ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಇನ್ನೂ ಆರಂಭವಾಗಿಲ್ಲ ಪ್ಲಾಸ್ಮಾ ಥೆರಪಿ, ಕಾರಣ ಏನು?

|
Google Oneindia Kannada News

ಬೆಂಗಳೂರು, ಏಪ್ರಿಲ್ 28: ಕರ್ನಾಟಕದಲ್ಲಿ ಕಳೆದ ಶನಿವಾರದಿಂದ ಪ್ಲಾಸ್ಮಾ ಥೆರಪಿ ಶುರುವಾಗಬೇಕಿತ್ತು. ಮೂರು ದಿನಗಳ ಹಿಂದೆ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್ ಆಗಿದ್ದರೂ, ಇನ್ನೂ ಕೂಡ ಪ್ಲಾಸ್ಮಾ ಥೆರಪಿ ಆರಂಭವಾಗಿಲ್ಲ.

ಸದ್ಯ, ಡೋನರ್ ರೆಡಿ ಇದ್ದಾರೆ. ಆದರೆ, ರೋಗಿಗಳ ಸಿಗುತ್ತಿಲ್ಲವಂತೆ. ಕರೊನಾದಿಂದ ಗುಣಮುಖರಾದ ಇಬ್ಬರು ಪ್ಲಾಸ್ಮಾ ನೀಡಲು ಒಪ್ಪಿಕೊಂಡಿದ್ದಾರೆ. ಆದರೆ, ರೋಗಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಒಬ್ಬ ರೋಗಿಗೆ ಪ್ಲಾಸ್ಮಾ ಥೆರಪಿ ಮಾಡಲು ಚಿಂತನೆ ಮಾಡಲಾಗಿದೆ.

ಕೋವಿಡ್ 19: ಕರ್ನಾಟಕದಲ್ಲಿ ನಾಳೆಯಿಂದ ಪ್ಲಾಸ್ಮಾ ಥೆರಪಿ ಪ್ರಾರಂಭ ಕೋವಿಡ್ 19: ಕರ್ನಾಟಕದಲ್ಲಿ ನಾಳೆಯಿಂದ ಪ್ಲಾಸ್ಮಾ ಥೆರಪಿ ಪ್ರಾರಂಭ

ಪ್ಲಾಸ್ಮಾ ಥೆರಪಿಗೆ ಯಾಕೆ ಇಷ್ಟು ತಡ? ಎಂದರೆ, ''ನಾವು ಪ್ಲಾಸ್ಮಾ ಸಂಗ್ರಹ ಮಾಡಿ ಇಟ್ಕೊಂಡಿದ್ದೇವೆ. ರೋಗಿ ಸಿಗಬೇಕು, ರಕ್ತದ ಗುಂಪು ಹೊಂದಬೇಕು. ಇವೆರಡು ಆದರೆ ಮಾತ್ರ ಪ್ಮಾಸ್ಮಾ ಚಿಕಿತ್ಸೆ ಆರಂಭಿಸಲಾಗುತ್ತದೆ.'' ಎಂದು BMC ಡೀನ್ ಡಾ.ಜಯಂತಿ ಮಾಹಿತಿ ನೀಡಿದ್ದಾರೆ.

Plasma Therapy Is Not Yet Started In Karnataka

ಆರೋಗ್ಯ ಸಚಿವ ಶ್ರೀರಾಮುಲು ಶನಿವಾರದಿಂದ ರಾಜ್ಯದಲ್ಲಿಯೂ ಪ್ಲಾಸ್ಮಾ ಥೆರಪಿ ಪ್ರಾರಂಭವಾಗುತ್ತದೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು. ಆದರೆ, ರೋಗಿಗಳು ಸಿಗದ ಕಾರಣ ಸದ್ಯದವರೆಗೆ ಪ್ಲಾಸ್ಮಾ ಥೆರಪಿ ಶುರುವಾಗಿಲ್ಲ.

ಪ್ಲಾಸ್ಮಾ ಥೆರಪಿ ಎಂದರೇನು?

ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ಪ್ರತ್ಯೇಕಿಸಿ ಅದನ್ನು ಕೊರೊನಾದಿಂದ ಬಳಲುತ್ತಿರುವ ರೋಗಿಯ ಅಥವಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಯ ದೇಹಕ್ಕೆ ಸೇರಿಸುವುದು. ಈ ಹಿಂದೆ 1918ರಲ್ಲಿ ಕಾಣಿಸಿಕೊಂಡಿದ್ದ ಫ್ಲೂ, ಎಬೋಲಾ, ಸಾರ್ಸ್ ಮೊದಲಾದ ಸಾಂಕ್ರಾಮಿಕ ಪಡಿಗಿನ ವೇಳೆಯಲ್ಲೂ ಈ ಪ್ಲಾಸ್ಮಾ ಥೆರಪಿ ಬಳಸಲಾಗಿತ್ತು. ಒಂದು ವೇಳೆ ಪ್ಲಾಸ್ಮಾ ಥೆರಪಿಗೆ ರೋಗಿ ಸೂಕ್ತವಾಗಿ ಸ್ಪಂದಿಸಿದರೆ ಆತ ಕೊರೊನಾದಿಂದ ಕೇವಲ 3-7 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

English summary
Plasma therapy for covid 19 is not yet started in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X