• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂತೂ ಇಂತೂ ಸ್ವಚ್ಛವಾಯಿತು ವಿಕ್ಟೋರಿಯಾ ಆಸ್ಪತ್ರೆ

By Prasad
|

ಬೆಂಗಳೂರು, ಜ. 3 : ಬೆಂಗಳೂರಿನ ಆ ಸುಪ್ರಸಿದ್ಧ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಕಂಡಕಂಡಲ್ಲಿ ಬಿದ್ದಿದ್ದ ಕಸವನ್ನು ಹೆಕ್ಕಿದಾಗ, ನಾಲ್ಕೂವರೆ ಗಂಟೆಗಳಲ್ಲಿ ತುಂಬಿದ್ದು ಅನಾಮತ್ತು 250ಕ್ಕೂ ಹೆಚ್ಚು ದೊಡ್ಡ ಸೈಜಿನ ಬ್ಯಾಗುಗಳು! ಆರೋಗ್ಯದ ಪ್ರತೀಕವಾಗಬೇಕಾಗಿದ್ದ ಆ ಆಸ್ಪತ್ರೆಯ ಹೊರ ಆವರಣದಲ್ಲಿ ಎಷ್ಟೊಂದು ಕಸ ಬಿದ್ದಿರಬಹುದೆಂದು ಸುಮ್ನೆ ಲೆಕ್ಕ ಹಾಕಿ!

ಅದು ಕೆಆರ್ ಮಾರುಕಟ್ಟೆಯ ಬಳಿಯಿರುವ ಶತಮಾನದಷ್ಟು ಹಳೆಯದಾದ ವಿಕ್ಟೋರಿಯಾ ಆಸ್ಪತ್ರೆ (ಸ್ಥಾಪನೆ 1901). ಹೊರ ಆವರಣದಲ್ಲೇ ಇಷ್ಟೊಂದು ಕಸ ಬಿದ್ದಿರುವಾಗ, ಒಳಗಡೆ ಇನ್ನೆಷ್ಟು ಕಸವಿದ್ದೀತು, ಅದನ್ನು ಕ್ಲೀನ್ ಮಾಡಲು ಇನ್ನೆಷ್ಟು ದಿನಗಳು ಬೇಕಾದಾವು? ವಿಕ್ಟೋರಿಯಾ ರಾಣಿ ಎಷ್ಟು ತಳಮಳಗೊಂಡಿದ್ದಾಳು? ಜಸ್ಟ್ ಥಿಂಕ್! ಏನೇ ಆಗಲಿ, ಕಸದ ಗುಡ್ಡೆಯಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯನ್ನು ಸ್ವಚ್ಛಗೊಳಿಸಬೇಕೆಂದು ಮನಸು ಮಾಡಿದ ಪಿಯರಿಯನ್ ಕಂಪನಿಯ ಉದ್ಯೋಗಿಗಳಿಗೊಂದು ಸಲಾಂ.

2014ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ 'ಸ್ವಚ್ಛ ಭಾರತ' ಅಭಿಯಾನದ ಭಾಗವಾಗಿ ವಿಕ್ಟೋರಿಯಾ ಆಸ್ಪತ್ರೆಯನ್ನು ಸ್ವಚ್ಛಗೊಳಿಸಲು ಆಯ್ಕೆ ಮಾಡಿದ್ದು ಬೆಂಗಳೂರಿನ ಈ ಚಾರ್ಟರ್ಟ್ ಅಕೌಂಟೆಂಟ್ ಕಂಪನಿಯ ಸಂಸ್ಥಾಪಕ ನಿರ್ದೇಶಕ ಚೇತನ್ ವೇಣುಗೋಪಾಲ್ ಮತ್ತು 75 ಜನರಿದ್ದ ಅವರ ತಂಡ.

