ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದಲ್ಲಿ 3 ಕಿ. ಮೀ. ಓಡಿ; ಪ್ಲಾಸ್ಟಿಕ್ ಸಂಗ್ರಹಿಸಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಕ್ಟೋಬರ್ 2ರಂದು ನಗರದಲ್ಲಿ ಪ್ಲಾಸ್ಟಿಕ್ ಸಂಗ್ರಹಣಾ ಅಭಿಯಾನವನ್ನು ಆಯೋಜನೆ ಮಾಡಿದೆ. ಜನರು ಇದರಲ್ಲಿ ಕೈ ಜೋಡಿಸುವಂತೆ ಕರೆ ನೀಡಿದೆ.

ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಲು ಬಿಬಿಎಂಪಿ ಈ ಅಭಿಯಾನ ಕೈಗೊಂಡಿದೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಅಭಿಯಾನಕ್ಕೆ ಪಾಲಿಕೆ ಆಯುಕ್ತ ಅನಿಲ್ ಕುಮಾರ್ ಎಂ. ಜಿ. ರಸ್ತೆಯಲ್ಲಿ ಬೆಳಗ್ಗೆ 7.30ಕ್ಕೆ ಚಾಲನೆ ನೀಡಲಿದ್ದಾರೆ.

ಎಲ್ಲೆಂದರಲ್ಲಿ ಕಸ ಬಿಸಾಡಿ ಬೆಂಗಳೂರಿಗರು ಕಟ್ಟಿದ್ದು 3 ಲಕ್ಷ ದಂಡ!ಎಲ್ಲೆಂದರಲ್ಲಿ ಕಸ ಬಿಸಾಡಿ ಬೆಂಗಳೂರಿಗರು ಕಟ್ಟಿದ್ದು 3 ಲಕ್ಷ ದಂಡ!

ನಗರದ 50 ಕಡೆ ಓಡುವ ಜೊತೆಗೆ ಪ್ಲಾಸ್ಟಿಕ್ ಸಂಗ್ರಹ ಮಾಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿಜಾಗದಲ್ಲಿ ಕನಿಷ್ಠ 200 ರಿಂದ 250 ಜನರು ಇರಲಿದ್ದು, 3 ಕಿ.ಮೀ. ಓಡುವ ಮೂಲಕ ಪ್ಲಾಸ್ಟಿಕ್ ಸಂಗ್ರಹ ಮಾಡಲಿದ್ದಾರೆ.

ಬಿಬಿಎಂಪಿ ವಿಭಜನೆ: ನಾಲ್ವರು ವಿಶೇಷ ಆಯುಕ್ತರ ನೇಮಕಬಿಬಿಎಂಪಿ ವಿಭಜನೆ: ನಾಲ್ವರು ವಿಶೇಷ ಆಯುಕ್ತರ ನೇಮಕ

Plastic Collection Campaign In Bengaluru On October 2

ಜನರು ಮೂರು ಕಿಲೋಮೀಟರ್ ಓಡುವಾಗ ಅಕ್ಕಪಕ್ಕದಲ್ಲಿ ಕಾಣುವ ಪ್ಲಾಸ್ಟಿಕ್ ಸಂಗ್ರಹಿಸಿ ಕೈ ಚೀಲದಲ್ಲಿ ಹಾಕಲಿದ್ದಾರೆ. ಓಡುವ ಎಲ್ಲರಿಗೂ ಪಾಲಿಕೆ ಕೈ ಚೀಲ ವಿತರಣೆ ಮಾಡಲಿದೆ. ಅಂದು ನಗರದಲ್ಲಿ ಲಕ್ಷಾಂತರ ಟನ್ ಪ್ಲಾಸ್ಟಿಕ್ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ.

ಬೆಂಗಳೂರಲ್ಲಿ ಪ್ಲಾಸ್ಟಿಕ್ ನಿಷೇಧ; ಬಳಸಿದರೆ ದಂಡಬೆಂಗಳೂರಲ್ಲಿ ಪ್ಲಾಸ್ಟಿಕ್ ನಿಷೇಧ; ಬಳಸಿದರೆ ದಂಡ

ಅಕ್ಟೋಬರ್ 2ರ ತನಕ ಮನೆಗಳಿಂದ ಪ್ಲಾಸ್ಟಿಕ್ ಸಂಗ್ರಹ ಮಾಡಲು ಪೌರ ಕಾರ್ಮಿಕರಿಗೆ ಬಿಬಿಎಂಪಿ ಸೂಚನೆ ನೀಡಿದೆ. ಸಂಗ್ರಹವಾದ ಪ್ಲಾಸ್ಟಿಕ್‌ಗಳನ್ನು ತ್ಯಾಜ್ಯ ಮರುಬಳಕೆ ಇಲ್ಲವೇ ಸಿಮೆಂಟ್ ತಯಾರಿಕೆಗೆ ನೀಡಲು ಚಿಂತನೆ ನಡೆಸಲಾಗುತ್ತಿದೆ.

English summary
The Bruhat Bengaluru Mahanagara Palike (BBMP) organized plastic collection campaign in Bengaluru city on October 2, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X