ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳಲ್ಲಿ : ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

By Mahesh
|
Google Oneindia Kannada News

ಬೆಂಗಳೂರು, ಡಿ.15: ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾಣ ನಿಲ್ದಾಣ ಎಂದು ಮರುನಾಮಕರಣ ಮಾಡಿ ಶನಿವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಟರ್ಮಿನಲ್ ಉದ್ಘಾಟನೆಯನ್ನು ಸಹ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರು ಕೇಂದ್ರ ಸರ್ಕಾರವು ನಗರಗಳ ಅಭಿವೃದ್ಧಿಗೆ ರೈಲು ಹಾಗೂ ವಿಮಾನ ಸಂಪರ್ಕಗಳನ್ನು ಕಲ್ಪಿಸುವ ದಿಸೆಯಲ್ಲಿ ಅಭಿವೃದ್ಧಿಪರವಾದ ನೀತಿಯನ್ನು ಜಾರಿಗೊಳಿಸುತ್ತಿದ್ದು, ಇದರಿಂದ ರಾಷ್ಟ್ರದ ಬಹುತೇಕ ನಗರಗಳಿಗೆ ವಾಯು ಸಂಪರ್ಕ ಕಲ್ಪಿಸಲು ಅದರಲ್ಲೂ ವಿಶೇಷವಾಗಿ ಕಡಿಮೆ ವೆಚ್ಚದಲ್ಲಿ ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡುವ ದಿಸೆಯಲ್ಲಿ ಆಲೋಚಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಷ್ಟೊಂದು ಅತ್ಯಾಕರ್ಷಕವಾದ ರೀತಿಯಲ್ಲಿ ಸಜ್ಜುಗೊಳಿಸುವ ಕೀರ್ತಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿ.ಕೆ.ರೆಡ್ಡಿಯವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.

ಕೇಂದ್ರ ಇಂಧನ ಹಾಗೂ ನೈಸರ್ಗಿಕ ಅನಿಲ ಸಚಿವ ವೀರಪ್ಪ ಮೊಯ್ಲಿ ಮಾತನಾಡಿ, 'ಇಂದು ಕನ್ನಡಿಗರಿಗೆ ಅತ್ಯಂತ ಸಂತೋಷವಾದ ದಿನ. ಕೆಂಪೇಗೌಡರು ಹುಟ್ಟಿರುವ ಐತಿಹಾಸಿಕ ಸ್ಥಳದಲ್ಲಿಯೇ ಇಂದು ಅಂತರಾಷ್ಟ್ರೀಯಮಟ್ಟದ ವಿಮಾನ ನಿಲ್ದಾಣವಾಗಿರುವುದು ಒಂದು ರೋಮಾಂಚನವಾದ ಸಂಗತಿ. ಅವರ ಒಂದು ಪ್ರತಿಮೆಯನ್ನು ವಿಮಾನ ನಿಲ್ದಾಣದ ಮುಂದೆ ನಿರ್ಮಿಸುವ ಮೂಲಕ ಅವರಿಗೆ ನಾವು ಸೂಕ್ತ ಗೌರವವನ್ನು ಸೂಚಿಸುವುದು ಉಚಿತವಾಗಿದೆ' ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, 'ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಂದು ವಿಮಾನ ನಿಲ್ದಾಣಕ್ಕೆ ಮರುನಾಮಕರಣ ಮಾಡಿರುವುದು ಐತಿಹಾಸಿಕ ದಿನವಾಗಿದ್ದು, ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿದೆ. ಇದರಿಂದ ಬಹುದಿನಗಳ ಜನರ ಒತ್ತಾಯ ಇಂದು ಈಡೇರಿದಂತಾಗಿದೆ. ಈ ವಿಮಾನ ನಿಲ್ದಾಣವಾಗಲು ತಮ್ಮ 4300 ಎಕರೆ ಜಮೀನನ್ನು ನೀಡಿದ ರೈತರ ತ್ಯಾಗವನ್ನು ನಾವು ಈ ಸಂದರ್ಭದಲ್ಲಿ ನೆನೆಯಬೇಕಾಗಿದೆ ಎಂದು ತಿಳಿಸಿದರು. ಸ್ಥಳೀಯರಿಗೆ ಆದ್ಯತೆಯ ಮೇಲೆ ಇಲ್ಲಿ ಉದ್ಯೋಗ ದೊರೆಯುವಂತಾಗಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಕೆಂಪೇಗೌಡರ ಪ್ರತಿಮೆ ಸ್ಥಾಪನೆ

