ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ ರೋಗಿಗಾಗಿ ಬೆಂಗಳೂರಿನಿಂದ ಶ್ರೀನಗರಕ್ಕೆ ಪ್ಲಾಸ್ಮಾ ರವಾನೆ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 03: ಜಮ್ಮು ಮತ್ತು ಕಾಶ್ಮೀರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಬೆಂಗಳೂರಿನಿಂದ ಪ್ಲಾಸ್ಮಾ ಕಳಿಸಲಾಗಿದೆ. ಇಂಡಿಗೋ ಕಾರ್ಗೋ ವಿಮಾನದ ಮೂಲಕ ಪ್ಲಾಸ್ಮಾ ರವಾನೆ ಮಾಡಲಾಗಿದೆ.

Recommended Video

Namma Metro ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ನಿಲ್ಲಲ್ಲ | Oneindia Kannada

ಶ್ರೀನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 60 ವರ್ಷದ ಮಹಿಳೆಯ ಸ್ಥಿತಿ ಗಂಭೀರವಾಗಿತ್ತು. ಕೋವಿಡ್ ಸೋಂಕಿತ ಮಹಿಳೆಯ ಸಂಬಂಧಿಕರು ಬೆಂಗಳೂರಿನಿಂದ ಪ್ಲಾಸ್ಮಾವನ್ನು ಕಳಿಸಿದ್ದಾರೆ. ಮಹಿಳೆಗೆ ಪ್ಲಾಸ್ಮಾ ಥರಪಿ ಚಿಕಿತ್ಸೆ ಆರಂಭಿಸಲಾಗಿದೆ.

ದಕ್ಷಿಣ ಕನ್ನಡದಲ್ಲಿ ಶೀಘ್ರದಲ್ಲೇ ಪ್ಲಾಸ್ಮಾ ಥೆರಪಿ ಆರಂಭ ದಕ್ಷಿಣ ಕನ್ನಡದಲ್ಲಿ ಶೀಘ್ರದಲ್ಲೇ ಪ್ಲಾಸ್ಮಾ ಥೆರಪಿ ಆರಂಭ

ಮಹಿಳೆ ಸಂಬಂಧಿಕರು ಎಚ್‌ಸಿಜಿ ಆಸ್ಪತ್ರೆಯಲ್ಲಿರುವ ಪ್ಲಾಸ್ಮಾ ಬ್ಯಾಂಕ್ ಸಂಪರ್ಕಿಸಿದ್ದರು. ಬ್ಯಾಂಕ್‌ನ ಮುಖ್ಯಸ್ಥ ಡಾ. ವಿಶಾಲ್ ರಾವ್ ನೇತೃತ್ವದ ತಂಡ ಎರಡು ಯೂನಿಡ್ ಪ್ಲಾಸ್ಮಾವನ್ನು ರೋಗಿಗಾಗಿ ಬೆಂಗಳೂರಿನಿಂದ ಕಳಿಸಿದೆ.

ಕೋವಿಡ್‌ ಗೆದ್ದವರು ಪ್ಲಾಸ್ಮಾ ದಾನ ಮಾಡುವುದು ಹೇಗೆ? ಕೋವಿಡ್‌ ಗೆದ್ದವರು ಪ್ಲಾಸ್ಮಾ ದಾನ ಮಾಡುವುದು ಹೇಗೆ?

Plasma Sent For COVID Patient From Bengaluru To Srinagar

ಇಂಡಿಗೋ ಕಾರ್ಗೊ ವಿಮಾನದ ಮೂಲಕ ಪ್ಲಾಸ್ಮಾವನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಕಳಿಸಲಾಯಿತು. ದೆಹಲಿ ತಲುಪಿದ ವಿಮಾನ, ಅಲ್ಲಿಂದ ಶ್ರೀನಗರಕ್ಕೆ ಪ್ಲಾಸ್ಮಾವನ್ನು ತಲುಪಿಸಿದೆ.

ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಯಶಸ್ವಿಯಾದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಯಶಸ್ವಿಯಾದ

"ಸೋಮವಾರ ಪ್ಮಾಸ್ಮಾ ಅಗತ್ಯವಿದೆ ಎಂಬ ಕರೆ ಬಂದಿತ್ತು. ರೋಗಿಗೆ ಹೊಂದಾಣಿಕೆಯಾಗುವ ಪ್ಲಾಸ್ಮಾವನ್ನು ಗುರುತಿಸಿ ಇಂಡಿಗೋ ತಂಡವನ್ನು ಸಂಪರ್ಕಿಸಿದೆವು. ಮಂಗಳವಾರ ಪ್ಲಾಸ್ಮಾವನ್ನು ಕಳಿಸಲಾಗಿದ್ದು, ಸುರಕ್ಷಿತವಾಗಿ ಶ್ರೀನಗರಕ್ಕೆ ಅದು ತಲುಪಿದೆ" ಎಂದು ವೈದ್ಯರು ಹೇಳಿದ್ದಾರೆ.

English summary
For a Covid 19 patient plasma sent to Srinagar from Bengaluru. Indigo cargo service successfully carried plasma to Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X