ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಂದಿಬೆಟ್ಟದಲ್ಲಿ ರಸ್ತೆ ಒಂದು ಬಿಟ್ಟು, ಉಳಿದ ಅಭಿವೃದ್ಧಿಯೇ ಶೂನ್ಯ

|
Google Oneindia Kannada News

ಬೆಂಗಳೂರು, ಏ.17: ಸರ್ಕಾರಿ ಇಲಾಖೆಗಳ ಗೊಂದಲದಲ್ಲಿ ನಂದಿಬೆಟ್ಟದ ಅಭಿವೃದ್ಧಿ ಕುಂಠಿತವಾಗಿದೆ.

ನಂದಿಬೆಟ್ಟದಲ್ಲಿ ಎಂಟ್ರಿ ಪ್ಲಾಜಾ, ಪ್ರವಾಸಿಗರಿಗೆ ಮಾಹಿತಿ ಕೇಂದ್ರ, ಆಹಾರ ಕೇಂದ್ರಗಳನ್ನು ತೆರೆಯುವ ಯೋಜನೆ ಆರಂಭಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ.

ನಂದಿ ಬೆಟ್ಟದಿಂದ ಕಾಲು ಜಾರಿ ಕಂದಕಕ್ಕೆ ಬಿದ್ದು ಮಹಿಳೆ ಸಾವು ನಂದಿ ಬೆಟ್ಟದಿಂದ ಕಾಲು ಜಾರಿ ಕಂದಕಕ್ಕೆ ಬಿದ್ದು ಮಹಿಳೆ ಸಾವು

ದಿನನಿತ್ಯ ಸಾವಿರಾರು ಮಂದಿ ನಂದಿ ಬೆಟ್ಟಕ್ಕೆ ಭೇಟಿ ನೀಡುತ್ತಾರೆ. ಅಲ್ಲಿರುವ ಫುಡ್‌ಕೋರ್ಟ್‌ಗಳಲ್ಲಿ ನಗದು ನೀಡಿಯೇ ಆಹಾರ ಪಡೆಯಬೇಕಾಗಿದೆ, ಪೇಟಿಎಂ, ಗೂಗಲ್ ಪೇ, ಕ್ರೆಡಿಟ್, ಡೆಬಿಟ್ ಕಾರ್ಡ್ ಯಾವುದೂ ಉಪಯೋಗಕ್ಕೆ ಬರುವುದಿಲ್ಲ.

Plan to develop Nandi Hills sees little progress

ನಂದಿಬೆಟ್ಟಕ್ಕೆ ಬರುವ ರಸ್ತೆಯನ್ನು ಮಾತ್ರ ರಿಪೇರಿ ಮಾಡಿದ್ದಾರೆಯೇ ವಿನಃ , ನಂದಿಬೆಟ್ಟದೊಳಗೆ ಯಾವುದೇ ಅಭಿವೃದ್ಧಿಯಾಗಿಲ್ಲ. ಇಂಟೆಕ್ ಕೆಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಹಲವು ಬಾರಿ ವರದಿ ಸಲ್ಲಿಕೆ ಮಾಡಿದೆ. ಇದುವರೆಗೂ ಅನುಮತಿ ದೊರೆತಿಲ್ಲ. ಯೋಜನೆ 2017ರಲ್ಲೇ ಆರಂಭವಾಗಿತ್ತು.

