಿದ್ದರೆ ಮಾತ್ರ ಬಂಧಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಒಬ್ಬ ಮುಗ್ಧನನ್ನು ಸಹ ಬಂಧಿಸಲು ಅವಕಾಶ ಮಾಡಿಕೊಡಲ್ಲ. ಇನ್ನು ಹರ್ಷ ಕೊಲೆಯೇ ಅಂತಿಮವಾಗಬೇಕು. ಈ ರೀತಿಯ ಹತ್ಯೆಗಳು ಮತ್ತೆ ಮರುಕಳಿಸಬಾರದು. ಹೀಗಾಗಿ ಈ ಕೃತ್ಯದ ಹಿಂದೆ ಯಾರಿದ್ದಾರೆ? ಕಾರು ಒದಗಿಸಿದವರು ಯಾರು? ಹಣಕಾಸು ನೆರವು ಕೊಟ್ಟವರು ಯಾರು ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವತಃ ಹೇಳಿಕೆ ನೀಡಿದ್ದಾರೆ.

Plot to Kill Hindu Leaders; Police Security Arranged Based on Intelligence Report

ಖಾಸಿಫ್ ಹೇಳಿಕೆ ಆಧರಿಸಿ ತನಿಖೆ:

ಹರ್ಷ ಕೊಲೆ ಪ್ರಕರಣ ಸಂಬಂಧ ಬಂಧಿತ ಪ್ರಮುಖ ಆರೋಪಿ ಖಾಸಿಫ್ ಹೇಳಿಕೆ ಆಧರಿಸಿ ಇಬ್ಬರನ್ನು ಬಂಧಿಸಿಲಾಗಿದೆ. ಆ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಹನ್ನೆರಡು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನೆಡಸಲಾಗುತ್ತಿದೆ. ಅದರಲ್ಲೂ ಹರ್ಷ ಕೊಲೆಗೆ ಹಣಕಾಸು ನೆರವು ನೀಡಿದವರ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ.

Breaking: ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; 12 ಆರೋಪಿಗಳು ವಶಕ್ಕೆBreaking: ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; 12 ಆರೋಪಿಗಳು ವಶಕ್ಕೆ

ಹಿಂದೂ ಮುಖಂಡರ ಹತ್ಯೆಗೆ ಸಂಚು:

ಬೆಂಗಳೂರಿನಲ್ಲಿ ಸಂಸದ ಸೇರಿ ನಾಲ್ವರು ಹಿಂದೂ ಮುಖಂಡರು ಹಿಟ್ ಲಿಸ್ಟ್ ನಲ್ಲಿದ್ದರು ಎಂಬ ಸ್ಫೋಟಕ ಸಂಗತಿ ಹೊರ ಬಿದ್ದಿದೆ. ಬಿಜೆಪಿ ಸಂಸದ ಸೇರಿದಂತೆ ಹಿಂದೂ ಮುಖಂಡ ತೇಜಸ್ ಗೌಡ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಗುಪ್ತಚರ ಇಲಾಖೆಯಿಂದ ಹೊರ ಬಿದ್ದಿದೆ.

ಇದರ ಬೆನ್ನಲ್ಲೇ ಹಿಂದೂ ಮುಖಂಡ ತೇಜಸ್ ಗೌಡ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಅವರನ್ನು ಭೇಟಿ ಭದ್ರತೆ ಕೋರಿದ್ದಾನೆ. ಈ ಹಿನ್ನೆಲೆಯಲ್ಲಿ ಹಿಂದೂ ಮುಖಂಡ ತೇಜಸ್ ಗೌಡ ಅವರಿಗೆ ಭದ್ರತೆ ಒದಗಿಸಲಾಗಿದೆ.

ಇತ್ತೀಚೆಗೆ ಸಿದ್ಧಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿ ವರ್ಧಕಗಳನ್ನು ತೆಗೆಸುವಲ್ಲಿ ತೇಜಸ್ ಗೌಡ ಮುಂಚೂಣಿ ವಹಿಸಿದ್ದ. ಅಲ್ಲದೇ ಅಕ್ರಮ ಗೋಸಾಣೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅನೇಕ ವಾಹನಗಳನ್ನು ಜಪ್ತಿ ಮಾಡಿಸಿದ್ದ. ಈ ಹಿನ್ನೆಲೆಯಲ್ಲಿ ದೂರು ನೀಡಿದ್ದು, ಪೊಲೀಸರಿಂದ ಭದ್ರತೆ ಕಲ್ಪಿಸಲಾಗಿದೆ. ಈ ಬೆಳವಣಿಗೆ ನಡುವೆ ಬೆಂಗಳೂರಿನಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

Recommended Video

ಇದು ಎರಡು ವರ್ಷದ ಹಳೆ ದ್ವೇಷ! | Oneindia Kannada

English summary
Plot to Kill Hindu Leaders; Police Security Arranged Based on Intelligence Report. Police Security given to Bengaluru Hindu Leader Tejas Gowda. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X