ವಿಕ್ಟೋರಿಯಾ ಆಸ್ಪತ್ರೆಯ ಸ್ಥಿತಿ ನೋಡಿದ್ದ ಚೇತನ್ ಸಹಜವಾಗಿ ತಮ್ಮ ಮೊದಲ ಸ್ವಚ್ಛತಾ ಅಭಿಯಾನವನ್ನು ಅಲ್ಲಿಂದಲೇ ಪ್ರಾರಂಭಿಸಿದ್ದಾರೆ. ಸ್ವಚ್ಛತಾ ಕ್ರಿಯೆಯನ್ನು ಡಿ.25 ಕ್ರಿಸ್ಮಸ್ ದಿನದಂದು ಆರಂಭಿಸುವ ಮೊದಲು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಯಾವ್ಯಾವ ಆವರಣಗಳನ್ನು ಸ್ವಚ್ಛಗೊಳಿಸಬೇಕೆಂದು ಮೊದಲೇ ನಿರ್ಧರಿಸಿದ್ದರು.

ಅದಕ್ಕೆ ತಕ್ಕಂತೆ, ಮೂಗಿಗೆ ಮಾಸ್ಕ್, ಕೈಗವಸು ಹಾಕಿಕೊಂಡು, ಕೈಯಲ್ಲಿ ಪೊರಕೆ, ಬ್ಯಾಗುಗಳನ್ನು ಹಿಡಿದುಕೊಂಡು ಶಿಸ್ತುಬದ್ಧ ಯೋಧರಂತೆ ಪಿಯರಿಯನ್ ಕಂಪನಿಯ ತಂಡ ಬೆಳಿಗ್ಗೆ 8.30ಕ್ಕೆ ಸ್ವಚ್ಛತಾ ಆಪರೇಷನ್ ಆರಂಭಿಸಿದೆ. ಆಸ್ಪತ್ರೆಯ ಕೆಲ ಸಿಬ್ಬಂದಿಗಳು ಕೈಜೋಡಿಸಿದ್ದಾರೆ. ನೋಡನೋಡುತ್ತಿದ್ದಂತೆ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ 250ಕ್ಕೂ ಹೆಚ್ಚು ಬ್ಯಾಗುಗಳು ತುಂಬಿವೆ, ವಿಕ್ಟೋರಿಯಾ ಆಸ್ಪತ್ರೆಯ ಆವರಣ ಕಂಗೊಳಿಸುತ್ತಿತ್ತು.

ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಎಲ್ಲಿ? : ಆಸ್ಪತ್ರೆಯ ಸ್ವಚ್ಛತಾ ಕೆಲಸವನ್ನು ಒಂದು ಏಜೆನ್ಸಿಗೆ ಔಟ್‌ಸೋರ್ಸ್ ಮಾಡಲಾಗಿದೆ. ಆದರೆ, ಅವರ ಕಾಂಟ್ರಾಕ್ಟ್ ಮುಗಿದಿದ್ದರೂ ಬೇರೆಯವರಿಗೆ ಇದನ್ನು ವಹಿಸಲಾಗಿಲ್ಲ. ಹೀಗಿದ್ದ ಮೇಲೆ ಆಸ್ಪತ್ರೆ ಸ್ವಚ್ಛವಿರುವುದಾದರೂ ಹೇಗೆ? ಇದ್ದ ಸಿಬ್ಬಂದಿಯೂ ಬೇಕಾಬಿಟ್ಟಿ ಕೆಲಸ ಮಾಡುತ್ತಿದ್ದರಿಂದ, ಸಹಜವಾಗಿ ಆವರಣವಿಡೀ ಅನಾರೋಗ್ಯದ ಪ್ರತೀಕದಂತಿತ್ತು.