ಕೆಂಪೇಗೌಡರ ಪ್ರತಿಮೆ ಸ್ಥಾಪನೆ

ಕೆಂಪೇಗೌಡರ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ ತಾವು ಈಗಾಗಲೇ ಡಾ. ಜಿ.ವಿ.ಕೆ.ರೆಡ್ಡಿಯವರೊಂದಿಗೆ ಮಾತುಕತೆ ನಡೆಸಿದ್ದು, ಒಂದು ಅತ್ಯುತ್ತಮವಾದ ಪ್ರತಿಮೆಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು. ವ್ಯಾಟ್ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಮಾಡಲಾದ ಮನವಿಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಗಣ್ಯರ ಉಪಸ್ಥಿತಿ ಕೇಂದ್ರ

ಗಣ್ಯರ ಉಪಸ್ಥಿತಿ ಕೇಂದ್ರ

ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್ , ಕೇಂದ್ರ ನಾಗರಿಕ ವಿಮಾನಯಾನ ರಾಜ್ಯ ಸಚಿವ, ಕೆ.ಸಿ.ವೇಣುಗೋಪಾಲ್, ರಾಜ್ಯದ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ, ಸಾರಿಗೆ ಸಚಿವ, ರಾಮಲಿಂಗಾರೆಡ್ಡಿ, ಗೃಹ ಸಚಿವ, ಕೆ.ಜೆ.ಜಾರ್ಜ್, ಕೃಷಿ ಸಚಿವ, ಕೃಷ್ಣಬೈರೇಗೌಡ, ಮಾಹಿತಿ ತಂತ್ರಜ್ಞಾನ ಸಚಿವ, ಎಸ್.ಆರ್.ಪಾಟೀಲ್, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ದಿನೇಶ್‌ಗುಂಡೂರಾವ್ ಮುಂತಾದವರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಡಾ: ಜಿ.ವಿ.ಕೆ.ರೆಡ್ಡಿ ಭಾಷಣ

ಡಾ: ಜಿ.ವಿ.ಕೆ.ರೆಡ್ಡಿ ಭಾಷಣ

ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧ್ಯಕ್ಷ ಡಾ: ಜಿ.ವಿ.ಕೆ.ರೆಡ್ಡಿಯವರು ಸ್ವಾಗತ ಭಾಷಣದಲ್ಲಿ
ಕರ್ನಾಟಕ ಪ್ರಗತಿಯ ಹಾದಿಯಲ್ಲಿದ್ದು ಜಾಗತಿಕ ಗುಣಮಟ್ಟದ ಮೂಲಸೌಕರ್ಯ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಬೇಕಾಗಿದೆ. ಈ ಅಗತ್ಯತೆಗಳಿಗೆ ಸ್ಪಂದಿಸುವುದಕ್ಕಿಂತಲೂ ಆಚೆಗೆ ಜಿವಿಕೆ ಸೇವೆ ಸಲ್ಲಿಸಲು ಬಯಸುತ್ತದೆ. ಈ ಪ್ರಾಂತ್ಯದ ಆರ್ಥಿಕ ಪ್ರಗತಿಯನ್ನು ಜನರ ಸಬಲೀಕರಣ, ಅವರ ಬದುಕಿನ ಉನ್ನತಿ ಮತ್ತು ತನ್ಮೂಲಕ ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ಸಲ್ಲಿಸಲು ಸಿಕ್ಕ ಅವಕಾಶ ಎಂದು ನಾವು ಭಾವಿಸುತ್ತೇವೆ. ಹೆಚ್ಚುತ್ತಿರುವ ಈ ಬೇಡಿಕೆಗಳಿಗೆ ಸ್ಪಂದಿಸಲು ನಾವು ಉನ್ನತ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸಬೇಕು. ವಿಶ್ವವನ್ನೇ ಬೆಂಗಳೂರಿಗೆ ತರಬೇಕು. ಬೆಂಗಳೂರನ್ನು ವಿಶ್ವಮಟ್ಟಕ್ಕೆಕೊಂಡೊಯ್ಯಬೇಕು ಎಂದರು.

