ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಶಾಸಕ ಎಸ್. ಆರ್‌. ವಿಶ್ವನಾಥ್ ಕೊಲೆಗೆ ಸಂಚು: ಒಬ್ಬನನ್ನು ಬಂಧಿಸಿದ ಸಿಸಿಬಿ ಪೊಲೀಸರು

|
Google Oneindia Kannada News

ಬೆಂಗಳೂರು, ಡಿ. 01: ಯಲಹಂಕ ಕ್ಷೇತ್ರದ ಶಾಸಕ ಎಸ್. ಆರ್‌. ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬಿಡಿಎ ಅಧ್ಯಕ್ಷ ಆಗಿರುವ ಎಸ್. ಆರ್. ವಿಶ್ವನಾಥ್ ಅವರನ್ನು ಮುಗಿಸುವ ಬಗ್ಗೆ ಕಾಂಗ್ರೆಸ್ ಮುಖಂಡನೊಬ್ಬ ಮಾತುಕತೆ ನಡೆಸಿದ್ದಾನೆ. ಎಸ್. ಆರ್. ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿರುವ ಪ್ರಕರಣ ಸಂಬಂಧ ಕುಳ್ಳದೇವರಾಜ್ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡ ಹಾಗೂ ಪರಾಜಿತ ಅಭ್ಯರ್ಥಿ ಗೋಪಾಲಕೃಷ್ಣ ಅವರನ್ನು ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇಡೀ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿದೆ. ಎಸ್. ಆರ್. ವಿಶ್ವನಾಥ್ ಅವರನ್ನು ಮುಗಿಸಲು ಸಂಚು ರೂಪಿಸಲಾಗಿದೆಯೋ ? ಇಲ್ಲವೇ ದೇವರಾಜ್ ಅವರ ರಾಜಕೀಯ ಭವಿಷ್ಯ ಮುಗಿಸಲು ರಹಸ್ಯ ಕಾರ್ಯಾಚರಣೆ ಅಸ್ತ್ರ ಬಳಸಿದರೋ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕುಳ್ಳ ದೇವರಾಜ್ ಬಂಧನ:

ಇನ್ನು ಎಸ್. ಆರ್. ವಿಶ್ವನಾಥ್ ಕೊಲೆ ಬಗ್ಗೆ ಮಾತನಾಡಿರುವ ಗೋಪಾಲಕೃಷ್ಣ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿರುವ ಕುಳ್ಳ ದೇವರಾಜ್ ನನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸ್ ಅಧಿಕಾರಿಯ ಹೆಸರೂ ಸಹ ಕೇಳಿ ಬರುತ್ತಿದೆ. ಗೋಪಾಲಕೃಷ್ಣನನ್ನು ಪುಸಲಾಯಿಸಿ ವಿಡಿಯೋ ಮಾಡಿಕೊಂಡಿದ್ದು, ಯಾರು ಯಾರನ್ನು ಮುಗಿಸಲು ಪ್ಲಾನ್ ಮಾಡಿದರು ಎಂಬುದು ಸಿಸಿಬಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಕುಳ್ಳ ದೇವರಾಜ್ ನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಅತಿ ಶೀಘ್ರದಲ್ಲಿಯೇ ಪ್ರಕರಣದ ವೃತ್ತಾಂತ ಬಯಲಿಗೆ ಬರಲಿದೆ.

 Planning to Kill Yelahanka MLA SR Vishwanath; CCB Arrested Suspected for Enquiry

Recommended Video

ಈ ವೈರಸ್ ಅಂದ್ರೆ ಸಾಮಾನ್ಯ ಅಲ್ಲ!! | Oneindia Kannada

ಎಸ್. ಆರ್. ವಿಶ್ವನಾಥ್ ಅವರನ್ನು ಮುಗಿಸುವ ಬಗ್ಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಮಾತನಾಡಿದ್ದಾನೆ. ಅದನ್ನು ರೆಕಾರ್ಡ್ ಮಾಡಿಕೊಂಡಿರುವುದು ಎಸ್.ಆರ್. ವಿಶ್ವನಾಥ್ ಆಪ್ತ ಕುಳ್ಳ ದೇವರಾಜ್, ಎಸ್. ಆರ್. ವಿಶ್ವನಾಥ್ ಗೆ ಒಳ್ಳೆಯವನಾಗಲು ಕುಳ್ಳ ದೇವರಾಜ್ ಪ್ಲಾನ್ ಮಾಡಿ ಸ್ಟಿಂಗ್ ಮಾಡಿದನೇ? ಇಲ್ಲವೇ ಗೋಪಾಲಕೃಷ್ಣ ರಾಜಕೀಯ ಭವಿಷ್ಯ ಮುಗಿಸಲು ರಹಸ್ಯ ಕಾರ್ಯಾಚರಣೆ ಅಸ್ತ್ರ ಬಳಕೆ ಮಾಡಲಾಯಿತೋ ಎಂಬುದು ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

English summary
Planning to Kill Yelahanka MLA and BDA chairman SR Vishwanath; CCB Arrested Kulladevaraj and Congress leader Gopalakrishna in SR Vishwanath Murder Plan Case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X