ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5,000 ಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ಗಳ ಸ್ಥಾಪನೆಗೆ ಕ್ರಮ

|
Google Oneindia Kannada News

ಬೆಂಗಳೂರು, ಜೂನ್ 26: ಹವಾಮಾನ ಬದಲಾವಣೆ ಹಾಗೂ ಇತರೆ ಕಾರಣಗಳಿಂದ ವಿಷಮಶೀತ ಜ್ವರ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಅವರಲ್ಲಿ ಬಹುತೇಕರಿಗೆ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ ಹಜ್‌ ಭವನ ಮತ್ತು ಖಾಸಗಿ ಆಶ್ರಮ ಆಸ್ಪತ್ರೆಯಲ್ಲಿ ಒಂದು ಸಾವಿರ ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಮಹಾನಗರಪಾಲಿಕೆ ಆಯುಕ್ತರು 7,300 ಅಡಿ ವಿಸ್ತೀಣ೯ದ ಜಾಗಗಳನ್ನು ಗುರುತಿಸಿದ್ದಾರೆ. ಇದು ಆಷಾಡ ಮಾಸ ಆಗಿರುವುದರಿಂದ ಕಲ್ಯಾಣ ಮಂಟಪ ಹಾಗೂ ಇತರೆ ದೊಡ್ಡ ಕಟ್ಟಡಗಳನ್ನು ಗುರುತಿಸಿ ಸಿದ್ಧ ಮಾಡಿಕೊಳ್ಳಲು ವಿಡಿಯೋ ಸಂವಾದ ಸಂದಭ೯ದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ 3 ದಿನ ಸೀಲ್ ಡೌನ್ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ 3 ದಿನ ಸೀಲ್ ಡೌನ್

ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ವೈದ್ಯರ ಕೊರತೆ ನೀಗಿಸಿಕೊಳ್ಳಲು ಆಯುಷ್‌ ವೈದ್ಯರು, ಸಕಾ೯ರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಿಜಿ ವಿದ್ಯಾಥಿ೯ಗಳನ್ನು ಬಳಸಿಕೊಳ್ಳಬೇಕು. ಎಲ್ಲಿಯೂ ಗೊಂದಲಗಳಿಗೆ ಅವಕಾಶ ನೀಡದಂತೆ ಜಾಗ್ರತೆವಹಿಸಿ ಎಂದರು.

Planning For More Than 5,000 beds Of Covid Care Centre:Minister K Sudhakar

ಭಯಬಿಡಿ! ಬೆಂಗಳೂರಿನಲ್ಲಿ ಮರಣ ಪ್ರಮಾಣ ಕಡಿಮೆ: ಸುಧಾಕರ್‌ ಭಯಬಿಡಿ! ಬೆಂಗಳೂರಿನಲ್ಲಿ ಮರಣ ಪ್ರಮಾಣ ಕಡಿಮೆ: ಸುಧಾಕರ್‌

ಆರಂಭದಲ್ಲಿ ತಾವು ಜಾರಿಗೊಳಿಸಿದ್ದ ಪಾರದಶ೯ಕ ವ್ಯವಸ್ಥೆಯನ್ನೇ ಪುನಃ ಅಳವಡಿಸಿಕೊಂಡು ಮಾಧ್ಯಮಗಳಿಗೆ ಮಾಹಿತಿ ನೀಡಬೇಕು. ಅದು ತಪ್ಪಿದ್ದರಿಂದಲೇ ಮಾಹಿತಿ ಕೊರತೆಯಿಂದ ಮಾಧ್ಯಮಗಳಲ್ಲಿ ವಾಸ್ತವವಲ್ಲದ ವರದಿಗಳು ಬಿತ್ತರವಾಗುತ್ತವೆ. ಅಂತಹ ತಪ್ಪುಗಳಿಗೆ ಆಸ್ಪದ ನೀಡಬೇಡಿ ಎಂದು ಎಚ್ಚರಿಸಿದರು.

English summary
Karnataka Medical education minister K sudhakar said Measures to establish more than 5,000 beds of Kovidi care centers in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X