ಸಂಸ್ಕೃತಿ, ಭಾವನೆ ಪ್ರತೀಕ

ಸಂಸ್ಕೃತಿ, ಭಾವನೆ ಪ್ರತೀಕ

ವಿಮಾನ ನಿಲ್ದಾಣ ಕೇವಲ ನಗರದ ಕನಸುಗಳನ್ನು ಪ್ರತಿಬಿಂಬಿಸುವುದಿಲ್ಲ. ಇಲ್ಲಿನ ಸಂಸ್ಕೃತಿ, ಭಾವನೆ ಮತು

ಪರಿಸರವನ್ನು ಪ್ರತಿಬಿಂಬಿಸುತ್ತದೆ. ಇದೇ ಸಂದರ್ಭದಲಿ ಹೊಸ ಟರ್ಮಿನಲ್ ಸೌಲಭ್ಯಗಳ ದೃಷ್ಟಿಯಿಂದ ವಿಶ್ವದ ಯಾವುದೇ ವಿಮಾನ ನಿಲ್ದಾಣದ ಟರ್ಮಿನಲ್ಗೆ ಸಮಾನವಾಗಿದೆ. ಹಾಲಿ ಇರುವ ಸ್ಥಳದ ದುಪ್ಪಟ್ಟು ಪ್ರದೇಶ ಇಲ್ಲಿದೆ.

ಅತಿದೊಡ್ಡ ವಿಮಾನಗಳ ನಿಲುಗಡೆಗೆ ಅವಕಾಶ ಇದೆ. ವಿಶ್ವ ಗುಣಮಟ್ಟದ ತಂತ್ರಜ್ಞಾನವನ್ನು ಅಳವಡಿಸ ಲಾಗಿದೆ. ಹಾಲಿ ಇರುವ ಸೌಲಭ್ಯಗಳ ಕ್ಷಮತೆ ಮತ್ತು ಪ್ರಯಾಣಿಕ ಸ್ನೇಹಿ ವಿನ್ಯಾಸವನ್ನು ಉಳಿಸಿಕೊಂಡು ಹೊಸ ಮೂಲಸೌಕರ್ಯವನ್ನು ನಿರ್ಮಿಸಲಾಗಿದೆ ಎಂದರು.
ಡಾ: ಜಿ.ವಿ.ಸಂಜಯ್ ರೆಡ್ಡಿ ವಂದನಾರ್ಪಣೆ

ಡಾ: ಜಿ.ವಿ.ಸಂಜಯ್ ರೆಡ್ಡಿ ವಂದನಾರ್ಪಣೆ

ಬಿಐಎಎಎಲ್ ನ ವ್ಯವಸ್ಥಾಪಕ ನಿರ್ದೇಶಕ ಜಿ.ವಿ. ಸಂಜಯ ರೆಡ್ಡಿ ಅವರು ಮಾತನಾಡಿ: ಈ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದಾಗಿನಿಂದ ನಾವು ಈ ಪ್ರಾಂತ್ಯದ ಅಭಿವೃದ್ಧಿಗಾಗಿ, ಇಲ್ಲಿನ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಉಳಿವಿಬಾಗಿ ಕರ್ನಾಟಕ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ.

