ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಖಾಸಗಿ ಆಸ್ಪತ್ರೆಗಳನ್ನು ಯಾಕೆ ದೂರುತ್ತೀರಿ? ಸಿಎಂ ಯಡಿಯೂರಪ್ಪ ಪ್ರಶ್ನೆ!

|
Google Oneindia Kannada News

ಬೆಂಗಳೂರು, ಜೂ. 30: ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ಕೊಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿದ್ದು, ಇವತ್ತು 750 ಬೆಡ್ ಗಳನ್ನು ಕೊಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ಕೊಟ್ಟಿದ್ದಾರೆ.

ಖಾಸಗಿ ಆಸ್ಪತ್ರೆಗಳು ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ಕೊಡುತ್ತಿಲ್ಲ. ಅದರಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಆರೋಪಕ್ಕೆ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ಸಫಲ: ಸರ್ಕಾರದ ಬೇಡಿಕೆ ಒಪ್ಪಿಗೆಖಾಸಗಿ ಆಸ್ಪತ್ರೆ ಮುಖ್ಯಸ್ಥರ ಸಭೆ ಸಫಲ: ಸರ್ಕಾರದ ಬೇಡಿಕೆ ಒಪ್ಪಿಗೆ

ನಿನ್ನೆ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಜೊತೆಗೆ ಮಾತನಾಡಿದ್ದೇವೆ. ಸದ್ಯ 2000 ಬೆಡ್ ಕೊಡಲು ಅವರು ಒಪ್ಪಿಕೊಂಡಿದ್ದಾರೆ. ಇವತ್ತು 750 ಬೆಡ್ ಕೊಡುತ್ತಿದ್ದಾರೆ.

Please dont blame ptv hospitals: bs yediyurappa

ಯಾರೋ ಒಬ್ಬರು ಆಸ್ಪತ್ರೆಯಲ್ಲಿ ತೀರಿಕೊಂಡಿದ್ದಕ್ಕೂ, ಬೆಡ್ ಸಿಗದಿರೋದಕ್ಕೆ ಸಂಬಂಧ ಕಲ್ಪಿಸುವುದು ಬೇಡ.

ಸೋಂಕಿತರ ರಕ್ಷಣೆಗೆ ನಾವು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳನ್ನ ಏಕೆ ದೂರುತ್ತೀರಾ? ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶ್ನಿಸಿದ್ದಾರೆ.

English summary
Please don't blame pvt hospitals. Private hospitals have agreed to treat Covid-19 patients says CM BS Yediyyrappa in Vidhanasoudha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X