ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಪಿಎಲ್ ಪಡಿತರ ಅಕ್ಕಿ 8ಕೆಜಿ ವರೆಗೆ ಹೆಚ್ಚಳ: ಸಿದ್ದು

By Ananthanag
|
Google Oneindia Kannada News

ಬೆಂಗಳೂರು, ಫೆಬ್ರವರಿ 8: ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಸಿಹಿಸುದ್ದಿ, ಬಿಪಿಎಲ್ ಕಾರ್ಡ್ ದಾರರಿಗೆ ನೀಡುತ್ತಿರುವ ಅಕ್ಕಿಯ ಪ್ರಮಾಣವನ್ನು ಯೂನಿಟ್ ಗೆ 8 ಕೆಜಿವರೆಗೆ ಏರಿಕೆ ಮಾಡುವುದಾಗಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಅಕ್ಕಿ ಪ್ರಮಾಣ ಯೂನಿಟ್ ಗೆ 8 ಕೆ.ಜಿ. ವರೆಗೆ ಏರಿಕೆಯಾಗುವುದು ಏಪ್ರಿಲ್ ನಿಂದಲೇ ಜಾರಿಯಾಗಲಿದೆ. ಆಧಾರ್ ಲಿಂಕ್ ಇಲ್ಲದ ಬಿಪಿಎಲ್ ಕಾರ್ಡ್ ದಾರರಿಗೆ ಎರಡು ತಿಂಗಳವರೆಗೆ ಪಡಿತರ ಧಾನ್ಯ ವಿತರಣೆ ಯಾಗಲಿದೆ. ಗ್ಯಾಸ್ ಸಂಪರ್ಕ ಇದ್ದವರಿಗೂ ಸೀಮೆಎಣ್ಣೆ ನೀಡಲು ನಿರ್ಧಾರಿಸಲಾಗಿದೆ. ಕ್ಷೀರಭಾಗ್ಯದಲ್ಲಿ ಶಾಲಾ ಮಕ್ಕಳಿಗೆ 5 ದಿನವೂ ಹಾಲು ವಿತರಿಸಲು ತೀರ್ಮಾನಿಸಲಾಗಿದೆ ಎಂದು ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.[ಬಿಪಿಎಲ್ ಕಾರ್ಡಿಗೆ ಹೆಸರು ಕಾಳು, ಮುಕ್ತ ಮಾರುಕಟ್ಟೆಗೆ ಬಿಳಿ ಸೀಮೆಎಣ್ಣೆ]

plan of annabhagya distribute rice 8kg subsidized rate for BPL ration card holder

ಅಲ್ಲದೆ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳ ಬಗ್ಗೆಯೂ ಚರ್ಚೆ ನಡೆಸಿದರು. ಬರಪರಿಹಾರ ಕಾಮಗಾರಿಗಳು ತೃಪ್ತಿದಾಯಕವಾಗಿಲ್ಲ ಹೆಚ್ಚಿನ ಅನುದಾನ ಕೇಂದ್ರದಿಂದ ಒದಗಿ ಬಂದಿದ್ದರೆ ರೈತರು ಮತ್ತು ಜಾನುವಾರುಗಳಿಗೆ ಪರಿಹಾರ ಕಲ್ಪಿಸಬಹುದಾಗಿತ್ತು ಎಂದು ಶಾಸಕರು ತಿಳಿಸಿದರು.[ಬಿಪಿಎಲ್ ಕುಟುಂಬಕ್ಕೆ ಸಬ್ಸಿಡಿ ದರದಲ್ಲಿ ತಾಳೆಎಣ್ಣೆ ವಿತರಣೆ]

ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗಾಗಿ ಮತ್ತು ಕುಡಿಯುವ ನೀರಿಗಾಗಿ ಕೊರೆಸಲಾದ ಬೋರ್ವೆಲ್ ಗಳಿಗೆ ಈ ವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಕೆಲ ಶಾಸಕರು ಅಸಮಾಧಾನ ಹೊರಹಾಕಿದರು. ಇನ್ನು ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ ಶೇ.50 ರಷ್ಟು ಶಾಸಕರು ಗೈರು ಹಾಜರಿರುವುದು ಕಂಡು ಬಂತು.

English summary
Chief Minister siddaramaiah announced in Congress Legislative Assembly, distribute the Rice 3Kg to 8kg subsidized rate for BPL ration card holders in plan of annabhagya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X