ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ವಿರುದ್ಧದ ಪ್ಲಾಸ್ಮಾ ಚಿಕಿತ್ಸೆಯನ್ನು ಕೈಬಿಟ್ಟ ಕರ್ನಾಟಕ

|
Google Oneindia Kannada News

ಬೆಂಗಳೂರು, ಮೇ 6: ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಯಾವುದೇ ರೋಗಿಗಳ ರಕ್ತದ ಗುಂಪು ಹೊಂದಾಣಿಕೆಯಾಗದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಐಸಿಯುನಲ್ಲಿ‌ರುವ ಯಾವ ರೋಗಿಗಳಿಗೂ ರಕ್ತದ ಗುಂಪು ಹೊಂದಿಕೆಯಾಗುತ್ತಿಲ್ಲ. ಈಗಾಗಲೇ ಇಬ್ಬರು ಕೊರೊನಾ ಗುಣಮುಖರಿಂದ ಪ್ಲಾಸ್ಮಾ ಪಡೆಯಲಾಗಿದೆ. ಆದರೆ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಗ್ರೂಪ್‌ಗೆ ದು ಮ್ಯಾಚ್ ಆಗುತ್ತಿಲ್ಲ.

ಪ್ಲಾಸ್ಮಾ ಥೆರಪಿ ನಿಲ್ಲಿಸಲ್ಲ: ಕೇಂದ್ರದ ಎಚ್ಚರಿಕೆಗೆ ಕಿವಿಕೊಡದ ಕೇಜ್ರಿವಾಲ್ಪ್ಲಾಸ್ಮಾ ಥೆರಪಿ ನಿಲ್ಲಿಸಲ್ಲ: ಕೇಂದ್ರದ ಎಚ್ಚರಿಕೆಗೆ ಕಿವಿಕೊಡದ ಕೇಜ್ರಿವಾಲ್

ಈ ಬಗ್ಗೆ ಬಿಎಂಸಿಆರ್‌ಐ ಪ್ರಾಂಶುಪಾಲರು ಮತ್ತು ಔಷಧಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸಿ.ಆರ್‌. ಜಯಂತಿ ಮಾಹಿತಿ ನೀಡಿದ್ದಾರೆ. ನಿನ್ನೆ ಕೂಡಾ ಒಬ್ಬ ರೋಗಿ ಬಂದಿದ್ದರು ಆದರೆ ಅವರ ಗ್ರೂಪ್‌ ಕೂಡಾ ಪ್ಲಾಸ್ಮಾಗೆ ಹೊಂದಲಿಲ್ಲ ಎಂದಿದ್ದಾರೆ.

Plasma Therapy Temporarily Stopped In Karnataka

ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಅನುಮತಿ ನೀಡಿ 15 ದಿನ ಕಳೆದಿದೆ. ಆದರೆ, ಚಿಕಿತ್ಸೆಯನ್ನು ಪ್ರಾರಂಭ ಮಾಡಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ರೋಗಿ ಸಿಕ್ಕಿ, ರಕ್ತದ ಗುಂಪು ಹೊಂದಾಣಿಕೆ ಆಗುವವರೆಗೂ ರಾಜ್ಯದಲ್ಲಿ ಪ್ಲಾಸ್ಮಾ ಚಿಕಿತ್ಸೆಗೆ ಬ್ರೇಕ್ ಹಾಕಲಾಗಿದೆ.

ಪ್ಲಾಸ್ಮಾ ಥೆರಪಿ ಎಂದರೇನು?

ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ಪ್ರತ್ಯೇಕಿಸಿ ಅದನ್ನು ಕೊರೊನಾದಿಂದ ಬಳಲುತ್ತಿರುವ ರೋಗಿಯ ಅಥವಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಯ ದೇಹಕ್ಕೆ ಸೇರಿಸುವುದು. ಈ ಹಿಂದೆ 1918ರಲ್ಲಿ ಕಾಣಿಸಿಕೊಂಡಿದ್ದ ಫ್ಲೂ, ಎಬೋಲಾ, ಸಾರ್ಸ್ ಮೊದಲಾದ ಸಾಂಕ್ರಾಮಿಕ ಪಡಿಗಿನ ವೇಳೆಯಲ್ಲೂ ಈ ಪ್ಲಾಸ್ಮಾ ಥೆರಪಿ ಬಳಸಲಾಗಿತ್ತು. ಒಂದು ವೇಳೆ ಪ್ಲಾಸ್ಮಾ ಥೆರಪಿಗೆ ರೋಗಿ ಸೂಕ್ತವಾಗಿ ಸ್ಪಂದಿಸಿದರೆ ಆತ ಕೊರೊನಾದಿಂದ ಕೇವಲ 3-7 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

English summary
Plasma Therapy temporarily stopped in Karnataka as blood group not matching.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X