ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಸ್ಟಿಂಕ್ಷನ್ ಪಡೆದರೂ ಮುಂದೆ ಓದಲಾಗದ ಸ್ಥಿತಿಯಲ್ಲಿರುವ ವಿದ್ಯಾರ್ಥಿಯ ಕತೆ, ವ್ಯಥೆ

|
Google Oneindia Kannada News

ಬೆಂಗಳೂರು, ಆಗಸ್ಟ್ 15: ಎಸ್‌ಎಸ್‌ಎಲ್ಸಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ್ದರೂ ಆ ಖುಷಿಯನ್ನೂ ಯಾರೊಂದಿಗೂ ಹಂಚಿಕೊಳ್ಳುವಂತಿಲ್ಲ ಯಾಕೆಂದರೆ ಆತನಿಗೆ ತಂದೆ-ತಾಯಿ ಇಬ್ಬರೂ ಇಲ್ಲ.

Recommended Video

ಅಂಬೇಡ್ಕರ್ ಯಾರೆಂದು ಗೊತ್ತಿಲ್ಲ ಈ ಸಚಿವೆಗೆ | Oneindia Kannada

ಇಷ್ಟು ಅಂಕ ಗಳಿಸಿದ್ದರೂ ಮುಂದೆ ಓದಲಾಗದ ಸ್ಥಿತಿಯಲ್ಲಿ ವಿದ್ಯಾರ್ಥಿ ಇದ್ದಾನೆ.ಇದು ಶ್ರೀರಾಂಪುರದ 8ನೇ ಕ್ರಾಸ್ನಲ್ಲಿ ಸಂಬಂಧಿಕರ ಆಶ್ರಯದಲ್ಲಿರುವ ವಿದ್ಯಾರ್ಥಿ ಮಧುಸೂಧನ್ ಎಂಬುವವರ ದುರಂತ ಕಥೆಯಿದು.

ಶ್ರೀರಾಂಪುರದ ಶ್ರೀ ಸಾಂದೀಪನ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಧುಸೂಧನ್ ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 526 ಅಂಕ (ಶೇ. 84.16) ಗಳಿಸಿದ್ದಾನೆ. ಕಾಲೇಜು ಶಿಕ್ಷಣ ಪಡೆಯಲು ಹಣವಿಲ್ಲದೇ ಬಾಲಕ ಚಿಂತೆಗೀಡಾಗಿದ್ದಾನೆ.

ಸಹಾಯ ಮಾಡಬಯಸುವವರು:
Account no:0682108037775
Name : madhusudhan.s
IFSC:CNR0000682
Bank name:Canara bank
Branch name:M K K Road,nagappa block,opp to devaiah park,Srirampuram
ಮೊಬೈಲ್ ಸಂಖ್ಯೆ: 8073719299

 ಮಧುಸೂಧನ್ ಅವರ ದುರಂತ ಬದುಕು

ಮಧುಸೂಧನ್ ಅವರ ದುರಂತ ಬದುಕು

ದುರಂತ ಬದುಕು ಮಧುಸೂಧನ್ ತಂದೆ ಶ್ರೀನಿವಾಸ ಆಟೋ ಚಾಲಕ. ತಾಯಿ ರೂಪಾ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದರ. ಈ ದಂಪತಿಗೆ ಒಬ್ಬ ಪುತ್ರಿ, ಪುತ್ರ ಮಧುಸೂಧನ್.