ವಿಶ್ವಕ್ಕೆ ನಾವು ಪರಿಚಯಿಸಬೇಕಾದದ್ದು ಬಹಳಷ್ಟಿದೆ. ಅಲ್ಲದೆ ಸಂಪೂರ್ಣವಾಗಿ ಹೊಸತನವನ್ನು ಮೈಗೂಡಿಸಿಕೊಂಡಿರುವ ಈ ಪ್ರಾಂತ್ಯದ ಬಗ್ಗೆ ನಾವು ಅವರಲ್ಲಿ ಅರಿವು ಮೂಡಿಸಬೇಕು. ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವುದು ನಮ್ಮ ಗುರಿ. ಈ ನಿಟ್ಟಿನಲ್ಲಿ ಬೆಂಗಳೂರನ್ನು ದಕ್ಷಿಣ ಭಾರತದ ಹೆಬ್ಬಾಗಿಲನ್ನಾಗಿಸಲು ನಾವು ಇನ್ನೊಂದು ಮಹತ್ವದ ಹೆಜ್ಜೆ ಇಟ್ಟಿದ್ದೇವೆ ಎಂದರು.
ಹೊಸ ಟರ್ಮಿನಲ್

ಹೊಸ ಟರ್ಮಿನಲ್

ಬೆಂಗಳೂರಿನ ತಂತ್ರಜ್ಞಾನ ನಗರಿಯ ಹೆಸರಿಗೆ ತಕ್ಕಂತೆ ಹೊಸ ಟರ್ಮಿನಲ್ ರೂಪುಗೊಂಡಿದೆ. ಹೊಸ ವಿಐಪಿ ಟರ್ಮಿನಲ್ ನಲ್ಲಿ ನಗರ ಮತ್ತು ರಾಜ್ಯಕ್ಕೆ ಆಗಾಗ್ಗೆ ಆಗಮಿಸುವ ಅತಿ ಗಣ್ಯರಿಗೆ ಅವಕಾಶ ಕಲ್ಪಿಸಲಾಗಿದೆ.

ಹೊಸ ಕೋಡ್ ಆಫ್ ಕಾಂಟ್ಯಾಕ್ಟ್ ಸ್ಟಾಂಡ್ ಮೂಲಕ ಏರ್ ಬಸ್ ಎ380ಯಂಥ ದೊಡ್ಡ ಗಾತ್ರದ ವಿಮಾನ ನಿಲ್ದಾಣಗಳನ್ನು ಸ್ವಾಗತಿಸಲು ಸಜ್ಜಾಗಿದೆ. ಟರ್ಮಿನಲ್ ನಲ್ಲಿ 26 ಬೋರ್ಡಿಂಗ್, 15 ಏರೋಬ್ರಿಜ್ ಗಳು ಅತ್ಯಾಧುನಿಕ ಎಒಸಿಸಿ ಸೌಲಭ್ಯವಿದೆ. ವಿಮಾನನಿಲ್ದಾಣದ ನರ ಮಂಡಲದಂತೆ ಕೆಲಸ ಮಾಡಲಿದ್ದು, ಏರ್ ಲೈನ್ ಹಾಗೂ ಕನ್ಸೆಷನರೀಸ್ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ.

