ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಹನ ಸರ್ವಿಸಿಂಗ್ ಇನ್ನು ಸುಲಭ, ಪಿಟ್ ಸ್ಟಾಪ್ ಆಪ್ ಇದೆಯಲ್ಲ

|
Google Oneindia Kannada News

ಭಾರತದ ಮೊಟ್ಟಮೊದಲ ಸ್ವತಂತ್ರವಾದಾ, ಮನೆಬಾಗಿಲಲ್ಲೇ ಕಾರ್ ಸರ್ವೀಸ್ & ದುರಸ್ತಿ ಸೇವೆ ಒದಗಿಸುವ ಬೆಂಗಳೂರು ಮೂಲದ ಪಿಟ್‍ಸ್ಟಾಪ್ ಸಂಸ್ಥೆ ಇದೀಗ ಹೊಸ ಗ್ರಾಹಕ ಆ್ಯಪ್ ಬಿಡುಗಡೆ ಮಾಡಿದೆ. ಇದು ವಾಹನದ ಸರ್ವೀಸಿಂಗ್‍ಗೆ ಸಂಬಂಧಿಸಿದ ಎಲ್ಲ ತೊಡಕುಗಳನ್ನು ನಿವಾರಿಸುವ ಒನ್ ಸ್ಟಾಪ್ ಪರಿಹಾರ ಒದಗಿಸುತ್ತದೆ ಎಂದು ಸಂಸ್ಥೆ ಹೇಳಿದೆ.

ಕೆಲವೇ ಟ್ಯಾಪ್ ಮತ್ತು ಕ್ಲಿಕ್‍ಗಳಲ್ಲಿ ನೀವು ನಿಮ್ಮ ಸರ್ವೀಸ್ ಅಪಾಯಿಂಟ್‍ಮೆಂಟ್‍ನ ವೇಳಾಪಟ್ಟಿಯನ್ನು ನಿಗದಿಪಡಿಸಿಕೊಳ್ಳಲು, ಸರ್ವೀಸ್‍ನ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ಮತ್ತು ಸುಲಲಿತವಾಗಿ ವ್ಯಾಲೆಟ್, ಕಾರ್ಡ್, ನೆಟ್‍ಬ್ಯಾಂಕಿಂಗ್ ಮೂಲಕ ಪಾವತಿಸಲು ಅವಕಾಶವಾಗಲಿದೆ.

"ಪಿಟ್‍ಸ್ಟಾಪ್‍ನಲ್ಲಿ ನಾವು ಗ್ರಾಹಕರಿಗೆ ಸುಲಲಿತವಾಗಿ ಕಾರು ಸರ್ವೀಸ್ ಸೇವೆಯನ್ನು ಪಡೆಯುವ ವಾತಾವರಣವನ್ನು ಸೃಷ್ಟಿಸಿದ್ದು, ಇದು ಅನುಕೂಲಕರ, ಪಾರದರ್ಶಕ ಹಾಗೂ ಕಾಲಮಿತಿಯ ಸೇವೆಯಾಗಿರುತ್ತದೆ. ಪಿಟ್‍ಸ್ಟಾಪ್ ಗ್ರಾಹಕ ಆ್ಯಪ್, ನಿಮ್ಮ ವಾಹನದ ಸರ್ವೀಸಿಂಗ್‍ನಲ್ಲಿ ಎದುರಾಗುವ ತೊಡಕುಗಳೆಲ್ಲವನ್ನೂ ನಿವಾರಿಸುವ ವನ್ ಸ್ಟಾಪ್ ಪರಿಹಾರವಾಗಿದೆ. ನಾವು ನಿಮಗೆ ಅಗತ್ಯವಾದ ಎಲ್ಲ ಸೇವಾಶ್ರೇಣಿಯನ್ನು ಲಭ್ಯವಾಗುವಂತೆ ಮಾಡಿದ್ದೇವೆ. ನಿಯತವಾಗಿ ಕಾರು ಸರ್ವೀಸಿಂಗ್, ದೈನಂದಿನ ಅಗತ್ಯತೆಯಾದ ಕಾರು ವಾಷಿಂಗ್ ಅಥವಾ ಸಂಕೀರ್ಣ ದುರಸ್ತಿ ಹೀಗೆ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತಿದ್ದೇವೆ" ಎಂದು ಪಿಟ್‍ಸ್ಟಾಪ್ ಸಿಇಓ & ಸಂಸ್ಥಾಪಕ ಮಿಹಿತ್ ಮೋಹನ್ ಹೇಳಿದ್ದಾರೆ.

ಕಾರು ಸಂಬಂಧಿ ಸಮಸ್ಯೆಗಳಿಗೆ ತಕ್ಷಣ ಪರಿಹಾರ

ಕಾರು ಸಂಬಂಧಿ ಸಮಸ್ಯೆಗಳಿಗೆ ತಕ್ಷಣ ಪರಿಹಾರ

ಈ ಆ್ಯಪ್ ಎಲ್ಲ ಕಾರು ಸಂಬಂಧಿ ಸಮಸ್ಯೆಗಳನ್ನು ತಕ್ಷಣ ಪರಿಹರಿಸಲಿದ್ದು, ತುರ್ತು ಸಂದರ್ಭದಲ್ಲಿ ನೀವು ಸಿಕ್ಕಿಹಾಕಿಕೊಂಡಾಗ ಹತ್ತಿರದ ಮೆಕ್ಯಾನಿಕ್‍ಗಳನ್ನು ಹುಡುಕಲು ಅಥವಾ ರಸ್ತೆ ಬದಿಯ ನೆರವನ್ನು ಪತ್ತೆ ಮಾಡಲು ಕೂಡಾ ಇದು ನೆರವಾಗಲಿದೆ.