ಆಟೋ ಚಾಲನೆಯಿಂದ ಬರುತ್ತಿದ್ದ ದುಡ್ಡಿನಿಂದಲೇ ನೆಮ್ಮದಿ ಜೀವನ ಸಾಗಿಸುತ್ತಿದ್ದರು. ಶ್ರೀನಿವಾಸ್‌ಗೆ ಸಕ್ಕರೆಕಾಯಿಲೆ ಬಂದು ಕಾಲು ಕೊಳೆಯಲು ಶುರುವಾಗಿದ್ದೇ, ಎರಡೂ ಕಣ್ಣು ಕಳೆದುಕೊಂಡರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗದೇ 2018ರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೇ ಕೊರಗಿನಲ್ಲಿ ಮೂರು ತಿಂಗಳು ಊಟ ತ್ಯಜಿಸಿದ್ದ ಅವರ ಪತ್ನಿ ರೂಪಾ ಪ್ರಜ್ಞೆ ಹೀನರಾಗಿ ಜೀವ ಬಿಟ್ಟರು. 2018ರಲ್ಲಿಯೇ ತಂದೆ ತಾಯಿನ್ನು ಮಧುಸೂಧನ್ ಕಳೆದುಕೊಂಡುಬಿಟ್ಟ.

 ತಾನೇ ಭಾರವೆಂಬ ಚಿಂತೆ

ತಾನೇ ಭಾರವೆಂಬ ಚಿಂತೆ

ಚಿಕ್ಕಮ್ಮನ ನೆರಳು ಮತ್ತು ಭಾರ: ಅನಾಥ ಬಾಲಕ ಮಧುಸೂಧನ್ ಮತ್ತು ಆತನ ಅಕ್ಕ ಚಂದನಾ ಅಲ್ಲಿಯೇ ನೆಲೆಸಿರುವ ಚಿಕ್ಕಮ್ಮ ಗೀತಾ ಅವರ ಆಶ್ರಯ ಪಡೆದಿದ್ದರು. ಗೀತಾ ದಂಪತಿಗೆ ಇಬ್ಬರು ಮಕ್ಕಳು, ಜತೆಗೆ ಅವರ ಸಹೋದರಿಯ ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ಮಧುಸೂಧನ್ ಮತ್ತು ಅಕ್ಕ ಸೇರಿ ಒಟ್ಟು ಆರು ಮಕ್ಕಳನ್ನು ಗೀತಾ ಸಾಕುತ್ತಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಗೀತಾ ಅವರ ಪತಿ ದುಡಿದ ಹಣದಲ್ಲಿ ಆರು ಮಕ್ಕಳನ್ನು ಸಾಕುವುದೇ ಕಷ್ಟ ಎಂಬಂತಹ ಸ್ಥಿತಿ.

ಮಧುಸೂಧನ್ ಶೇ. 84 ಫಲಿತಾಂಶ ಪಡೆದಿರುವುದು ಖಷಿಯ ವಿಚಾರ. ಆದರೆ, ನನ್ನ ಇಬ್ಬರು ಮಕ್ಕಳು ಸೇರಿ ಒಟ್ಟು ಆರು ಮಕ್ಕಳನ್ನು ಸಾಕುತ್ತಿದ್ದೇನೆ. ನನ್ನ ಗಂಡ ದಿನದ 20 ಗಂಟೆ ಆಟೋ ಓಡಿಸಿದರೂ ಆರು ಮಕ್ಕಳನ್ನುಸಲಹುತ್ತಿದ್ದಾನೆ. ಇಷ್ಟು ಮಕ್ಕಳಿಗೆ ಶಿಕ್ಷಣ ಕೊಡಸಲಾಗುತ್ತಿಲ್ಲ.|ಮಕ್ಕಳಿಗೆ ಭವಿಷ್ಯ ಕಟ್ಟಿಕೊಡುವ ತವಕ. ಆದರೆ ಕೈಯಲ್ಲಾಗದ ಅಸಾಯಕ ಸ್ಥಿತಿ.. ಏನು ಮಾಡಬೇಕು ಎಂಬುದು ನಮಗೆ ಧಿಕ್ಕು ತೋಚುತ್ತಿಲ್ಲ. ಅರೆಕಾಲಿಕ ಕೆಲಸ ಮಾಡಿ ಬರೋ ದುಡ್ಡಲ್ಲಿ ಫೀಸ್ ಕಡ್ತೇನೆ ಚಿಕ್ಕಮ್ಮ ಅಂತ ಮಧು ಹೇಳಿದಾಗ ಕರುಳು ಹಿಂಡಿದಂತಾಗುತ್ತದೆ ಎಂದ ಗೀತಾ ತನ್ನ ಅಸಹಾಯಕ ಸ್ಥಿತಿಯ ಬಗ್ಗೆ ಕಣ್ಣೀರು ಹಾಕುತ್ತಾರೆ.
 ಮಧುಸೂಧನ್ ವಿದ್ಯಾಭ್ಯಾಸಕ್ಕೆ ನೀವೂ ನೆರವಾಗಿ