ಹೆಚ್ಚು ಏರೋಬ್ರಿಜ್

ಹೆಚ್ಚು ಏರೋಬ್ರಿಜ್

ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು, ಎಲ್ಲ ಬಗೆಯ ಪ್ರಯಾಣಿಕರ ಅಗತ್ಯತೆಗಳಿಗೆ ಸ್ಪಂದಿಸುವಂತೆ ಟರ್ಮಿನಲ್ ವಿನ್ಯಾಸ ರೂಪಿಸಲಾಗಿದೆ. ಕಿರು ವಾಕ್ಪಥಗಳು, ಸುಲಭ ಮತ್ತು ಅನುಕೂಲಕರ ಬಳಕೆ ಹಾಗೂ ಲೀನಿಯರ್ ಫ್ಲೋದ ಅವಶ್ಯಕತೆಗಳಿಗೆ ಸ್ಪಂದಿಸಲಾಗಿದೆ. ಹೆಚ್ಚು ಚೆಕ್ ಇನ್ ಕೌಂಟರ್ ಗಳು, ಕುಳಿತುಕೊಳ್ಳುವ ಪ್ರದೇಶ, ವಿಶಾಲವಾದ ಭದ್ರತಾ ತಪಾಸಣೆ ಪ್ರದೇಶ ಮತ್ತು ಹೆಚ್ಚು ಏರೋಬ್ರಿಜ್‍ಗಳನ್ನು ಅಳವಡಿಸಲಾಗಿದೆ.

ಉದ್ಯಾನನಗರಿ

ಉದ್ಯಾನನಗರಿ

ಬೆಂಗಳೂರಿನ ಉದ್ಯಾನನಗರಿ ಎಂಬ ಹೆಸರನ್ನು ಸಾರ್ಥಕಗೊಳಿಸುವಂತೆ ನೂರು ಎಕರೆಗೂ ಹೆಚ್ಚು ಪ್ರದೇಶದಲ್ಲಿ ಸೃಷ್ಟಿಸಲಾದ ಉದ್ಯಾನವನ ಪ್ರಯಾಣಿಕರನ್ನು ಸ್ವಾಗತಿಸಲಿದೆ. ಸ್ಥಳೀಯ ಸಸಿಗಳು, ಮರಗಳನ್ನು ಬೆಳೆಸಲಾಗಿದೆ.

ಇಂಥ ಪರಿಸರಸ್ನೇಹಿ ಕ್ರಮಗಳಿಂದ ಸಂಸ್ಥೆ ದೇಶದ ಅತಿ ಪರಿಸರಸ್ನೇಹಿ ಸೌಲಭ್ಯವೆಂಬ ಲೀಡ್ ಗೋಲ್ಡ್
ಸರ್ಟಿಫಿಕೇಟ್ ಪಡೆದಿದೆ. ಒಳಾಂಗಣದಲ್ಲಿ ಕರ್ನಾಟಕದ ಕಲೆಯ ಪ್ರತೀಕವಾದ ಮೈಸೂರು ಶೈಲಿಯ ಪೇಂಟಿಂಗ್ ಬಳಸಲಾಗಿದೆ.

ಕಲೆ, ಕಲಾವಿದರ ಬಳಕೆ

ಕಲೆ, ಕಲಾವಿದರ ಬಳಕೆ

ನಗುವಿನಿಂದ ಪ್ರೇರಣೆ ಪಡೆದ ತಾರಸಿ, ಏರೋಡೈನಾಮಿಕ್ ನ ಅಚ್ಚರಿ ಎನಿಸಿಕೊಂಡಿದೆ. ಹೊಸ ಮತ್ತು ಹಳೆಯ ಸೌಲಭ್ಯಗಳ ಸಮ್ಮಿಲನ, ಎರಡನ್ನೂ ಸಂಯೋಜಿಸಿದ ವಿನ್ಯಾಸ ಇಲ್ಲಿದೆ.

ಯೂಸುಫ್ ಅರಕ್ಕಾಳ್, ಜತಿನ್ ದಾಸ್, ಸಿದ್ದಾರ್ಥ್ ದಾಸ್ ಮತ್ತು ಸತೀಶ್ ಗುಪ್ತಾ ಅವರಂಥ ಖ್ಯಾತ ಕಲಾವಿದದರನ್ನು ಬಳಸಿಕೊಂಡು ಕಲೆಗಳನ್ನು ರೂಪಿಸಲಾಗಿದೆ. ಆಹಾರ ಮತ್ತು ಪಾನೀಯ ಹಾಗೂ ರಿಟೇಲ್ ಪರಿಕಲ್ಪನೆಗಳನ್ನು ಸ್ಥಳೀಯರಿಗೆ ಆದ್ಯತೆ ನೀಡುವಂತೆ ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ.

