ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲು ನಿಲ್ದಾಣದ ಪ್ಲಾಟ್‌ ಫಾರಂ ಟಿಕೆಟ್‌ ದರ ಕಡಿತವಿಲ್ಲ

|
Google Oneindia Kannada News

ಬೆಂಗಳೂರು, ಡಿಸೆಂಬರ್ 01 : ಕೋವಿಡ್ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಜನರನ್ನು ನಿಯಂತ್ರಣ ಮಾಡಲು ಪ್ಲಾಟ್ ಫಾರಂ ದರದಲ್ಲಿ ಭಾರಿ ಏರಿಕೆ ಮಾಡಲಾಗಿತ್ತು. ಈ ಆದೇಶ ತಾತ್ಕಾಲಿಕವಾಗಿದ್ದು, ನವೆಂಬರ್ 30ರ ತನಕ ಮಾತ್ರ ಜಾರಿಯಲ್ಲಿತ್ತು.

ಭಾರತೀಯ ರೈಲ್ವೆ ಪ್ಲಾಟ್‌ ಫಾರಂ ಟಿಕೆಟ್‌ ದರದಲ್ಲಿ ಏರಿಕೆ ಮಾಡಿರುವ ಆದೇಶವನ್ನು ಡಿಸೆಂಬರ್ 31ರ ತನಕ ವಿಸ್ತರಣೆ ಮಾಡಿದೆ. ಆದ್ದರಿಂದ, ಪ್ಲಾಟ್ ಫಾರಂ ಟಿಕೆಟ್ ದರ ಹಿಂದಿನ ಆದೇಶದಂತೆಯೇ 50 ರೂ. ಆಗಿರಲಿದೆ. 10 ರೂ. ಇದ್ದ ದರವನ್ನು 50 ರೂ.ಗೆ ಏರಿಕೆ ಮಾಡಲಾಗಿತ್ತು.

ಬಾಂಗ್ಲಾಕ್ಕೆ ಮಿನಿ ಟ್ರಕ್ ರವಾನೆ; ರೈಲ್ವೆ ಮತ್ತೊಂದು ಸಾಧನೆ ಬಾಂಗ್ಲಾಕ್ಕೆ ಮಿನಿ ಟ್ರಕ್ ರವಾನೆ; ರೈಲ್ವೆ ಮತ್ತೊಂದು ಸಾಧನೆ

ತಾತ್ಕಾಲಿಕವಾಗಿ ರೈಲ್ವೆ ಪ್ಲಾಟ್‌ ಫಾರಂ ಟಿಕೆಟ್‌ ದರವನ್ನು 50 ರೂ. ನಿಗದಿ ಮಾಡಲಾಗಿದೆ ಎಂದು ರೈಲ್ವೆ ಹೇಳಿದೆ. ಡಿಸೆಂಬರ್ 31ರ ತನಕ ಈ ಆದೇಶ ಜಾರಿಯಲ್ಲಿರಲಿದೆ. ಕೋವಿಡ್ ಸಂದರ್ಭದಲ್ಲಿ ಹೆಚ್ಚು ಮಾಡಿದ್ದು ಸರಿ. ಈಗಲೂ ಅದೇ ದರ ಇರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು; ಜನರ ಆಕ್ರೋಶ ಮುಂಬೈ-ನಾಗರಕೋಯಿಲ್ ರೈಲು ಮಾರ್ಗ ಬದಲು; ಜನರ ಆಕ್ರೋಶ

Platform Ticket

ಯಾವ-ಯಾವ ನಿಲ್ದಾಣ; ಕರ್ನಾಟಕದಲ್ಲಿ ನೈಋತ್ಯ ರೈಲ್ವೆ ವಿಭಾಗಕ್ಕೆ ಒಳಪಡುವ ಕೆಲವು ನಿಲ್ದಾಣಗಳಲ್ಲಿ ಪ್ಲಾಟ್ ಫಾರಂ ಟಿಕೆಟ್ ದರವನ್ನು 50 ರೂ. ಮಾಡಿ ಆದೇಶ ಹೊರಡಿಸಲಾಗಿದೆ.

ಕಲಬುರಗಿ-ಲಾತೂರ; ನೂತನ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ ಕಲಬುರಗಿ-ಲಾತೂರ; ನೂತನ ರೈಲು ಮಾರ್ಗ ಸಮೀಕ್ಷೆಗೆ ಒಪ್ಪಿಗೆ

ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಯಶವಂತಪುರ, ಕೆ. ಆರ್. ಪುರ, ಬಂಗಾರಪೇಟೆ, ತುಮಕೂರು, ಹೊಸೂರು, ಧರ್ಮಪುರಿ, ಕೆಂಗೇರಿ, ಮಂಡ್ಯ, ಹಿಂದೂಪುರ, ಪೆನುಕೊಂಡ, ಯಲಹಂಕ, ಬಾಣಸವಾಡಿ, ವೈಟ್ ಫೀಲ್ಡ್ ನಿಲ್ದಾಣದಲ್ಲಿ ಈ ದರ ಜಾರಿಯಲ್ಲಿರಲಿದೆ.

ಕೋವಿಡ್ ಸಂದರ್ಭದಲ್ಲಿ ಹೆಚ್ಚು ಜನ ಸಂದಣಿ ರೈಲು ನಿಲ್ದಾಣದಲ್ಲಿ ಸೇರದಂತೆ ತಡೆಯಲು ಪ್ಲಾಟ್ ಫಾರಂ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ ಹಲವು ವಿಶೇಷ ರೈಲುಗಳು ಸಂಚಾರ ನಡೆಸುತ್ತಿವೆ. ಆದರೆ, ದರ ಹೆಚ್ಚಳ ಮಾತ್ರ ಮುಂದುವರೆದಿದೆ.

English summary
Platform ticket fares Rs 50 order extended till December 31, 2020. The fare has been temporarily increased to avoid crowd in railway station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X