ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಜಿ ವಿದ್ಯಾರ್ಥಿಗಳಿಗೆ ಗಿಡ ನೆಡುವುದು ಕಡ್ಡಾಯ- ಬೆಂಗಳೂರು ವಿವಿ

|
Google Oneindia Kannada News

ಬೆಂಗಳೂರು, ಜೂನ್ 18: ಬೆಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹೊಸ ಆದೇಶವೊಂದನ್ನು ನೀಡಿದೆ. ವಿದ್ಯಾರ್ಥಿಗಳು ವಿವಿ ಆವರಣದಲ್ಲಿ ಗಿಡ ನೆಡುವುದನ್ನು ಕಡ್ಡಾಯ ಮಾಡಿದೆ.

ಪಿಜಿ ಕೋರ್ಟ್‌ಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ಗಿಡ ನೆಟ್ಟು, ಅದನ್ನು ಪೋಷಣೆ ಮಾಡಬೇಕಿದೆ. ಈ ನಿಯಮ 2020-2021 ಸಾಲಿನಿಂದ ಜಾರಿಗೆ ಬರಲಿದೆ. ವಿದ್ಯಾರ್ಥಿಗಳು ಒಮ್ಮೆ ಗಿಡ ನೆಟ್ಟು ತಮ್ಮ ಕೆಲಸ ಮುಗಿಯಿತು ಎಂದು ಸುಮ್ಮನಾಗದೆ, ಅದನ್ನು ಸರಿಯಾದ ರೀತಿ ನೋಡಕೊಳ್ಳಬೇಕಿದೆ.

ಮೈಸೂರು ವಿವಿಗೆ ಕೇಂದ್ರ ಸರ್ಕಾರದಿಂದ NIRF ಪ್ರಶಸ್ತಿಮೈಸೂರು ವಿವಿಗೆ ಕೇಂದ್ರ ಸರ್ಕಾರದಿಂದ NIRF ಪ್ರಶಸ್ತಿ

ವಿದ್ಯಾರ್ಥಿಗಳು ಗಿಡ ನೆಡುವುದರಿಂದ ವಿಶ್ವವಿದ್ಯಾನಿಲಯ ಆವರಣ ಇನ್ನಷ್ಟು ಗಿಡ, ಮರಗಳಿಂದ ಕಂಗೊಳಿಸಲಿದೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ 45ಕ್ಕೂ ಹೆಚ್ಚಿನ ಪಿಜಿ ಕೋರ್ಸ್‌ಗಳಿದ್ದು, ಪ್ರತಿ ವರ್ಷ ಸುಮಾರು 2500 ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಈ ವಿದ್ಯಾರ್ಥಿಗಳೆಲ್ಲ ಒಂದೊಂದು ಗಿಡ ನೆಟ್ಟರೆ ವಿವಿ ಆವರಣದಲ್ಲಿ ಹಸಿರು ತುಂಬಲಿದೆ.

Planting Is Compulsory For PG Students Says Bengaluru University

ವಿದ್ಯಾರ್ಥಿಗಳಿಗೆ ಗಿಡ ನೀಡಿ ಬೆಳಸಲು ಸೂಚಿಸಬೇಕೆಂದು, ಸಿಂಡಿಕೇಟ್‌ ಸಭೆಯಲ್ಲಿ ಕೆಲವು ಸದಸ್ಯರು ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಭೆ ಒಪ್ಪಿಗೆ ನೀಡಿತ್ತು. ಅದರಂತೆ, ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯಿಂದ ಗಿಡವನ್ನು ವಿವಿ ಕೊಂಡುಕೊಂಡು ವಿದ್ಯಾರ್ಥಿಗಳಿಗೆ ನೀಡಲಿದೆ.

ಜ್ಞಾನಭಾರತಿ ಆವರಣ 1,200 ಎಕರೆ ಪ್ರದೇಶ ಇತ್ತು. ಆದರೆ, ಒತ್ತುವರಿ ಬಳಿಕ 945 ಎಕರೆ ಪ್ರದೇಶಕ್ಕೆ ಇಳಿಕೆಯಾಗಿದೆ. ಸದ್ಯ ಕ್ಯಾಂಪಸ್​ನಲ್ಲಿ ಶ್ರೀಗಂಧ, ನೀಲಗಿರಿ, ಹೊಂಗೆ, ಹುಣಸೆಹಣ್ಣಿನ, ತೇಗ ಮರಗಳಿವೆ.

English summary
Planting is compulsory for pg students says Bengaluru university. The university will distribute plants to students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X