ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ಜೀವನ ಕಳೆದುಕೊಳ್ಳಬೇಡಿ: ಅತೃಪ್ತರಿಗೆ ಡಿಕೆಶಿ ಮನವಿ

|
Google Oneindia Kannada News

Recommended Video

ಅತೃಪ್ತರಿಗೆ ಕೊನೆಗೂ ವಾರ್ನಿಂಗ್ ಕೊಟ್ಟ ಡಿಕೆಶಿ..? | Oneindia Kannada

ಬೆಂಗಳೂರು, ಜುಲೈ 22: 'ಬಿಜೆಪಿಯು ನಿಮ್ಮ ಹಾದಿ ತಪ್ಪಿಸುತ್ತಿದೆ, ಸದನಕ್ಕೆ ಬಂದು ನಿಮ್ಮ ರಾಜಕೀಯ ಜೀವನವನ್ನು ಉಳಿಸಿಕೊಳ್ಳಿ' ಎಂದು ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರಿಗೆ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಗುರುವಾರ ಎತ್ತಿದ್ದ ಕಾರ್ಯಲೋಪಕ್ಕೆ ಸ್ಪೀಕರ್ ಅವರು ಇಂದು ನೀಡಿರುವ ರೂಲಿಂಗ್ ಅನ್ನು ಉಲ್ಲೇಖಿಸಿ, ಪಕ್ಷಾಂತರ ನಿಷೇಧ ಕಾಯ್ದೆಯನ್ನೂ ಉಲ್ಲೇಖಿಸಿ ಅತೃಪ್ತರು ಅನರ್ಹರಾಗುವ ಸಾಧ್ಯತೆ ಇದೆ ಎಂದರು.

ಮಂಗಳವಾರಕ್ಕೆ ಕಲಾಪ ಮುಂದೂಡಿಕೆ: ಮುಗಿಯದ ಚರ್ಚೆ, ಪ್ರತಿಭಟಿಸದ ಪ್ರತಿಪಕ್ಷಮಂಗಳವಾರಕ್ಕೆ ಕಲಾಪ ಮುಂದೂಡಿಕೆ: ಮುಗಿಯದ ಚರ್ಚೆ, ಪ್ರತಿಭಟಿಸದ ಪ್ರತಿಪಕ್ಷ

ಸ್ಪೀಕರ್ ಅವರು ಇಂದು ನೀಡಿರುವ ರೂಲಿಂಗ್‌ನಂತೆ ನಾಳೆ ಬೆಳಿಗ್ಗೆ 11 ಗಂಟೆಗೆ ಅತೃಪ್ತ ಶಾಸಕರು ವಿಚಾರಣೆಗೆ ಬರಬೇಕಿದೆ. ಅವರು ನಾಳೆ ಬಾರದೇ ಇದ್ದಲ್ಲಿ ಸಂಜೆ ವೇಳೆಗೆ ಸ್ಪೀಕರ್ ಅವರು ಕಾನೂನು ಪ್ರಕಾರ ನಿರ್ಣಯ ತೆಗೆದುಕೊಂಡರೆ ಅತೃಪ್ತರು ರಾಜಕೀಯ ಜೀವನ ಕಳೆದುಕೊಳ್ಳುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

 Please come back: DK Shivakumar request dissident MLAs

'ನೀವೆಲ್ಲಾ ಮಂತ್ರಿ ಆಗುವ ಆಸೆ ಹೊಂದಿದ್ದೀರಾ? ಆದರೆ ಬಿಜೆಪಿ ನಿಮ್ಮನ್ನು ಅವರಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದೆ, ಬಿಜೆಪಿಯ ಸ್ನೇಹಿತರು ನಿಮಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ, ಅನರ್ಹರಾದರೆ ರಾಜಕೀಯ ಜೀವನ ಅಂತ್ಯವಾಗುತ್ತದೆ' ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕಲಾಪದಲ್ಲಿ ಗದ್ದಲ, ಚರ್ಚೆ, ಸಿಟ್ಟು, ನಗು ಹಲವು ಭಾವ ಚಿತ್ರಗಳಲ್ಲಿ

ಡಿ.ಕೆ.ಶಿವಕುಮಾರ್ ಅವರು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮಾಧ್ಯಮಗಳ ಮುಂದೆ ಓದಿ ಹೇಳಿದರು. ಅತೃಪ್ತರಿಗೆ ಸ್ಪೀಕರ್ ಅವರು ನೊಟೀಸ್ ಜಾರಿ ಮಾಡಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಹಾಜರಾಗಲು ಕೇಳಿದ್ದಾರೆ.

English summary
Minister DK Shivakumar requested dissident MLAs to come back and take back the resignation. He said, as per the anti-defection law they will be unqualified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X