ಚನ್ನಪಟ್ಟಣ ಬೊಂಬೆಗಳಿಂದ ಬಿದ್ರಿ ಕಲೆಯಿಂದ ಮೈಸೂರು ರೇಷ್ಮೆ ತನಕ ಎಲ್ಲವೂ ಇಲ್ಲಿ ದೊರೆಯಲಿದೆ. ಯೋಜನೆಯ ಪ್ರತಿ ಹಂತದಲ್ಲಿಯೂ ಇತಿಹಾಸಕಾರರು ಮತ್ತು ತಜ್ಞರಿಂದ ಸಲಹೆ ಪಡೆಯಲಾಗಿದೆ.

ಬಿಐಎಎಲ್ ಸಂಸ್ಥೆ ಬಗ್ಗೆ

ಬಿಐಎಎಲ್ ಸಂಸ್ಥೆ ಬಗ್ಗೆ

ಬಿಐಎಎಎಲ್ ಸಾರ್ವಜನಿಕ ಪಾಲುದಾರಿಕೆಯ ಸಂಸ್ಥೆಯಾಗಿದ್ದು, ಬೆಂಗಳೂರಿನ ವಿಮಾನನಿಲ್ದಾಣವನ್ನುವ ಸ್ವಂತಕ್ಕೆ ಬಳಸಿ, ನಿರ್ವಹಿಸುವ ಉದ್ದೇಶವವನ್ನು ಹೊಂದಿದೆ. ಖಾಸಗಿ ಪ್ರವರ್ತಕರು ಶೇಕಡ 74ರಷ್ಟು ಪಾಲುದಾರಿಕೆಯನ್ನು (ಜಿವಿಕೆ ಶೇ 43, ಸೀಮನ್ಸ್ ಪ್ರಾಜೆಕ್ಟ್ ವೆಂಚರ್ಸ್ ಶೇ 26, ಯೂನಿಕ್ ಜೂರಿಚ್ ಶೇ 5) ಹೊಂದಿದ್ದಾರೆ. ಉಳಿದ ಶೇಕಡ 26ರಷ್ಟು ಪಾಲನ್ನು ಸರ್ಕಾರ (ಕರ್ನಾಟಕ ಕೈಗಾರಿಕಾ ಬಂಡವಾಳ ಹೂಡಿಕೆ
ಮತ್ತು ಅಭಿವೃದ್ಧಿ ನಿಗಮ ಶೇ 13 ಮತ್ತು ಭಾರತ ವಿಮಾನನಿಲ್ದಾಣ ಪ್ರಾಧಿಕಾರ ಶೇ 13)

ಜಿವಿಕೆ ಬಗ್ಗೆ

ಜಿವಿಕೆ ಬಗ್ಗೆ

ಜಿವಿಕೆ ಭಾರತದ ಉದ್ಯಮ ಸಮೂಹವಾಗಿದ್ದು ಇಂಧನ, ಸಂಪನ್ಮೂಲ, ವಿಮಾನ ನಿಲ್ದಾಣಗಳು, ಸಾರಿಗೆ,ಆತಿಥ್ಯ ಮತ್ತು ಜೀವವಿಜ್ಞಾನ ಕ್ಷೇತ್ರಗಳಲ್ಲಿ ಅಸ್ತಿತ್ವ ಹೊಂದಿದೆ. ಭಾರತದ ಮೊದಲ ಸ್ವತಂತ್ರ ವಿದ್ಯುತ್ ಸ್ಥಾವರವನ್ನು ಜಿವಿಕೆ ಸ್ಥಾಪಿಸಿದ್ದು, ಒಟ್ಟು 6000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ಸ್ಥಾವರಗಳ ನಿರ್ಮಾಣ ಮತ್ತು ಅಭಿವೃದ್ಧಿ ಹಂತದಲ್ಲಿವೆ.

