ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲಿ ಕ್ರಷರ್ ಯಂತ್ರ

|
Google Oneindia Kannada News

ಬೆಂಗಳೂರು, ನವೆಂಬರ್ 22: ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಧ್ವನಿ ಕೇಳುತ್ತಿರುವ ಬೆನ್ನಲ್ಲೇ ಮೆಜೆಸ್ಟಿಕ್‌ನಲ್ಲಿ ಪ್ಲಾಸ್ಟಿಕ್ ಬಾಟಲಿ ಕ್ರಷಿಂಗ್ ಮಷಿನ್ ಅಳವಡಿಕೆ ಮಾಡಲು ಕೆಎಸ್‌ಆರ್‌ಟಿಸಿ ತೀರ್ಮಾನಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣ ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದೆ. ನಿತ್ಯ ಈ ಭಾಗದಲ್ಲಿ ಸಂಚರಿಸುವ ಲಕ್ಷಾಂತರ ಪ್ರಯಾಣಿಕರು ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿ ಭಾರಿ ಪ್ರಮಾಣದಲ್ಲಿ ಕಸದ ಬುಟ್ಟಿ ಸೇರುತ್ತಿದೆ.

ಏಕ-ಬಳಕೆ ಪ್ಲಾಸ್ಟಿಕ್ ನಿಷೇಧ, ರೈಲಿನಲ್ಲಿ ನೀರಿನ ಬಾಟಲಿ ಹಿಂದಿರುಗಿಸಿಏಕ-ಬಳಕೆ ಪ್ಲಾಸ್ಟಿಕ್ ನಿಷೇಧ, ರೈಲಿನಲ್ಲಿ ನೀರಿನ ಬಾಟಲಿ ಹಿಂದಿರುಗಿಸಿ

ಪರಿಸರಕ್ಕೆ ಮಾರಕವಾಗುವ ಈ ಪ್ಲಾಸ್ಟಿಕ್ ಬಾಟಲಿಗಳನ್ನು ಪುನರ್ ಬಳಕೆಗೆ ಅನುಕೂಲವಾಗುವಂತೆ ಮಾಡಲು ಯಂತ್ರ ಅಳವಡಿಸಲಾಗುತ್ತಿದೆ.

ಪ್ರಯಾಣಿಕರಿಗೆ ಅರಿವು

ಪ್ರಯಾಣಿಕರಿಗೆ ಅರಿವು

ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ, ಬಸ್ ನಿಲ್ದಾಣದಲ್ಲಿ ಈ ಯಂತ್ರ ಅಳವಡಿಕೆ ಬಳಿಕ ಯಂತ್ರ ಬಳಕೆ ಕುರಿತು ಪ್ರಯಾಣಿಕರಿಗೆ ಅರಿವು ಮೂಡಿಸಲಾಗುತ್ತದೆ.ನೀರು ಅಥವಾ ತಂಪು ಪಾನೀಯ ಕುಡಿದ ಬಳಿಕ ಖಾಲಿ ಬಾಟಲಿಗಳನ್ನು ಕಸದಬುಟ್ಟಿಗೆ ಹಾಕುವ ಬದಲು ಈ ಯಂತ್ರದೊಳಗೆ ಹಾಕುವಂತೆ ಮನವಿ ಮಾಡಲಾಗುತ್ತಿದೆ.

 ದಿನಕ್ಕೆ 2400 ಬಾಟಲಿ ಪುಡಿ

ದಿನಕ್ಕೆ 2400 ಬಾಟಲಿ ಪುಡಿ

ಸುಮಾರು ಮೂರು ಲಕ್ಷ ವೆಚ್ಚದ ಈ ಯಂತ್ರವು ದಿನಕ್ಕೆ 2400 ಬಾಟಲಿ ಪುಡಿ ಮಾಡಬಹುದು. ಗರಿಷ್ಠ ಎರಡು ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಬಾಟಲಿಗಳನ್ನು ಕೆಲವೇ ಸೆಕೆಂಡುಗಳಲ್ಲಿ ಪುಡಿಮಾಡಲಿದೆ.

ಸಿಎಸ್‌ಆರ್ ಫಂಡ್ ಬಳಕೆ

ಸಿಎಸ್‌ಆರ್ ಫಂಡ್ ಬಳಕೆ

ಈ ಯೋಜನೆಗೆ ಸಿಎಸ್‌ಆರ್ ಫಂಡ್ ಬಳಕೆ ಮಾಡಲಾಗುತ್ತದೆ. ನಿಗಮು ಯಾವುದೇ ಹಣ ವಿನಿಯೋಗಿಸುತ್ತಿಲ್ಲ. ಗ್ರೀನ್ ರೀ ಸೈಕ್ಲೋ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ಬಸ್ ನಿಲ್ದಾಣದಲ್ಲಿ ಯಂತ್ರ ಅಳವಡಿಸಲಾಗುತ್ತಿದೆ.

ಜಾಗ ಮತ್ತು ವಿದ್ಯುತ್ ನೀಡಲಿದೆ

ಜಾಗ ಮತ್ತು ವಿದ್ಯುತ್ ನೀಡಲಿದೆ

ಕೆಎಸ್‌ಆರ್‌ಟಿಸಿ ಈ ಕಂಪನಿಗೆ ನಿಲ್ದಾಣದಲ್ಲಿ ಕೇವಲ ಜಾಗ ಮತ್ತು ವಿದ್ಯುತ್ ಮಾತ್ರ ಒದಗಿಸಲಿದೆ. ಪ್ರಾಯೋಗಿಕವಾಗಿ ನಿಲ್ದಾಣದಲ್ಲಿ ಒಂದು ಯಂತ್ರ ಮಾತ್ರ ಅಳವಡಿಸಲು ನಿರ್ಧರಿಸಲಾಗಿದೆ.

English summary
ksrtc will setup Plastic Bottle Crusher Machine In Majestic Busstop soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X