ಮಧುಸೂಧನ್ ವಿದ್ಯಾಭ್ಯಾಸಕ್ಕೆ ನೀವೂ ನೆರವಾಗಿ

ನೆರವಿನ ಮೊರೆ: 625ಕ್ಕೆ 624 ಅಂಕ ಗಳಿಸಿದರೂ ಸಂತಸವಿಲ್ಲದೇ ಕೊರಗುತ್ತಿರುವ ಸಮುದಾಯದಲ್ಲಿ ಮಧುಸೂಧನ್ದ್ದು ಭಿನ್ನ ಸ್ಥಿತಿ. ಯಾರಾದರೂ ಆತನ ನೆರವಿಗೆ ಬಂದು ಶಿಕ್ಷಣ ಕೊಡಿಸಿದರೆ ತುಂಬಾ ಅನುಕೂಲವಾಗುತ್ತದೆ. ಯಾರಾದರೂ ಹೃದಯವಂತರು ಮಧುಸೂಧನ್ನ ಶಿಕ್ಷಣ ಜವಾಬ್ಧಾರಿ ವಹಿಸಿಕೊಳ್ಳುವಂತಾಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಮಧುಸೂಧನ್ ಅವರ ಶಿಕ್ಷಕಿ ಯಶಸ್ವಿನಿ ಅವರ ಕೋರಿಕೆ. ರಾಜ್ಯದೆಲ್ಲೆಡೆ ಸಂಚರಿಸಿ ಬಡ ಮಕ್ಕಳ ನೆರವಿಗೆ ನಿಲ್ಲುತ್ತಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಮಧುಸೂಧನ್ ಶಿಕ್ಷಣ ಕೊಡಿಸುವಂತಾಗಲಿ ಎಂಬುದೇ ನಮ್ಮ ಕಳಕಳಿ.

 ಮಧುಸೂಧನ್ ಹೇಳುವುದೇನು?

ಮಧುಸೂಧನ್ ಹೇಳುವುದೇನು?

ನಾನು ಪ್ರಥಮ RANK ಗಳಿಸುವ ಆಸೆಯಿತ್ತು. ಅದು ಬರಲಿಲ್ಲ ಎಂಬ ಬೇಸರವಿಲ್ಲ. ಆದರೆ ಬಂದಿರುವ ರ್ಯಾಂಕ್ ಬಗ್ಗೆ ಹೇಳಿಕೊಳ್ಳೋಕೆ ಅಮ್ಮನೂ ಇಲ್ಲ. ಅಪ್ಪನೂ ಇಲ್ಲ. ಕಾಲೇಜಿಗೆ ಫೀಸ್ ಕಟ್ಟಲು ಕಾಸಿಲ್ಲ. ಚಿಕ್ಕಮ್ಮನದ್ದು ಕಷ್ಟದ ಜೀವನ. ಪಾರ್ಟ್ ಟೈಮ್ ಕೆಲಸ ಮಾಡಿಕೊಂಡು ಕಾಲೇಜಿಗೆ ಹೋಗಬೇಕೆಂದಿದ್ದೇನೆ.

English summary
MadhusudhanStudent Got 526 Out of 600 in SSLC Examination, his parents are not alive so he is helpless to get further education, please help him to build better future.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X