ಜಿವಿಕೆ ಬಗ್ಗೆ

ಜಿವಿಕೆ ಬಗ್ಗೆ

ಪಿಪಿಪಿ ಮಾದರಿಯಲ್ಲಿ ಆರು ಪಥದ ರಸ್ತೆ ನಿರ್ಮಾಣ ಯೋಜನೆ ಕೈಗೊಂಡ ಭಾರತದ ಮೊದಲ ಕಂಪೆನಿ ಇದು. ಒಟ್ಟು 3000 ಕಿ.ಮೀ. ಎಕ್ಸ್ ಪ್ರೆಸ್ ವೇ ಯೋಜನೆಗಳು ನಿರ್ಮಾಣ ಮತ್ತು ಅಭಿವೃದ್ಧಿ ಹಂತದಲ್ಲಿವೆ. 3.3. ಶತಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಬಂಡವಾಳವನ್ನು ಈಗಾಗಲೇ ಹೂಡಿರುವ ಜಿವಿಕೆ ಭಾರತದಲ್ಲಿ 6.6 ಶತಕೋಟಿ ಅಮೆರಿಕನ್ ಡಾಲರೂ ಹೆಚ್ಚು ಮೊತ್ತದ ಯೋಜನೆಗಳನ್ನು ನಿರ್ವಹಿಸುತ್ತಿದೆ

ಕ್ವೀನ್ಸ್ ಲ್ಯಾಂಡ್ ನಲ್ಲಿರುವ ಆಸ್ಟ್ರೇಲಿಯದ ಕಲ್ಲಿದ್ದಲು ಗಣಿ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡು ಗಣಿಗಾರಿಕೆಗಾಗಿ 10 ಶತಕೋಟಿ ಡಾಲರ್ ಮೀಸಲಿರಿಸಿದೆ. ವಿಶ್ವದ ಅತಿದೊಡ್ಡ ಸಂಯುಕ್ತ ಕಲ್ಲಿದ್ದಲು ಗಣಿಗಾರಿಕೆಗೆ ಮುಂದಾಗಿದೆ.

ಹೊಸ ಸೇರ್ಪಡೆ

ಹೊಸ ಸೇರ್ಪಡೆ

* ಪ್ರಸ್ತುತ ವಿಮಾನ ನಿಲ್ದಾಣ ಪ್ರತಿ ವರ್ಷ 2 ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ.
* 10000 ಚದರ ಅಡಿ ಹೊಸ ವಿಐಪಿ ಟರ್ಮಿನಲ್, ಶಿಶು ಆರೈಕೆ ಕೊಠಡಿಗಳು
* ಪ್ರತ್ಯೇಕ ಧೂಮಪಾನ ಕೊಠಡಿ, ಪ್ರಾರ್ಥನಾ ಕೊಠಡಿ,
* 25 ರೀಟೆಲ್ ಮಳಿಗೆ, 13 ಹೊಸ ರೆಸ್ಟೋರೆಂಟ್
* 2 ಹೊಸ ಲಾಂಜ್, 1 ಡೇ ಹೋಟೆಲ್, 1 ಬಸ್ ಲಾಂಜ್ ಸೇರ್ಪಡೆಯಾಗಿದೆ.
ವಿಮಾನ ನಿಲ್ದಾಣದ ಇನ್ನಷ್ಟು ವಿಶೇಷತೆ ಬಗ್ಗೆ ಇಲ್ಲಿ ಓದಿ

English summary
The Bengaluru International Airport (BIA) was officially renamed after its founder's name as the Nadaprabhu Kempegowda International Airport on Dec 14.The flight operations at the BIA started in May 2008 and the area is owned by the GVK group, Siemens and Zurich Airport apart from the Union and the state government
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X