ಜಾಗೃತಿಗೆ ಬೀದಿ ನಾಟಕ : ಆಸ್ಪತ್ರೆಯ ಆವರಣವನ್ನು ಗುಡಿಸಿ ಸ್ವಚ್ಛಗೊಳಿಸಿದ್ದು ಮಾತ್ರವಲ್ಲ, ಕಂಪನಿಯ ಉದ್ಯೋಗಿಗಳು ಬೀದಿ ನಾಟಕವಾಡಿ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸಿದ್ದು ವಿಶೇಷವಾಗಿತ್ತು. ಆವರಣದ ಜೊತೆಗೆ ಸಾರ್ವಜನಿಕರು ಬಳಸುವ ಶೌಚಾಲಯಗಳು ಕೂಡ ಆಸ್ಪತ್ರೆಯ ಕೊಳಕು ವ್ಯವಸ್ಥೆಗೆ ಕನ್ನಡಿ ಹಿಡಿದಂತಿವೆ.

ಇಷ್ಟು ಸ್ವಚ್ಛ ಮಾಡಿದ್ದು ಮಾತ್ರವಲ್ಲ, ಈ ವ್ಯವಸ್ಥೆ ಇನ್ನು ಮುಂದೆಯೂ ಆಸ್ಪತ್ರೆಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಲಾಗುವುದು, ಸ್ವಚ್ಛ ಇಟ್ಟುಕೊಳ್ಳುವವರೆಗೆ ಬಿಡುವುದಿಲ್ಲ, ಆಗ ತಾನೆ ನಾವು ಕೈಗೊಂಡ ಕಾರ್ಯಕ್ಕೆ ಸಾರ್ಥಕತೆ ಇರುತ್ತದೆ ಎಂದು ಚೇತನ್ ಅವರು ಒನ್ಇಂಡಿಯಾಗೆ ತಿಳಿಸಿದರು. ಇದಕ್ಕೆ ಸ್ಥಳೀಯ ಕಾರ್ಪೊರೇಟರ್ ಕೂಡ ಕೈಜೋಡಿಸಿದ್ದರೆಂದು ಅವರು ಹೇಳಿದರು.

ವಿಕ್ಟೋರಿಯಾ ಆಸ್ಪತ್ರೆ ಮಾತ್ರವಲ್ಲ, ನಗರದ ಹಲವಾರು ಆಸ್ಪತ್ರೆಗಳು ಅವ್ಯವಸ್ಥೆಯ ಆಗರದಂತಿವೆ. ಇವುಗಳನ್ನು ಒಂದೊಂದಾಗಿ ಸ್ವಚ್ಛಗೊಳಿಸುವ ಅಭಿಯಾನವನ್ನು, ಸಮಾಜ ಸೇವೆಗೆ ಬದ್ಧವಾಗಿರುವ ಪಿಯರಿಯನ್ ಕಂಪನಿ ಮುಂದುವರಿಸಲಿದೆ. ತಿಂಗಳ ಮೂರನೇ ಶನಿವಾರ ಇಂಥ ಅಭಿಯಾನವನ್ನು ನಗರದ ಇತರ ಆಸ್ಪತ್ರೆ, ಶಾಲೆಗಳಲ್ಲಿ ಕೈಗೊಳ್ಳಲಿದೆ ಎಂದು ಅವರು ವಿವರಿಸಿದರು.

ಈ ಸ್ವಚ್ಛತಾ ಕಾರ್ಯವನ್ನು ಆಸ್ಪತ್ರೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಶ್ಲಾಘಿಸಿದ್ದಾರೆ. ಮುಂದೆ ಕಂಪನಿಯ ಗ್ರಾಹಕರೂ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುವುದು. ನಮ್ಮ ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಮಾತ್ರವಲ್ಲ, ಇದು ನಮ್ಮ ಜವಾಬ್ದಾರಿ ಕೂಡ ಎಂದು ಚೇತನ್ ಹೆಮ್ಮೆಯಿಂದ ನುಡಿದರು. [ಸಲ್ಮಾನ್ ಖಾನ್ ಹಾಡಿ ಹೊಗಳಿದ ಮೋದಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pierian, a Chartered accountants company in Bengaluru, cleans up Victoria hospital premises by collecting 250 bags of garbage and other waste. Pierian, lead by Chetan Venugopal, has commenced this activity as part of its CSR initiatives to support Swatchh Bharat Abhiyan called by Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more