ಪ್ರವಾಸೋದ್ಯಮ, ತೋಟಗಾರಿಕೆ, ಪುರಾತತ್ವ ಇಲಾಖೆ ಈ ಮೂರು ಇಲಾಖೆ ವ್ಯಾಪ್ತಿಗೆ ನಂದಿ ಬೆಟ್ಟ ಸೇರುತ್ತದೆ. ಆ ಇಲಾಖೆಯ ನಡುವೆ ಹೊಂದಾಣಿಕೆ ಕೊರತೆ ಇರುವುದರಿಂದ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ ಎನ್ನುವುದು ಕೆಲವರ ವಾದವಾಗಿದೆ.ಎಲ್ಲವೂ ಇದೆ ಆದರೆ ನಿರ್ವಹಣೆ ಸಮರ್ಪಕವಾಗಿಲ್ಲ, ಚೆಂದದ ಗಿಡಗಳನ್ನು ನೆಟ್ಟಿದ್ದಾರೆ ಆದರೆ ನಿರ್ವಹಣೆ, ನೀರು ಇಲ್ಲದೆ ಸತ್ತು ಹೋಗಿವೆ. ಎಲ್ಲೆಲ್ಲೂ ಪ್ಲಾಸ್ಟಿಕ್ ಕವರ್‌ಗಳು, ಬಾಟಲಿಗಳೇ ಬಿದ್ದಿವೆ.ನಂದಿಬೆಟ್ಟಕ್ಕೆ ಬರುವ ರಸ್ತೆಯನ್ನು ಮಾತ್ರ ರಿಪೇರಿ ಮಾಡಿದ್ದಾರೆಯೇ ವಿನಃ , ನಂದಿಬೆಟ್ಟದೊಳಗೆ ಯಾವುದೇ ಅಭಿವೃದ್ಧಿಯಾಗಿಲ್ಲ.

ನಂದಿ ಬೆಟ್ಟ: 32 ವರ್ಷಗಳ ನಂತರ ರೋಪ್ ವೇ ಯೋಜನೆಗೆ ಮರುಜೀವ ನಂದಿ ಬೆಟ್ಟ: 32 ವರ್ಷಗಳ ನಂತರ ರೋಪ್ ವೇ ಯೋಜನೆಗೆ ಮರುಜೀವ

ನಂದಿ ಬೆಟ್ಟವು ಡೆಸ್ಟಿನೇಷನ್ ಡೆವಲಾಪ್‌ಮೆಂಟ್ ಯೋಜನೆಯಡಿ ಅಭಿವೃದ್ಧಿಗೊಳ್ಳುತ್ತಿದೆ. ಮಾಸ್ಟರ್ ಪ್ಲಾನ್ ಪ್ರಕಾರ ಕಾಯುವ ಹಾಗೂ ಟಿಕೆಟ್ ನೀಡುವ ಎಂಟ್ರಿ ಪ್ಲಾಜಾ, ಬಸ್ ನಿಲ್ದಾಣ, ಆಹಾರ ಕೇಂದ್ರ ನಿರ್ಮಾಣ ಕುರಿತಂತೆ ಪ್ರವಾಸೋಸ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

Plan to develop Nandi Hills sees little progress

ಡೆಸ್ಟಿನೇಷನ್ ಡೆವಲಾಪ್ ಮೆಂಟ್ ಯೋಜನೆಯಲ್ಲಿ ಕರ್ನಾಟಕದ 20 ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.ಅದರಲ್ಲಿ ನಂದಿ ಬೆಟ್ಟ, ಬೀದರ್ ಕೋಟೆ, ಕಲಬುರಗಿ ಕೋಟೆ, ಸನ್ನತಿ, ವಿಜಯಪುರ, ಬಾದಾಮಿ-ಐಹೊಳೆ-ಪಟ್ಟದಕಲ್ಲು, ಹಂಪಿ-ಆನೇಗುಂಡಿ, ಚಿತ್ರದುರ್ಗ ಕೋಟೆ, ಶ್ರೀರಂಗಪಟ್ಟಣ, ಮೇಲುಕೋಟೆ, ಶ್ರವಣಬೆಳಗೊಳ, ದೇವನಹಳ್ಳಿ ಕೋಟೆ ಸೇರಿದಂತೆ ಇನ್ನಿತರೆ ಪ್ರದೇಶಗಳ ಅಭಿವೃದ್ಧಿ ಮಾಡಬೇಕಿದೆ.

English summary
Plans to construct an entry plaza, a tourist interpretation centre and food plaza and kick off historical and eco tours at Nandi Hills have been in limbo for years now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X