ವಾಹನದ ಸರ್ವೀಸ್ ಇತಿಹಾಸ ತಿಳಿಯಿರಿ

ವಾಹನದ ಸರ್ವೀಸ್ ಇತಿಹಾಸ ತಿಳಿಯಿರಿ

ನೀವು ಈ ಆ್ಯಪ್ ಮೂಲಕ ನಿಮ್ಮ ವಾಹನದ ಸರ್ವೀಸ್ ಇತಿಹಾಸವನ್ನು ನಿರ್ವಹಿಸಲು ಕೂಡಾ ಅವಕಾಶವಿದ್ದು, ಇದು ನೀವು ಕಾರು ಮರು ಮಾರಾಟ ಮಾಡುವ ವೇಳೆ ನಿಮಗೆ ನೆರವಾಗಲಿದೆ. ಹೀಗೆ ನಿಮ್ಮ ವಾಹನದ ಸರ್ವೀಸಿಂಗ್ ಇತಿಹಾಸವನ್ನು ಒಂದೆಡೆ ಇಡುವುದರಿಂದ ನಿಮಗೆ ವಿಮೆ ನವೀಕರಣ/ ಕ್ಲೇಮ್ ಸಂಸ್ಕರಣೆ, ಕಾರಿನ ಮೌಲ್ಯಮಾಪನ ಮತ್ತಿತರ ಅಂಶಗಳಿಗೆ ಪ್ರಯೋಜನವಾಗಲಿದೆ.

ರೂಪಾಯಿ 99 ಮೌಲ್ಯದ ಉಚಿತ ತಪಾಸಣೆ ಸೇವೆ

ರೂಪಾಯಿ 99 ಮೌಲ್ಯದ ಉಚಿತ ತಪಾಸಣೆ ಸೇವೆ

ಅಷ್ಟು ಮಾತ್ರವಲ್ಲ! ನೀವು ಯಾವುದೇ ಹೊಸ ವ್ಯಕ್ತಿಗೆ ಈ ಸೇವೆಯನ್ನು ಪರಿಚಯಿಸಿದರೆ ರೂಪಾಯಿ 99 ಮೌಲ್ಯದ ಉಚಿತ ತಪಾಸಣೆ ಸೇವೆಯನ್ನು ನೀವು ಪಡೆಯಬಹುದಾಗಿದೆ. ಈ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳುವಂತೆ ನೀವು ನಿಮ್ಮ ಸ್ನೇಹಿತರಿಗೆ ಸಲಹೆ ಮಾಡಿದಲ್ಲಿ, ಪ್ರತಿಯಾಗಿ ನಿಮ್ಮ ವ್ಯಾಲೆಟ್‍ನಲ್ಲಿ 100 ರೂಪಾಯಿಗಳ ಕ್ರೆಡಿಟ್ ಪಡೆಯುತ್ತೀರಿ. ಇದನ್ನು ನೀವು ನಿಮ್ಮ ವಾಃನದ ತಪಾಸಣೆಗೆ ಬಳಸಿಕೊಳ್ಳಬಹುದಾಗಿದೆ.

ಮನೆ ಬಾಗಿಲಲ್ಲೇ 12 ಸಾವಿರಕ್ಕೂ ಅಧಿಕ ಕಾರುಗಳ ಸರ್ವೀಸ್

ಮನೆ ಬಾಗಿಲಲ್ಲೇ 12 ಸಾವಿರಕ್ಕೂ ಅಧಿಕ ಕಾರುಗಳ ಸರ್ವೀಸ್

2015ರಲ್ಲಿ ಆರಂಭವಾಗಿರುವ ಪಿಟ್‍ಸ್ಟಾಪ್ ತನ್ನದೇ ನಿರೀಕ್ಷಣಾ ವ್ಯವಸ್ಥೆಯನ್ನು ಹಾಗೂ ಸೇವಾ ಕೇಂದ್ರಗಳ ಜಾಲವನ್ನು ಹೊಂದಿದೆ. ಇದು ಪಾರದರ್ಶಕ, ಮಿತ ವೆಚ್ಚದಾಯಕ ಹಾಗೂ ಅನುಕೂಲಕರ ಕರು ಸೇವಾ ಪರಿಹಾರದ ಉತ್ಕೃಷ್ಟ ಮಾದರಿಯನ್ನು ನಿಮಗೆ ಒದಗಿಸುತ್ತದೆ. ಇದುವರೆಗೆ 65 ಸಾವಿರಕ್ಕೂ ಅಧಿಕ ಕಾರುಗಳ ಸರ್ವೀಸಿಂಗ್ ಮಾಡಿರುವ ಪಿಟ್‍ಸ್ಟಾಪ್, ಕಳೆದ ಆರು ತಿಂಗಳುಗಳಲ್ಲಿ ಮನೆ ಬಾಗಿಲಲ್ಲೇ 12 ಸಾವಿರಕ್ಕೂ ಅಧಿಕ ಕಾರುಗಳ ಸರ್ವೀಸಿಂಗ್ ಪೂರೈಸಿದೆ.

English summary
Pitstop, the Bengaluru-based start-up which is India’s first independent doorstep car service & repairs provider.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X